• Home
 • »
 • News
 • »
 • sports
 • »
 • Umran Malik- ನನ್ನ ಮಗ ಭಾರತಕ್ಕೆ ಆಡುವಂತಾಗಲಿ: ಕಾಶ್ಮೀರಿ ಕ್ರಿಕೆಟಿಗ ಉಮ್ರಾನ್ ತಂದೆಯ ಅದಮ್ಯ ಆಸೆ

Umran Malik- ನನ್ನ ಮಗ ಭಾರತಕ್ಕೆ ಆಡುವಂತಾಗಲಿ: ಕಾಶ್ಮೀರಿ ಕ್ರಿಕೆಟಿಗ ಉಮ್ರಾನ್ ತಂದೆಯ ಅದಮ್ಯ ಆಸೆ

ಉಮ್ರಾನ್ ಮಲಿಕ್

ಉಮ್ರಾನ್ ಮಲಿಕ್

Development of fast bowler Umran Malik- ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚು ಹತ್ತಿಸಿಕೊಂಡ ಉಮ್ರಾನ್ ಮಲಿಕ್ ಅತೀವ ಶ್ರದ್ಧೆ, ಪರಿಶ್ರಮದಿಂದ ಬೆಳವಣಿಗೆ ಸಾಧಿಸಿದ್ದಾರೆ. ತಮ್ಮ ಮಗ ಟೀಮ್ ಇಂಡಿಯಾಗೆ ಆಡಲಿ ಎಂಬುದು ಅವರ ಅಪ್ಪನ ಅದಮ್ಯ ಆಸೆಯಂತೆ.

 • Share this:

  ನವದೆಹಲಿ, ನ. 12: ಕಾಶ್ಮೀರದಲ್ಲಿ ಇತ್ತೀಚೆಗೆ ಒಳ್ಳೊಳ್ಳೆಯ ಕ್ರಿಕೆಟ್ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ಆಲ್​ರೌಂಡರ್ ಪರ್ವೆಜ್ ರಸೂಲ್ ಅವರು ಕೆಲ ವರ್ಷಗಳ ಹಿಂದೆ ಭಾರೀ ಭರವಸೆ ಮೂಡಿಸಿದ್ದರು. ಇದೀಗ ಉಮ್ರಾನ್ ಮಲಿಕ್ (Umran Malik) ಎಂಬ ಮಹಾನ್ ವೇಗದ ಬೌಲರ್ ಸದ್ದು ಮಾಡುತ್ತಿದ್ದಾರೆ. ಅಬ್ದುಲ್ ಸಮದ್ (Abdul Samad) ಎಂಬ ಸ್ಫೋಟಕ ಬ್ಯಾಟರ್ ಕೂಡ ಸಿಡಿಯುತ್ತಿದ್ದಾರೆ. ಉಮ್ರಾನ್ ಮಲಿಕ್ ಕ್ರಿಕೆಟ್ ಪ್ರಯಾಣ ಆಸಕ್ತಿ ಹುಟ್ಟಿಸುತ್ತದೆ. ನೆಟ್ ಬೌಲರ್ ಆಗಿದ್ದವರು ಆಕಸ್ಮಿಕವಾಗಿ ಐಪಿಎಲ್​ನಲ್ಲಿ ಆಡುವ ಅವಕಾಶ ಸಿಕ್ಕು ಇಡೀ ದೇಶದ ಗಮನ ಸೆಳೆದಿದ್ದಾರೆ. ಟೀಮ್ ಇಂಡಿಯಾಗೆ ವಿಶ್ವಕಪ್ ವೇಳೆ ನೆಟ್ ಬೌಲಿಂಗ್ ಕೂಡ ಮಾಡಿದ್ದ ಇವರು ಇದೀಗ ಭಾರತ ತಂಡಕ್ಕೆ ಆಯ್ಕೆ ಆಗಿದ್ದು ಸೌತ್ ಆಫ್ರಿಕಾ ಪ್ರವಾಸ ಹೋಗಲಿದ್ದಾರೆ.


  ಅಪ್ಪನಿಗೆ ಮಗ ಭಾರತಕ್ಕೆ ಆಡಬೇಕೆಂಬ ಕನಸು:


  ಉಮ್ರಾನ್ ಮಲಿಕ್ ಶರವೇಗದಲ್ಲಿ ಬೌಲ್ ಮಾಡಬಲ್ಲವರು. 150 ಕಿಮೀ ವೇಗದಲ್ಲಿ ಚೆಂಡು ಬೀಸಿ ಬರುತ್ತದೆ. ಇವರ ತಂದೆಗೆ ಈಗ ಅಭಿಮಾನವೋ ಅಭಿಮಾನ. ತಮ್ಮ ಮಗ ಇಷ್ಟು ಬೇಗ ಎತ್ತರಕ್ಕೆ ಏರುತ್ತಿರುವುದು ಕಂಡು ಸಂತಸ ಪಟ್ಟಿದ್ಧಾರೆ. ಭಾರತಕ್ಕಾಗಿ ಆಡಬೇಕೆಂಬ ತನ್ನ ಮಗನ ಕನಸು ಬೇಗ ಈಡೇರಲಿ ಎಂದು ಹಾರೈಸಿದ್ದಾರೆ ಅಬ್ದುಲ್ ರಷೀದ್.


  “ಅಪ್ಪ ನಾನು ಭಾರತಕ್ಕಾಗಿ ಆಡಬೇಕು ಎಂದು ಆತ ನನ್ನ ಬಳಿ ಹೇಳುತ್ತಲೇ ಇರುತ್ತಾನೆ. ನಮ್ಮ ಶುಭ ಹಾರೈಕೆ ಯಾವಾಗಲು ಆತನಿಗೆ ಇದ್ದೇ ಇರುತ್ತದೆ. ಒಂದು ದಿನ ನಮ್ಮ ಮಗು ಭಾರತಕ್ಕಾಗಿ ಆಡಲು ಸಾಧ್ಯವಾಗುವಂತೆ ಆ ದೇವರಲ್ಲಿ ಪ್ರಾರ್ಥಿಸುತ್ತೇವೆ. ಈಗ ಭಾರತ ಎ ತಂಡಕ್ಕೆ ಆತನ ಹೆಸರು ಬಂದಿದೆ. ಅದೇ ರೀತಿ ಭವಿಷ್ಯದಲ್ಲಿ ಆತ ಟೀಮ್ ಇಂಡಿಯಾಗೂ ಅಯ್ಕೆಯಾಗಿ ದೇಶಕ್ಕೆ ಹೆಮ್ಮೆಯಾಗುವಂತೆ ಆಡುತ್ತಾನೆ ಎಂದು ಭಾವಿಸಿದ್ದೇನೆ. ಆತ ನಮ್ಮ ಮಗ ಅಲ್ಲ, ಇಡೀ ದೇಶದ ಮಗ ಎಂದು ಎಲ್ಲರಿಗೂ ಹೇಳುತ್ತೇವೆ. ಈಗ ಆತ ಚೆನ್ನಾಗಿ ಆಡಿ ದೇಶಕ್ಕೆ ಕೀರ್ತಿ ತರಲಿ ಎಂದೇ ನಮ್ಮ ಕೋರಿಕೆ” ಎಂದು ಫೋನ್​ನಲ್ಲಿ ನಡೆದ ಸಂವಾದದಲ್ಲಿ ಅಬ್ದುಲ್ ರಷೀದ್ ಅವರು ಹೇಳಿದರೆಂದು ಐಎಎನ್​ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.


  ಹಣ್ಣು ಮಾರಿ ಜೀವನ ನಡೆಸಿದರೂ ಮಗನ ಕ್ರಿಕೆಟ್ ಆಸೆಗೆ ವಿರೋಧಿಸಿದವರಲ್ಲ:


  ಉಮ್ರಾನ್ ಮಲಿಕ್ ತಂದೆ ಅಬ್ದುಲ್ ರಷೀದ್ ಅವರು ಜಮ್ಮುವಿನ ಗುಜ್ಜರ್ ನಗರ್​ನವರು. ಜಮ್ಮು ನಗರದ ಶಾಹೀದಿ ಚೌಕ್​ನಲ್ಲಿ ಹಣ್ಣು ಮಾರಿ ಜೀವನ ನಡೆಸುತ್ತಾರೆ. ಆದರೆ, ಮಗನ ಕ್ರಿಕೆಟ್ ಆಸೆಗೆ ಯಾವತ್ತೂ ತಣ್ಣೀರೆರಚಿದವರಲ್ಲ. ಅವರ ಆಸೆ ಆಕಾಂಕ್ಷೆಗಳಿಗೆ ನೀರೆರದು ಪೋಷಿಸಿದ್ದಾರೆ.


  ಇದನ್ನೂ ಓದಿ: Sania Mirza: ಭಾರತೀಯ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಸಾನಿಯಾ ಮಿರ್ಜಾ


  “ಆತ ಮೂರ್ನಾಲ್ಕು ವರ್ಷದ ಪ್ರಾಯದಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಆತ ಕ್ರಿಕೆಟ್ ಆಡುವುದನ್ನು ನಾವು ಯಾವತ್ತೂ ತಡೆಯಲಿಲ್ಲ. ಕ್ರಿಕೆಟ್ ಆಡಲು ಏನು ಅಗತ್ಯವೋ ಅದೆಲ್ಲವನ್ನೂ ನಮ್ಮ ಶಕ್ತ್ಯಾನುಸಾರ ಕೊಟ್ಟಿದ್ದೇವೆ. ಅಪ್ಪ ಅಮ್ಮ ನನಗೆ ಅವಕಾಶ ಕೊಡಲಿಲ್ಲ ಎಂದು ಆತ ಕೊರಗುವ ಪರಿಸ್ಥಿತಿಗೆ ಹೋಗದಂತೆ ನೋಡಿಕೊಂಡಿದ್ದೇವೆ” ಎಂದು ತಂದೆ ಅಬ್ದುಲ್ ರಷೀದ್ ವಿವರಿಸಿದ್ದಾರೆ.


  ಊಟಕ್ಕೂ ಬಿಡುವಿಲ್ಲದಷ್ಟು ಕ್ರಿಕೆಟ್:


  ಉಮ್ರಾನ್ ಮಲಿಕ್​ನಿಗೆ ಕ್ರಿಕೆಟ್ ಹುಚ್ಚು ಎಷ್ಟಿತ್ತೆಂದರೆ ಸರಿಯಾದ ಸಮಯಕ್ಕೆ ಊಟ ಮಾಡುವಷ್ಟು ಪುರುಸೊತ್ತು ಇಲ್ಲದಷ್ಟು ಸದಾ ಕ್ರಿಕೆಟ್​ನಲ್ಲೇ ಮುಳುಗಿಹೋಗುತ್ತಿದ್ದ. ಆತನಿಗೆ ಊಟ ತಿನಿಸುವಷ್ಟರಲ್ಲಿ ನಮಗೆ ಸಾಕಾಗಿ ಹೋಗುತ್ತಿತ್ತು. ಹಾಗು ಹೀಗು ತಿನಿಸಿದ ತಕ್ಷಣ ಆತ ಮತ್ತೆ ಆಡಲು ಓಡಿ ಹೋಗುತ್ತಿದ್ದ ಎಂದು ಅವರ ತಂದೆ ಹಳೆಯ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.


  ಇಷ್ಟು ವೇಗದ ಬೌಲಿಂಗ್ ಹೇಗೆ ಸಾಧ್ಯ?


  ಉಮ್ರಾನ್ ಮಲಿಕ್ ನಮ್ಮ ದೇಶದಲ್ಲಿ ನಿರಂತರವಾಗಿ 150 ಕಿಮೀಗಿಂತ ವೇಗದಲ್ಲಿ ಚೆಂಡು ಎಸೆಯಬಲ್ಲ ಕೆಲವೇ ಫಾಸ್ಟ್ ಬೌಲರ್​​ಗಳಲ್ಲಿ ಒಬ್ಬರು. ಇಷ್ಟು ವೇಗದ ಬೌಲಿಂಗ್ ತಂತ್ರವನ್ನು ಎಲ್ಲಿ ಕಲಿತರು?


  ಇದನ್ನೂ ಓದಿ: Warner Shot- ಎರಡು ಬಾರಿ ಪಿಚ್ ಆದ ಚೆಂಡನ್ನು ಅಟ್ಟಾಡಿಸಿ ಹೊಡೆದ ವಾರ್ನರ್; ತಪ್ಪು ಅಂದ ಗಂಭೀರ್


  “ಈತನಿಗೆ ದೈವದತ್ತವಾಗಿ ಬಂದ ದೈಹಿಕ ಶಕ್ತಿ ಇದೆ. ವೇಗದ ಬೌಲಿಂಗ್ ಅನ್ನು ಎಲ್ಲಿಂದಲೂ ಕಲಿಯಲಿಲ್ಲ. ಸ್ವಾಭಾವಿಕವಾಗಿ ಅದು ಅವನಿಗೆ ಒಲಿದುಬಂದಿದೆ. ಕ್ರಿಕೆಟ್ ಅಕಾಡೆಮಿ ಮತ್ತು ಕಾಲೇಜಿನಲ್ಲಿ ಆತ ಹೋಗಿ ಅಭ್ಯಾಸ ನಡೆಸುತ್ತಿದ್ದ. ಇಡೀ ದಿನ ಕ್ರಿಕೆಟ್ ಆಡುವಷ್ಟು ದೈಹಿಕ ಕ್ಷಮತೆ ಆತನಲ್ಲಿ ಇದೆ.


  “ಬೆಳಗ್ಗೆ 10 ಗಂಟೆಗೆ ಹೋದರೆ ಬರುತ್ತಿದ್ದುದು ಸಂಜೆ 7ಕ್ಕೆಯೇ. ಜೊತೆಯಲ್ಲಿ 3-4 ನೀರಿನ ಬಾಟಲ್ ಮಾತ್ರ ತೆಗೆದುಕೊಂಡು ಕ್ರಿಕೆಟ್ ಪ್ರಾಕ್ಟೀಸ್​ಗೆ ಹೋಗುತ್ತಿದ್ದ. ಬೇಸಿಗೆಯ ಸುಡು ಬಿಸಿಲಿದ್ದರೂ ಪ್ರಾಕ್ಟೀಸ್ ತಪ್ಪಿಸುತ್ತಿರಲಿಲ್ಲ” ಎಂದು ಉಮ್ರಾನ್ ಮಲಿಕ್ ಅವರ ಪರಿಶ್ರಮ ಮತ್ತು ಶ್ರದ್ಧೆಯ ಬಗ್ಗೆ ಅವರ ತಂದೆ ಹೇಳುತ್ತಾರೆ.

  Published by:Vijayasarthy SN
  First published: