T20 World Cup- ಭಾರತಕ್ಕೆ ಮತ್ತೆ ಆ ಸೋಲಿನ ರುಚಿ ತೋರಿಸ್ತೇವೆ: ಪಾಕ್ ವೇಗದ ಬೌಲರ್ ಹಸನ್ ಅಲಿ

ಭಾರತದ ವಿರುದ್ಧ ಯಾವುದೇ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ಗೆದ್ದಿಲ್ಲ. 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಾತ್ರ ಪಾಕ್ ಗೆಲುವಿನ ನಗೆ ಬೀರಿದೆ. ಆ ಗೆಲುವನ್ನು ಈ ಬಾರಿಯ ಟಿ20 ವಿಶ್ವಕಪ್​ನಲ್ಲೂ ಮರುಕಳಿಸುತ್ತೇವೆ ಎಂದು ಪಾಕ್ ಬೌಲರ್ ಹಸನ್ ಅಲಿ ಹೇಳಿದ್ದಾರೆ.

ಹಸನ್ ಅಲಿ

ಹಸನ್ ಅಲಿ

  • Cricketnext
  • Last Updated :
  • Share this:
    ದುಬೈ, ಸೆ. 16: ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗ್ರೂಪ್​ನಲ್ಲಿವೆ. ಐಸಿಸಿಯ ಕ್ರಿಕೆಟ್ ಟೂರ್ನಿಗಳಲ್ಲಿ ಇದೂವರೆಗೆ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿರುವುದು ಒಂದೇ ಪಂದ್ಯ ಮಾತ್ರ. ಉಳಿದೆಲ್ಲಾ ಪಂದ್ಯಗಳಲ್ಲಿ ಭಾರತವೇ ಜಯಶಾಲಿಯಾಗಿದೆ. ಏಕದಿನ ಕ್ರಿಕೆಟ್ ಆಗಲೀ, ಟಿ20 ಕ್ರಿಕೆಟ್ ಆಗಲಿ ಯಾವುದೇ ಮಾದರಿಯ ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದಿಲ್ಲ. ವಿಶ್ವಕಪ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ 12 ಬಾರಿ ಮುಖಾಮುಖಿಯಾಗಿವೆ. ಭಾರತ 11 ಬಾರಿ ಗೆದ್ದಿವೆ. ಒಂದು ಪಂದ್ಯ ಟೈ ನಲ್ಲಿ ಅಂತ್ಯವಾಗಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ ಎಲ್ಲಾ 7 ಪಂದ್ಯಗಳನ್ನೂ ಭಾರತ ಗೆದ್ದು ಬೀಗಿದೆ. ಟಿ20 ಕ್ರಿಕೆಟ್ ವಿಶ್ವಕಪ್​ನಲ್ಲಿ ಐದು ಬಾರಿ ಪಾಕಿಸ್ತಾನವನ್ನ ಎದಿರುಗೊಂಡಿರುವ ಭಾರತ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ.

    ಈ ಬಾರಿ ಇತಿಹಾಸ ಬದಲಿಸುವ ಮಾತನ್ನಾಡುತ್ತಿದ್ದಾರೆ ಪಾಕಿಸ್ತಾನದ ಈ ವೇಗದ ಬೌಲರ್ ಹಸನ್ ಅಲಿ. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಿಸಿತ್ತು. ಅದೇ ಫಲಿತಾಂಶ ಈಗ ಟಿ20 ವಿಶ್ವಕಪ್​ನಲ್ಲಿ ಪುನಾವರ್ತನೆ ಆಗಲಿದೆ ಎಂದು ಹಸನ್ ಅಲಿ ಎಚ್ಚರಿಸಿದ್ಧಾರೆ. ಅಕ್ಟೋಬರ್ 24ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯವು ನಮಗೆ ಇತಿಹಾಸದ ದಾಖಲೆಯನ್ನ ಬದಲಿಸುವ ಅವಕಾಶ ನೀಡಿದೆ ಎಮದು ಹಸನ್ ಅಲಿ ಹೇಳಿದ್ಧಾರೆ.

    “ನಾವು ಚಾಂಪಿಯನ್ಸ್ ಟ್ರೋಫಿ (2017ರಲ್ಲಿ) ಯಲ್ಲಿ ಗೆದ್ದಾಗ ನಮಗೆ ಒಳ್ಳೆಯ ಕಾಲ ಇತ್ತು. ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಮತ್ತೆ ಅವರನ್ನ ಸೋಲಿಸುತ್ತೇವೆ. ನಮ್ಮ ಅತ್ಯುತ್ತಮ ಆಟ ಆಡುತ್ತೇವೆ” ಎಂದು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಆಗಿರುವ ವಿಡಿಯೋದಲ್ಲಿ ಹಸನ್ ಮಾತನಾಡಿದ್ದಾರೆ.

    ಇದನ್ನೂ ಓದಿ: IPL 2021| ಕೋವಿಶೀಲ್ಡ್​ ಲಸಿಕೆ ಪಡೆದ ಅಭಿಮಾನಿಗಳಿಗೆ ಮಾತ್ರ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಅವಕಾಶ

    ಭಾರತದ ವಿರುದ್ಧ ಯಾವುದೇ ಕ್ರಿಕೆಟ್ ಪಂದ್ಯ ಆಡುವಾಗಲೂ ಪಾಕಿಸ್ತಾನ ತಂಡಕ್ಕೆ ಅಪರಿಮಿತ ಒತ್ತಡ ಇರುತ್ತದೆ ಎಂಬುದನ್ನು ಹಸನ್ ಅಲಿ ಒಪ್ಪಿಕೊಂಡಿದ್ಧಾರೆ. ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಳ್ಳುವುದು ಇದಕ್ಕೆ ಕಾರಣ. ಭಾರತ ತಂಡಕ್ಕೂ ಇದೇ ಪರಿಸ್ಥಿತಿ ಇದೆ ಎಂದು ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಯುಎಇ ದೇಶದ ಕ್ರಿಕೆಟ್ ಪಿಚ್​ಗಳು ಸಾಮಾನ್ಯವಾಗಿ ಸ್ಪಿನ್ನರ್ಸ್​ಗೆ ಅನುಕೂಲ ಆಗಿರುತ್ತವೆ. ತಕ್ಕಮಟ್ಟಿಗೆ ವೇರಿಯೇಶನ್ಸ್ ಇರುವ ವೇಗದ ಬೌಲರ್​ಗಳು ಈ ಪಿಚ್​ಗಳಿಂದ ಲಾಭ ಪಡೆಯಬಹುದು ಎಂಬುದು ಹಸನ್ ಅಲಿ ಅವರ ಅಭಿಪ್ರಾಯ.

    27 ವರ್ಷದ ಹಸನ್ ಅಲಿ ಅವರು ಪಾಕಿಸ್ತಾನದ ಪ್ರಮುಖ ವೇಗಿಗಳ ಪೈಕಿ ಒಬ್ಬರು. ಟೆಸ್ಟ್ ಪಂದ್ಯಗಳಲ್ಲಿ 29 ಇನ್ನಿಂಗ್ಸ್​ಗಳಿಂದ 63 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 55 ಪಂದ್ಯಗಳಿಂದ 89 ವಿಕೆಟ್ ಹಾಗೂ ಟಿ20 ಕ್ರಿಕೆಟ್​ನಲ್ಲಿ 40 ಇನ್ನಿಂಗ್ಸ್​ನಿಂದ 52 ವಿಕೆಟ್ ಪಡೆದಿದ್ದಾರೆ.

    ಇದನ್ನೂ ಓದಿ: Suresh Raina’s Wife- ಟ್ಯೂಷನ್​ಗೆ ಬರುತ್ತಿದ್ದ ಹುಡುಗಿ ಸುರೇಶ್ ರೈನಾಗೆ ಹೆಂಡತಿಯಾಗಿದ್ದು...

    ಯುಎಇ ಮತ್ತು ಓಮನ್ ದೇಶಗಳ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಅಕ್ಟೋಬರ್ 17ರಂದು ಐಸಿಸಿ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ. ಮೊದಲಿಗೆ ಗ್ರೂಪ್ ಹಂತದ ಪಂದ್ಯಗಳು ನಡೆಯಲಿವೆ. ನಂತರ ಸೂಪರ್ 12 ಹಂತದ ಪಂದ್ಯಗಳು ನಡೆಯುತ್ತವೆ. ಭಾರತ ಸೇರಿ 8 ತಂಡಗಳು ಆಟೊಮ್ಯಾಟಿಕ್ ಆಗಿ ಸೂಪರ್ 12 ಹಂತಕ್ಕೆ ನೇರ ಅರ್ಹತೆ ಪಡೆದಿವೆ. ಗ್ರೂಪ್ ಹಂತದಿಂದ ನಾಲ್ಕು ತಂಡಗಳು ಸೂಪರ್ 12 ಹಂತಕ್ಕೆ ತೇರ್ಗಡೆ ಪಡೆಯುವ ಅವಕಾಶ ಹೊಂದಿವೆ. ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.
    Published by:Vijayasarthy SN
    First published: