ನನ್ನನ್ನು ಕರಿಯ ಎಂದು ಕರೆಯುತ್ತಿದ್ದರು; ಆಕ್ರೋಶ ಹೊರ ಹಾಕಿದ ಸನ್​ರೈಸರ್ಸ್​ ತಂಡದ ಆಟಗಾರ!

ಡರೆನ್​​ ಸಾಮಿ ಹೈದರಾಬಾದ್​ ತಂಡದ ಯಶಸ್ವಿ ಬೌಲರ್​​. ಸಾಕಷ್ಟು ಪಂದ್ಯಗನ್ನು ಆಡಿದ್ದಾರೆ. ತಂಡದ ಪರವಾಗಿ ಅನೇಕ ವಿಕೆಟ್​ ಕಿತ್ತಿದ್ದಾರೆ. ಆದರೆ ಪಂದ್ಯದ ವೇಳೆ ನನನ್ನು ಕರಿಯ ಎಂದು ಕರೆಯುತ್ತಿದ್ದರು ಎಂದು ಬೇಸರ ಹೊರ ಹಾಕಿದ್ದಾರೆ.

news18-kannada
Updated:June 8, 2020, 7:09 AM IST
ನನ್ನನ್ನು ಕರಿಯ ಎಂದು ಕರೆಯುತ್ತಿದ್ದರು; ಆಕ್ರೋಶ ಹೊರ ಹಾಕಿದ ಸನ್​ರೈಸರ್ಸ್​ ತಂಡದ ಆಟಗಾರ!
ಡರೆನ್​ ಸಾಮಿ
  • Share this:
ಐಪಿಎಸ್​​ ಪಂದ್ಯದ ವೇಳೆ ಸನ್​ರೈಸಸ್​​ ತಂಡದ ಪರ ಆಡುವಾಗ ತನ್ನನ್ನು ಕರಿಯ ಎಂದು ಕರೆದಿದ್ದರು ಎಂದು ವೆಸ್ಟ್​ ಇಂಡೀಸ್​​​ ತಂಡದ ಮಾಜಿ ನಾಯಕ ಡರೆನ್​​ ಸಾಮಿ ಹೇಳಿದ್ದಾರೆ.

ಹೈದರಾಬಾದ್​ ಸನ್​ರೈಸರ್ಸ್​​ ತಂಡದಲ್ಲಿ ಆಡುತ್ತಿರುವಾಗ ಕಾಲೂ ಎಂದು ಕರೆಯುತ್ತಿದ್ದರು (ಕರಿಯ).  ಅಂದು ನನಗೆ ಇದರ ಅರ್ಥ ತಿಳಿದಿರಲಿಲ್ಲ. ಆಗ ನನ್ನನ್ನು ಹಾಗೇಕೆ ಕರೆಯುತ್ತಿದ್ದರು ಎಂದು ಈಗ ತಿಳಿದಿದೆ ಎಂದಿದ್ದಾರೆ ಡರೆನ್​ ಸಾಮಿ.

ಡರೆನ್​​ ಸಾಮಿ ಹೈದರಾಬಾದ್​ ತಂಡದ ಯಶಸ್ವಿ ಬೌಲರ್​​. ಸಾಕಷ್ಟು ಪಂದ್ಯಗನ್ನು ಆಡಿದ್ದಾರೆ. ತಂಡದ ಪರವಾಗಿ ಅನೇಕ ವಿಕೆಟ್​ ಕಿತ್ತಿದ್ದಾರೆ. ಆದರೆ ಪಂದ್ಯದ ವೇಳೆ ನನನ್ನು ಕರಿಯ ಎಂದು ಕರೆಯುತ್ತಿದ್ದರು ಎಂದು ಬೇಸರ ಹೊರ ಹಾಕಿದ್ದಾರೆ.

ಶ್ರೀಲಂಕಾ ತಂಡದ ತಿಸಾರ ಅವರನ್ನು ಕಾಲೂ ಎಂದು ಕರೆಯುತ್ತಿದ್ದರು. ಅಂದು ನಾನು ಕಪ್ಪನೆಯ ಗಟ್ಟಿಮುಟ್ಟಾದ ವ್ಯಕ್ತಿ ಎಂದು ಹೇಳುತ್ತಿದ್ದಾರೆ ಅಂದುಕೊಂಡಿದ್ದೆ. ಆದರೆ ಇದರ ನಿಜವಾದ ಅರ್ಥ ತಿಳಿದು ಕೋಪ ಬಂದಿದೆ ಎಂದು ತಮ್ಮ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಆಫ್ರಿಕಾ ಮೂಲದ 46 ವರ್ಷದ ಜಾರ್ಜ್​ ಪ್ಲಾಯಿಡ್ ಎಂಬ ವ್ಯಕ್ತಿಯನ್ನು ಅಮೆರಿಕಾದ ಪೊಲೀಸ್​ ಅಧಿಕಾರಿಯೊಬ್ಬರ ಹತ್ಯೆ ಮಾಡಿದ್ದರು. ವ್ಯಕ್ತಿಯ ಕುತ್ತಿಗೆ ಭಾಗವನ್ನು ಒತ್ತಿ ಹಿಡಿದು ಸಾಯಿಸಿದ್ದರು, ಈ ಘಟನೆಗೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿದೆ.​​ ಅನೇಕರು ಬೀದಿಗಿಳಿದು ಜನಾಂಗೀಯ ಹೋರಾಟ ನಡೆಸುತ್ತಿದ್ದಾರೆ.  ಜಾರ್ಜ್​ ಪ್ಲಾಯಿಡ್ ಹತ್ಯೆಗೆ ನ್ಯಾಯ ನಿಗಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ.

Chiranjeevi Sarja Death: ತುಮಕೂರಿನ ಮಧುಗಿರಿಯಲ್ಲಿ ನಾಳೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ

ಚಿರು ಅಕಾಲಿಕ ಮರಣ ಮನಸ್ಸಿಗೆ ಘಾಸಿಯಾಗಿದೆ; ಚಾಲೆಂಜಿಂಗ್ ಸ್ಟಾರ್ ದರ್ಶನ್ 
First published: June 8, 2020, 7:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading