WI vs IND: ನಾಳೆ ಭಾರತ-ವಿಂಡೀಸ್ ಮೊದಲ ಟಿ-20; ಹೊಸ ದಾಖಲೆ ಮೇಲೆ ರೋಹಿಟ್-ಕೊಹ್ಲಿ ಕಣ್ಣು

ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್ ಸದ್ಯ ಅತಿ ಹೆಚ್ಚು ಸಿಕ್ಸರ್‌ಗಳ ಸರದಾರರಾಗಿದ್ದಾರೆ. ಈ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ರೋಹಿತ್ ಹೊಂದಿದ್ದಾರೆ.

Vinay Bhat | news18
Updated:August 2, 2019, 9:57 PM IST
WI vs IND: ನಾಳೆ ಭಾರತ-ವಿಂಡೀಸ್ ಮೊದಲ ಟಿ-20; ಹೊಸ ದಾಖಲೆ ಮೇಲೆ ರೋಹಿಟ್-ಕೊಹ್ಲಿ ಕಣ್ಣು
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
  • News18
  • Last Updated: August 2, 2019, 9:57 PM IST
  • Share this:
ಬೆಂಗಳೂರು (ಆ. 02): ಟೀಂ ಇಂಡಿಯಾ ವೆಸ್ಟ್​ ಇಂಡೀಸ್ ಪ್ರವಾಸವನ್ನು ನಾಳೆಯಿಂದ ಆರಂಭಿಸಲಿದ್ದು, ಮೊದಲ ಟಿ-20 ಪಂದ್ಯ ಆಡಲಿದೆ. ಯುವ ಆಟಗಾರರಿಂದಲೇ ಭಾರತ ಕೂಡಿದ್ದು ಸಾಕಷ್ಟು ಭರವಸೆ ಇಡಲಾಗಿದೆ.

ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್ ಸದ್ಯ ಅತಿ ಹೆಚ್ಚು ಸಿಕ್ಸರ್‌ಗಳ ಸರದಾರರಾಗಿದ್ದಾರೆ. ಈ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ರೋಹಿತ್ ಹೊಂದಿದ್ದಾರೆ.

ಭಾರತೀಯ ವಧುವನ್ನು ವರಿಸಲಿರುವ ಪಾಕ್ ಕ್ರಿಕೆಟಿಗ; ಆಗಸ್ಟ್​ 20ಕ್ಕೆ ಮದುವೆ ಫಿಕ್ಸ್​

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಗೇಲ್ 58 ಪಂದ್ಯಗಳಲ್ಲಿ ಒಟ್ಟು 105 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ 94 ಪಂದ್ಯಗಳಲ್ಲಿ 102 ಸಿಕ್ಸರ್‌ಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಗೇಲ್ ದಾಖಲೆ ಮುರಿಯಲು ರೋಹಿಟ್​ಗೆ ಇನ್ನು ಕೇವಲ ನಾಲ್ಕು ಸಿಕ್ಸರ್‌ಗಳ ಅಗತ್ಯವಿದೆಯಷ್ಟೆ. ಹೀಗಾಗಿ ರೋಹಿತ್ ನೂತನ ದಾಖಲೆಯನ್ನು ಎದುರುನೋಡುತ್ತಿದ್ದಾರೆ.

ಇನ್ನು ನಾಯಕ ಕೊಹ್ಲಿ ಈ ಸರಣಿಯಲ್ಲಿ ಎರಡು ದಾಖಲೆ ನಿರ್ಮಿಸಲಿದ್ದಾರೆ. ಕೊಹ್ಲಿ ವಿಂಡೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ 33 ಇನ್ನಿಂಗ್ಸ್​ಗಳಲ್ಲಿ 1912 ರನ್ ಕಲೆಹಾಕಿದ್ದಾರೆ. ಕೊಹ್ಲಿ ಕೇವಲ 88 ರನ್ ಬಾರಿಸಿದರೆ 2000 ರನ್​ಗಳ ಗಡಿ ಮುಟ್ಟಲಿದ್ದಾರೆ. ಅಲ್ಲದೆ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 2 ಸಾವಿರ ರನ್ ಕಲೆಹಾಕಿದ ಭಾರತದ ಮೊದಲ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದರ ಜೊತೆಗೆ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಪಂದ್ಯಗಳಲ್ಲಿ ಕೊಹ್ಲಿ 6 ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ನಾಲ್ಕು ಪಂದ್ಯ ಗೆದ್ದರೆ ಎರಡು ಪಂದ್ಯ ಡ್ರಾ ಆಗಿದೆ. ವಿಂಡೀಸ್ ವಿರುದ್ಧ ಭಾರತ ಎರಡು ಟೆಸ್ಟ್​ ಪಂದ್ಯವನ್ನು ಆಡಲಿದೆ. ಈ ಎರಡೂ ಟೆಸ್ಟ್​ ಗೆದ್ದರೆ ಕೆರಿಬಿಯನ್ನರ ವಿರುದ್ಧ ಗರಿಷ್ಠ ಟೆಸ್ಟ್​ ಪಂದ್ಯ ಗೆದ್ದ ಭಾರತದ ನಾಯಕ ಕೊಹ್ಲಿ ಆಗಲಿದ್ದಾರೆ. ಸದ್ಯ ಎಂ ಎಸ್ ಧೋನಿ 8 ಟೆಸ್ಟ್​ನಲ್ಲಿ 5 ಪಂದ್ಯ ಗೆದ್ದಿದ್ದಾರೆ. ಮೂರು ಪಂದ್ಯ ಡ್ರಾ ಆಗಿದೆ. ಈ ಮೂಲಕ ಕೆರಿಬಿಯನ್ನರ ನಾಡಲ್ಲಿ ಕೊಹ್ಲಿಯಿಂದ ಮತ್ತಷ್ಟು ಹೊಸ ದಾಖಲೆಗಳು ಸೃಷ್ಟಿಯಾಗಲಿವೆ.
First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading