ಮೌನ ಮುರಿದ ಆಯ್ಕೆ ಸಮಿತಿ ಅಧ್ಯಕ್ಷ; ಪಂತ್ ಜಾಗದಲ್ಲಿ ಯಾರಿಗೆ ಸಿಗುತ್ತೆ ಸ್ಥಾನ?

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಪಂತ್ ಕೆಟ್ಟ ಹೊಡೆತಕ್ಕೆ ಬಲಿಯಾಗ ಬೇಕಾಯಿತು. ಪ್ರತಿ ಬಾರಿ ಇದೇರೀತಿ ಔಟ್ ಆಗುತ್ತಿರುವ ಪಂತ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತುವೆ.

Vinay Bhat | news18-kannada
Updated:September 21, 2019, 8:06 AM IST
ಮೌನ ಮುರಿದ ಆಯ್ಕೆ ಸಮಿತಿ ಅಧ್ಯಕ್ಷ; ಪಂತ್ ಜಾಗದಲ್ಲಿ ಯಾರಿಗೆ ಸಿಗುತ್ತೆ ಸ್ಥಾನ?
MSK Prasad reveals reason behind Rishabh Pant’s sloppy wicket keeping
  • Share this:
ಬೆಂಗಳೂರು (ಸೆ. 21): ಟೀಂ ಇಂಡಿಯಾ ಯುವ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ ರಿಷಭ್ ಪಂತ್ ಅವಕಾಶ ಕೊಟ್ಟಷ್ಟು ಕೈ ಚೆಲ್ಲುತ್ತಿದ್ದಾರೆ. ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಪಂತ್ ಪದೇಪದೇ ಎಡವುತ್ತಿದ್ದಾರೆ.

ಸದ್ಯ ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್, ಪಂತ್ ಜೊತೆಗೆ ಬ್ಯಾಕಪ್​ ವಿಕೆಟ್ ಕೀಪರ್ ಆಗಿ ಮೂವರು ಆಟಗಾರರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಪಂತ್ ಕೆಟ್ಟ ಹೊಡೆತಕ್ಕೆ ಬಲಿಯಾಗ ಬೇಕಾಯಿತು. ಪ್ರತಿ ಬಾರಿ ಇದೇರೀತಿ ಔಟ್ ಆಗುತ್ತಿರುವ ಪಂತ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತುವೆ. ಈ ಮಧ್ಯೆ ಪ್ರಸಾದ್ ಅವರು ರಿಷಭ್ ಪಂತ್ ವಿಚಾರದಲ್ಲಿ ಮತ್ತಷ್ಟು ಕಾಯಲು ಹೊರಟಿದ್ದಾರೆ.

ಆರ್​ಸಿಬಿ ತಂಡದ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ನೂತನ ಟೀಂ ನಿರ್ದೇಶಕ ಮೈಕ್ ಹೇಸನ್ ಹೇಳಿದ್ದೇನು?

'ನಾನು ಈ ಹಿಂದೆ ಹೇಳಿದಂತೆ ವಿಶ್ವಕಪ್ ಮುಗಿದ ಬಳಿಕ ರಿಷಭ್ ಪಂತ್ ಮೇಲೆ ಸಾಕಷ್ಟು ಪ್ರಯೋಗ ನಡೆಸುತ್ತಿದ್ದೇವೆ. ತಾಳ್ಮೆಯಿಂದ ಕಾಯಬೇಕು. ಅವರಲ್ಲಿ ಸಾಕಷ್ಟು ಪ್ರತಿಭೆಯಿದೆ. ಇದರ ಜೊತೆಗೆ ಮೂರು ಮಾಧರಿಯ ಕ್ರಿಕೆಟ್​ಗೆ ಹೊಂದಿಕೊಳ್ಳುವ ಮೂರು ವಿಕೆಟ್ ಕೀಪರ್​ಗಳು ನಮ್ಮ ತೆಕ್ಕೆಯಲ್ಲಿವೆ. ಅವರನ್ನು ಬ್ಯಾಕಪ್ ವಿಕೆಟ್ ಕೀಪರ್​ಗಳಾಗಿ ತಯಾರು ಮಾಡುವ ಕೆಲಸ ಪ್ರಗತಿಯಲ್ಲಿದೆ'

'ಭಾರತ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೆಎಲ್ ಭರತ್ ಟೆಸ್ಟ್​ಗೆ ಹೊಂದಿಕೊಳ್ಳುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆದರೆ, ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮೇಲೆ ನಂಬಿಕೆ ಇಟ್ಟಿದ್ದೆವೆ'

'ಇವರು ದೇಶೀಯ ಕ್ರಿಕೆಟ್​ನಲ್ಲಿ ಇನ್ನಷ್ಟು ಹೆಚ್ಚಿನ ಪಂದ್ಯ ಆಡಿ ಅನುಭವ ಪಡೆಯಬೇಕು. ಸದ್ಯಕ್ಕೆ ಇವರು ಬ್ಯಾಕಪ್ ಕೀಪರ್ ಆಗಿಯಷ್ಟೆ ಸ್ಥಾನ ಪಡೆಯುತ್ತಾರೆ' ಎಂಬುದು ಪ್ರಸಾದ್ ಅವರ ಮಾತು.
First published: September 21, 2019, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading