ಕ್ರಿಸ್ ಗೇಲ್ ಕೊನೆಯ ಆಸೆಗೆ ತಣ್ಣೀರು: ಭಾರತದ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ವಿಂಡೀಸ್ ತಂಡ ಪ್ರಕಟ

Chris Gayle: 103 ಟೆಸ್ಟ್​ ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ 7,214 ರನ್​ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 333 ರನ್​ಗಳ ಭರ್ಜರಿ ಶತಕ ಸಹ ಒಳಗೊಂಡಿದೆ.

zahir | news18-kannada
Updated:August 10, 2019, 6:08 PM IST
ಕ್ರಿಸ್ ಗೇಲ್ ಕೊನೆಯ ಆಸೆಗೆ ತಣ್ಣೀರು: ಭಾರತದ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ವಿಂಡೀಸ್ ತಂಡ ಪ್ರಕಟ
chris gayle
  • Share this:
ವಿಶ್ವ ಕ್ರಿಕೆಟ್​ನ ಬ್ಯಾಟಿಂಗ್ ದೈತ್ಯ ಕ್ರಿಸ್​ ಗೇಲ್ ಅವರ ಅಂತಾರಾಷ್ಟ್ರೀಯ​ ಕ್ರಿಕೆಟ್ ನಿವೃತ್ತಿಯ ಕೊನೆಯಾಸೆಗೆ ವೆಸ್ಟ್​ ಇಂಡೀಸ್ ಆಯ್ಕೆ ಸಮಿತಿ ತಣ್ಣೀರೆರೆಚಿದೆ. ಟೀಂ ಇಂಡಿಯಾ ವಿರುದ್ಧ ತವರಿನಲ್ಲಿ ಆಡಲಾಗುವ ಟೆಸ್ಟ್​ ಪಂದ್ಯಗಳ ಬಳಿಕ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದ ಗೇಲ್​ರನ್ನು ತಂಡದಿಂದ ಕೈ ಬಿಡಲಾಗಿದೆ.

ಆ.22 ರಿಂದ ಅಂಟಿಗುವಾದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಈ ಪಂದ್ಯಗಳಿಗಾಗಿ ಕೆರಿಬಿಯನ್ ತಂಡವನ್ನು ಪ್ರಕಟಿಸಲಾಗಿದೆ. ವಿಶ್ವಕಪ್ ವೇಳೆ ನಿವೃತ್ತಿ ಪ್ರಶ್ನೆ ಕೇಳಿ ಬಂದಾಗ ಭಾರತದ ವಿರುದ್ಧ ಸರಣಿ ಬಳಿಕ ನಿವೃತ್ತಿ ಹೊಂದುವುದಾಗಿ ಗೇಲ್ ಹೇಳಿದ್ದರು. ಆದರೆ ಇದೀಗ ಹೊಸ ಮುಖಗಳಿಗೆ ವಿಂಡೀಸ್ ತಂಡದ ಆಯ್ಕೆ ಸಮಿತಿ ಮಣೆ ಹಾಕಿದ್ದು, ಇದರಿಂದ ಯುನಿವರ್ಸಲ್ ಬಾಸ್ ನಿರಾಸೆಗೆ ಒಳಗಾಗಿದ್ದಾರೆ.

103 ಟೆಸ್ಟ್​ ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ 7,214 ರನ್​ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 333 ರನ್​ಗಳ ಭರ್ಜರಿ ಶತಕ ಸಹ ಒಳಗೊಂಡಿದೆ. ಕೊನೆಯ ಬಾರಿ 2014 ರಲ್ಲಿ ವಿಂಡೀಸ್ ಟೆಸ್ಟ್​ ತಂಡವನ್ನು ಪ್ರತಿನಿಧಿಸಿದ್ದ ಗೇಲ್ ಆ ಬಳಿಕ ಟೀಮ್​ನಿಂದ ದೂರವೇ ಉಳಿದಿದ್ದರು.

ವೆಸ್ಟ್ ಇಂಡೀಸ್ ಟೆಸ್ಟ್ ತಂಡ:

ಜೇಸನ್ ಹೋಲ್ಡರ್(ನಾಯಕ), ಕ್ರೈಗ್ ಬ್ರಾಥ್​ವೇಟ್, ಡೆರೆನ್ ಬ್ರಾವೊ, ಶಮರಹ್ ಬ್ರೂಕ್ಸ್, ಜಾನ್ ಕ್ಯಾಂಪ್​ಬೆಲ್, ರೋಸ್ಟನ್ ಚೇಸ್, ರಕೀಮ್ ಕಾರ್ನ್ ವಲ್, ಶೇನ್ ಡೌರಿಚ್, ಶನ್ನೋನ್ ಗ್ಯಾಬ್ರಿಯಲ್, ಶಿಮ್ರಾನ್ ಹೆಟ್ಮೇರ್, ಶಾಯ್ ಹೋಪ್, ಕಿಮೋ ಪೌಲ್, ಕೇಮರ್ ರೋಚ್.

 
ಇದನ್ನೂ ಓದಿ :ಸಿಎಂ ಬಿ.ಎಸ್​. ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ; ಎಷ್ಟೇ ಖರ್ಚಾದ್ರೂ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಆಶ್ವಾಸನೆ!
Loading...


 
First published:August 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...