INDW vs WIW: ಮಿಂಚಿದ ಪೂನಂ ರಾವತ್; ಎರಡನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಜಯ

53 ರನ್​ಗಳ ಭರ್ಜರಿ ಜಯದೊಂದಿಗೆ ಭಾರತದ ಮಹಿಳೆಯರು ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ 1-1ರ ಸಮಬಲ ಸಾಧಿಸಿದೆ.

Vinay Bhat | news18-kannada
Updated:November 4, 2019, 12:39 PM IST
INDW vs WIW: ಮಿಂಚಿದ ಪೂನಂ ರಾವತ್; ಎರಡನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಜಯ
ಪೂನಂ ರಾವತ್
Vinay Bhat | news18-kannada
Updated: November 4, 2019, 12:39 PM IST
ಬೆಂಗಳೂರು (ನ. 04): ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ಭಾರತದ ವನಿತೆಯರು ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡು ಶುಭಾರಂಭ ಮಾಡುವಲ್ಲಿ ಎಡವಿದ್ದರು. ಆದರೆ, ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ 53 ರನ್​ಗಳಿಂದ ಗೆದ್ದು ಬೀಗಿದ ಮಿಥಾಲಿ ಪಡೆ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದ ಭಾರತದ ಮಹಿಳೆಯರು ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಆರಂಭದಲ್ಲೇ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. ಪ್ರಿಯಾ ಪುನಿಯಾ 5 ರನ್​ಗೆ ಔಟಾದರೆ, ರೋಡ್ರಿಗಸ್ ಸೊನ್ನೆ ಸುತ್ತಿದರು.

ಈ ಸಂದರ್ಭ ಒಂದಾದ ಪೂನಂ ರಾವತ್ ಹಾಗೂ ನಾಯಕಿ ಮಿಥಾಲಿ ರಾಜ್ ಉತ್ತಮ ಜೊತೆಯಾಟ ಆಡಿದರು. ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಈ ಜೋಡಿ 66 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ಮಿಥಾಲಿ 67 ಎಸೆತಗಳಲ್ಲಿ 40 ರನ್ ಗಳಿಸಿ ಔಟ್ ಆದರು.

ಲೈವ್ ಪಂದ್ಯ ನಡೆಯುತ್ತಿರುವಾಗಲೇ ಸಂಪೂರ್ಣ ಬಟ್ಟೆ ಬಿಚ್ಚಿದ ಹುಡುಗಿಯರು!

ಬಳಿಕ ಹರ್ಮನ್​ಪ್ರೀತ್ ಕೌರ್ ಜೊತೆಯಾದ ಪೂನಂ ಮತ್ತೊಂದು ಅಮೋಘ ಜೊತೆಯಾಟ ಆಡಿದರು. ಈ ನಡುವೆ ಪೂನಂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಜೋಡಿ 93 ರನ್​ಗಳ ಕಾಣಿಕೆ ನೀಡಿತು. ಕೌರ್ 52 ಎಸೆತಗಳಲ್ಲಿ 46 ರನ್ ಬಾರಿಸಿದರೆ, ಪೂನಂ ರಾವತ್ 128 ಎಸೆತಗಳಲ್ಲಿ 77 ರನ್ ಗಳಿಸಿದರು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಅಬ್ಬರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ 50 ಓವರ್​ಗೆ 6 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಲಷ್ಟೆ ಶಕ್ತವಾಯಿತು. ವಿಂಡೀಸ್ ಪರ ಅಲೆನೆ ಹಾಗೂ ಫ್ಲೆಟ್ಚೆರ್ ತಲಾ 2 ವಿಕೆಟ್ ಕಿತ್ತರು.

192 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ವನಿತೆಯರು ಭಾರತೀಯರ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಕ್ರೀಸ್ ಕಚ್ಚಿ ಆಡುವಲ್ಲಿ ಎಡವಿದ ಕೆರಿಬಿಯನ್ ಮಹಿಳೆಯರ ಪರ ಶೆಮೈನ್ ಕಾಂಪ್​ಬೆಲ್ಲೆ 39 ರನ್ ಗಳಿಸದ್ದೆ ಗರಿಷ್ಠ ಮೊತ್ತವಾಗಿತ್ತು. ಪರಿಣಾಮ 47.2 ಓವರ್​ನಲ್ಲೆ ವೆಸ್ಟ್​ ಇಂಡೀಸ್ 138 ರನ್​ಗೆ ಸರ್ವಪತನ ಕಂಡಿತು.
Loading...

IND vs BAN: ಮೊದಲ ಟಿ-20 ಪಂದ್ಯದಲ್ಲೇ ಭಾರತ ಸೋಲಲು ಒಂದಲ್ಲಾ-ಎರಡಲ್ಲಾ ಮೂರು ಕಾರಣಗಳು!

ಭಾರತ ಪರ ದೀಪ್ತಿ ಶರ್ಮಾ, ಪೂನಂ ಯಾದವ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಕಿತ್ತರೆ, ಗೋಸ್ವಾಮಿ ಹಾಗೂ ಶಿಖ ಪಾಂಡೆ ತಲಾ 1 ವಿಕೆಟ್ ಪಡೆದರು. 53 ರನ್​ಗಳ ಭರ್ಜರಿ ಜಯದೊಂದಿಗೆ ಭಾರತದ ಮಹಿಳೆಯರು ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ 1-1ರ ಸಮಬಲ ಸಾಧಿಸಿದೆ. ಪೂನಂ ರಾವತ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಅಂತಿಮ ಏಕದಿನ ನ. 6 ರಂದು ಅಂಟಿಗಾದಲ್ಲಿ ನಡೆಯಲಿದೆ.

First published:November 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...