ಟೀಂ ಇಂಡಿಯಾದ ವಿಂಡೀಸ್ ಪ್ರವಾಸ; ಯಾವಾಗ?, ಸಮಯ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಏಕದಿನ ಸರಣಿಯಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳನ್ನಾಡಲಿದೆ. ಆಗಸ್ಟ್​​ 8ಕ್ಕೆ ಮೊದಲ ಏಕದಿನ ನಡೆಯಲಿದೆ.

ಟೀಂ ಇಂಡಿಯಾ

ಟೀಂ ಇಂಡಿಯಾ

  • News18
  • Last Updated :
  • Share this:
ಬೆಂಗಳೂರು (ಜು. 30): ಟೀಂ ಇಂಡಿಯಾ ನಿನ್ನೆ ರಾತ್ರಿಯೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು ಮೂರು ಟಿ-20, ಮೂರು ಏಕದಿನ ಹಾಗೂ ಎರಡು ಟೆಸ್ಟ್​ ಪಂದ್ಯವನ್ನಾಡಲಿದೆ. ಮೂರು ಮಾದರಿಯ ಕ್ರಿಕೆಟ್​ಗೂ ಭಾರತ ಬಲಿಷ್ಠ ತಂಡವನ್ನೆ ಆಯ್ಕೆ ಮಾಡಿದ್ದು, ಹೆಚ್ಚು ಯುವ ಆಟಗಾರರಿಂದಲೇ ಕೂಡಿದೆ.

ಟಿ-20 ಸರಣಿ:

ಒಟ್ಟು ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಮೊದಲ ಪಂದ್ಯ ಆಗಸ್ಟ್​ 3 ರಂದು ನಡೆದರೆ, ಎರಡನೇ ಪಂದ್ಯ ಆ. 4 ಹಾಗೂ ಮೂರನೇ ಪಂದ್ಯ ಆ. 6ಕ್ಕೆ ನಡೆಯಲಿದೆ. ಎಲ್ಲಾ ಪಂದ್ಯ ಭಾರತದ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಟಿ-20 ಸರಣಿಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವದೀಪ್ ಸೈನಿ.

ಏಕದಿನ ಸರಣಿ:

ಏಕದಿನ ಸರಣಿಯಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳನ್ನಾಡಲಿದೆ. ಆಗಸ್ಟ್​​ 8ಕ್ಕೆ ಮೊದಲ ಏಕದಿನ ಏರ್ಪಡಿಸಿದ್ದರೆ, ಆ. 11 ಹಾಗೂ ಆ. 14 ರಂದು ಕ್ರಮವಾಗಿ ಎರಡನೇ ಹಾಗೂ ಮೂರನೇ ಪಂದ್ಯ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ನಡೆಯಲಿದೆ.

ವಿದೇಶಿ ಟಿ-20 ಪಂದ್ಯದಲ್ಲಿ ಮಿಂಚುತ್ತಿರುವ ಯುವಿ; ಗಳಿಸಿದ ರನ್ ಎಷ್ಟು ಗೊತ್ತಾ?

ಏಕದಿನ ಸರಣಿಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ.

ಟೆಸ್ಟ್​ ಸರಣಿ:

ಕೊನೆಯದಾಗಿ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಈ ಪಂದ್ಯ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​ನ ಅಡಿಯಲ್ಲಿ ಬರಲಿದೆ. ಆ. 22 ರಿಂದ 26 ವರೆಗೆ ಮೊದಲ ಟೆಸ್ಟ್​ ನಡೆದರೆ, ಎರಡನೇ ಟೆಸ್ಟ್​ ಆ. 30 ರಿಂದ ಸೆ. 3 ವರೆಗೆ ಜಮೈಕಾದಲ್ಲಿ ಆಡಲಿದೆ. ಮೊದಲ ಟೆಸ್ಟ್​ ಸಂಜೆ 7 ಗಂಟೆಗೆ ಆರಂಭವಾದರೆ, ಎರಡನೇ ಟೆಸ್ಟ್​ 8 ಗಂಟೆಗೆ ಶುರುವಾಗಲಿದೆ.

ಟೆಸ್ ಸರಣಿಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಮಯಂಕ್ ಅಗರವಾಲ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಗಗನ ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಭ್ ಪಂತ್, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್.

First published: