Cricket World Cup 2019, WI vs PAK: ಮೊದಲ ಪಂದ್ಯದಲ್ಲೇ ಪಾಕ್​ಗೆ ಭಾರೀ ಮುಖಭಂಗ; ವಿಂಡೀಸ್​ಗೆ 7 ವಿಕೆಟ್​ಗೆ ಜಯ

ICC Cricket World Cup 2019, West Indies vs Pakistan: 106 ರನ್​​ಗಳ ಸುಲಭ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಆರಂಭದಲ್ಲೇ ಶಾಯ್ ಹೋಪ್(11) ಹಾಗೂ ಡ್ಯಾರೆನ್ ಬ್ರಾವೋ(0) ವಿಕೆಟ್ ಕಳೆದುಕೊಂಡಿತಾದರು, ಕ್ರಿಸ್ ಗೇಲ್ ಸ್ಫೋಟಕ ಆಟವಾಡಿದರು.

Vinay Bhat | news18
Updated:May 31, 2019, 6:36 PM IST
Cricket World Cup 2019, WI vs PAK: ಮೊದಲ ಪಂದ್ಯದಲ್ಲೇ ಪಾಕ್​ಗೆ ಭಾರೀ ಮುಖಭಂಗ; ವಿಂಡೀಸ್​ಗೆ 7 ವಿಕೆಟ್​ಗೆ ಜಯ
ವೆಸ್ಟ್​ ಇಂಡೀಸ್ ತಂಡ
  • News18
  • Last Updated: May 31, 2019, 6:36 PM IST
  • Share this:
ಬೆಂಗಳೂರು (ಮೇ. 31): ನಾಟಿಂಗ್​ಹ್ಯಾಮ್​​ನ ಟ್ರೆಂಟ್​​ಬ್ರಿಡ್ಜ್​​ನಲ್ಲಿ ನಡೆದ ವಿಶ್ವಕಪ್​ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್​ ಇಂಡೀಸ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕೆರಿಬಿಯನ್ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಪಾಕ್ ಹೀನಾಯ ಸೋಲುಕಂಡಿದ್ದು, ಮೊದಲ ಪಂದ್ಯದಲ್ಲೇ ಭಾರೀ ಮುಖಭಂಗ ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್​​ಗೆ ಇಳಿದ ಪಾಕ್​​ ಆರಂಭದಲ್ಲೇ ಆಘಾತ ಅನುಭವಿಸಿತು. ಶೆಲ್ಡನ್ ಕಟ್ರೆಲ್ ಬೌಲಿಂಗ್​​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಇಮಾಮ್ ಉಲ್ ಹಖ್(2) ಪೆವಿಲಿಯನ್ ಸೇರಿಕೊಂಡರು. ನಂತರದಲ್ಲಿ ರಸೆಲ್ ಅವರು ಫಕರ್ ಜಮಾನ್​(22)ರನ್ನು ಬೌಲ್ಡ್​ ಮಾಡಿದರೆ, ಹ್ಯಾರಿಸ್ ಸೊಹೇಲ್​ರನ್ನು ಕೇವಲ 8 ರನ್​ಗೆ ಔಟ್ ಮಾಡಿದರು.

ತಂಡದ ಆಪತ್ಬಾಂದವ ಬಾಬರ್ ಅಜಾಮ್ ಕೂಡ 22 ರನ್​ ಬ್ಯಾಟ್ ಕೆಳಗಿಟ್ಟಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಯಿತು. ನಾಯಕ ಸರ್ಫರಾಗ್ ಆಟ 8 ರನ್​ಗೆ ನಿಂತಿತು. ಇಮಾದ್ ವಾಸಿಮ್ 1 ರನ್​ಗೆ ಸುಸ್ತಾದರು. ಶಬಾದ್ ಖಾನ್ ಸೊನ್ನೆ ಸುತ್ತಿದರು. ಅಂತಿಮವಾಗಿ ತಂಡದ ಪರ ಬಾಬರ್ ಹಾಗೂ ಅಜಾಮ್ 22 ರನ್ ಗಳಿಸಿದ್ದೇ ಹೆಚ್ಚು. ಪರಿಣಾಮ 21.4 ಓವವರ್​​ನಲ್ಲಿ 105 ರನ್​ಗೆ ಆಲೌಟ್ ಆಗಿದೆ.

ಇದನ್ನೂ ಓದಿ: ಯೂನಿವರ್ಸಲ್ ಬಾಸ್ ಈಗ ವಿಶ್ವಕಪ್​ನಲ್ಲೂ ಬಾಸ್; ಗೇಲ್ ಮುಡಿಗೆ ಮತ್ತೊಂದು ದಾಖಲೆ

ವೆಸ್ಟ್​ ಇಂಡೀಸ್ ಪರ ಒಶಾನೆ ಥೋಮಸ್ 4 ಹಾಗೂ ಜೇಸನ್ ಹೋಲ್ಡರ್ 3 ವಿಕೆಟ್ ಕಿತ್ತು ಮಿಂಚಿದರೆ. ಆ್ಯಂಡ್ರೊ ರಸೆಲ್ 2 ಹಾಗೂ ಶೆಲ್ಡನ್ ಕಟ್ರೆಲ್ 1 ವಿಕೆಟ್ ಪಡೆದರು.

106 ರನ್​​ಗಳ ಸುಲಭ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಆರಂಭದಲ್ಲೇ ಶಾಯ್ ಹೋಪ್(11) ಹಾಗೂ ಡ್ಯಾರೆನ್ ಬ್ರಾವೋ(0) ವಿಕೆಟ್ ಕಳೆದುಕೊಂಡಿತಾದರು, ಕ್ರಿಸ್ ಗೇಲ್ ಸ್ಫೋಟಕ ಆಟವಾಡಿದರು.

ಹೊಡಿಬಡಿ ಆಟದ ಮೂಲಕ ಗಮನ ಸೆಳೆದ ಗೇಲ್ ಭರ್ಜರಿ ಅರ್ಧಶತಕ ಸಿಡಿಸಿ ಔಟ್ ಆದರು. 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್​ನೊಂದಿಗೆ ಗೇಲ್ ಆಟ 50 ರನ್​ಗೆ ನಿಂತರೆ, ನಿಕೋಲ್ ಪೂರನ್ ಅಜೇಯ 34 ರನ್ ಸಿಡಿಸಿ 13.4 ಓವರ್​ಗಳಲ್ಲೇ ವಿಂಡೀಸ್ ಗೆಲುವು ಸಾಧಿಸುವಂತೆ ಮಾಡಿದರು.7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ವೆಸ್ಟ್​ ಇಂಡೀಸ್ 2019 ವಿಶ್ವಕಪ್ ಅನ್ನು ಭರ್ಜರಿ ಆಗಿ ಆರಂಭಸಿದೆ. ಅತ್ಯುತ್ತಮ ದಾಳಿ ಸಂಘಟಿಸಿದ ಥೋಮಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

First published:May 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ