ಧೋನಿ ಸ್ಥಾನ ತುಂಬಲು ನಾನು ರೆಡಿ ಎಂದ ಟೀಂ ಇಂಡಿಯಾದ ಅವಕಾಶ ವಂಚಿತ ಆಟಗಾರ

ಸದ್ಯ ವಿಜಯ್ ಹಜಾರೆ ಟ್ರೋಪಿಯಲ್ಲಿ ತಮಿಳುನಾಡು ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಕಾರ್ತಿಕ್ ಇದೇ ಜವಾಬ್ದಾರಿಯನ್ನು ಟೀಂ ಇಂಡಿಯಾದಲ್ಲೂ ಮುಂದುವರೆಸುವ ಹಂಬಲ ಹೊಂದಿದ್ದಾರೆ.

Vinay Bhat | news18-kannada
Updated:October 21, 2019, 11:01 AM IST
ಧೋನಿ ಸ್ಥಾನ ತುಂಬಲು ನಾನು ರೆಡಿ ಎಂದ ಟೀಂ ಇಂಡಿಯಾದ ಅವಕಾಶ ವಂಚಿತ ಆಟಗಾರ
ಆದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯರಂತಹ ಹೊಡಿಬಡಿ ಆಟಗಾರರನ್ನು ಬೇಗನೇ ಬ್ಯಾಟಿಂಗ್​ಗೆ ಇಳಿಸಿದ್ದರ ಪರಿಣಾಮ 100 ರನ್ ಪೇರಿಸುವ ಮೊದಲೇ ಭಾರತದ 6 ವಿಕೆಟ್ ಉರುಳಲು ಕಾರಣ ಎಂದು ವಿಶ್ಲೇಷಿಸಲಾಗಿತ್ತು.
  • Share this:
ಬೆಂಗಳೂರು (ಅ. 21): ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಪ್ರತಿಭಾನ್ವಿತ ಆಟಗಾರ. ವಿಶ್ವಕಪ್​ನಲ್ಲಿ ರಿಷಭ್ ಪಂತ್ ಬದಲು ಸ್ಥಾನ ಪಡೆದುಕೊಂಡ ಕಾರ್ತಿಕ್ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲರಾದರು. ಬಳಿಕ ಕಳಪೆ ಫಾರ್ಮ್​ನಿಂದಾಗಿ ಭಾರತ ತಂಡದಿಂದ ಹೊರಬಿದ್ದು ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಪರ ಆಡುತ್ತಿದ್ದಾರೆ.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಟಿ-20 ಮೇಲೆ ಕಾರ್ತಿಕ್ ಕಣ್ಣಿಟ್ಟಿದ್ದು ಟೀಂ ಇಂಡಿಯಾಕ್ಕೆ ಮತ್ತೆ ಕಮ್​ಬ್ಯಾಕ್​ ಮಾಡುವ ವಿಶ್ವಾಸದಲ್ಲಿದ್ದಾರೆ. ವಿಶ್ವಕಪ್​ಗೆ ಇನ್ನೂ ಒಂದು ವರ್ಷವಿದೆ. ಇದರೊಳಗೆ ನಾನು ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಎಂದು ಕಾರ್ತಿಕ್ ಹೇಳಿದ್ದಾರೆ.

Well-suited to play MS Dhoni’s role: Dinesh Karthik eyes T20 World Cup
ದಿನೇಶ್ ಕಾರ್ತಿಕ್


ಮುಂದಿನ ವರ್ಷದ ವಿಶ್ವಕಪ್ ಟಿ-20 ವರೆಗೆ ಟೀಂ ಇಂಡಿಯಾದಲ್ಲಿರಲ್ಲ ಈ ಸ್ಟಾರ್ ಬೌಲರ್?

ಸದ್ಯ ವಿಜಯ್ ಹಜಾರೆ ಟ್ರೋಪಿಯಲ್ಲಿ ತಮಿಳುನಾಡು ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಕಾರ್ತಿಕ್ ಇದೇ ಜವಾಬ್ದಾರಿಯನ್ನು ಟೀಂ ಇಂಡಿಯಾದಲ್ಲೂ ಮುಂದುವರೆಸುವ ಹಂಬಲ ಹೊಂದಿದ್ದಾರೆ.

"ಟಿ-20 ಕ್ರಿಕೆಟ್ ತಂಡದಲ್ಲಿ ಎಂಎಸ್ ಧೋನಿ ಸ್ಥಾನ ತುಂಬಲು ನಾನು ತಯಾರಿದ್ದೇನೆ. ಈಗಾಗಲೇ ತಮಿಳುನಾಡು ತಂಡದ ಪರ ಹಾಗೂ ಐಪಿಎಲ್​ನಲ್ಲಿ ಕೆಕೆಆರ್ ಪರ ಈ ಕಾರ್ಯ ನಿರ್ವಹಿಸಿದ ಉತ್ತಮ ಅನುಭವವಿದೆ. ವಿಶ್ವಕಪ್ ಟಿ-20 ಯಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿಯು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ" ಎಂಬುದು ಕಾರ್ತಿಕ್ ಮಾತು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚು ಹರಿಸುತ್ತಿರುವ ಕಾರ್ತಿಕ್ ತಮಿಳುನಾಡುವ ಪರ ಆಡಿದ 6 ಪಂದ್ಯಗಳಲ್ಲಿ 349 ರನ್ ಬಾರಿಸಿದ್ದಾರೆ. 87.25 ಸರಾಸರಿಯಲ್ಲಿ 135 ಸ್ಟ್ರೈಕ್​ರೇಟ್ ಹೊಂದಿದ್ದಾರೆ.
First published:October 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading