ನೂತನ ಕ್ರಿಕೆಟ್ ಶಾಟ್​ಗೆ ಏನೆಂದು ಹೆಸರಿಡಬಹುದು?- ವಿಡಿಯೋ ವೈರಲ್

ಇದಕ್ಕೀಗ ಹೊಸತೊಂದು ಶಾಟ್ ಸೇರ್ಪಡೆಯಾಗಿದೆ. ಬಿಗ್ ಬ್ಯಾಷ್​ ಲೀಗ್ ಟೂರ್ನಿ ವೇಳೆ ಜೋಶ್ ಇಂಗ್ಲಿಸ್‌ ಬಾರಿಸಿದ ಹೊಡೆತ ಇದೀಗ ಭಾರೀ ವೈರಲ್ ಆಗಿದೆ.

zahir | news18-kannada
Updated:January 15, 2020, 5:00 PM IST
ನೂತನ ಕ್ರಿಕೆಟ್ ಶಾಟ್​ಗೆ ಏನೆಂದು ಹೆಸರಿಡಬಹುದು?- ವಿಡಿಯೋ ವೈರಲ್
BBL
  • Share this:
ಟ್ವೆಂಟಿ-20 ಕ್ರಿಕೆಟ್ ಅವಿಷ್ಕಾರವಾದ ಬಳಿಕ ಅನೇಕ ರೀತಿಯ ಶಾಟ್​ಗಳ ಪ್ರಯೋಗ ಆಗುತ್ತಲೇ ಇರುತ್ತದೆ. ಇನ್ನು ಕ್ರಿಕೆಟ್​ನಲ್ಲಿ ಎಲ್ಲರ ಗಮನ ಸೆಳೆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸ್ಟ್ರೇಟ್ ಡ್ರೈವ್, ತಿಲಕರತ್ನೆ ಡಿಲ್ಶಾನ್​ರ ದಿಲ್ ಸ್ಕೂಪ್, ವೀರೇಂದ್ರ ಸೆಹ್ವಾಗ್ ಅಪ್ಪರ್ ಕಟ್, ಕೆವಿನ್ ಪೀಟರ್ಸನ್ ಸ್ವಿಚ್ ಹಿಟ್, ಧೋನಿಯ ಹೆಲಿಕಾಪ್ಟರ್ ಶಾಟ್ ಹೀಗೆ ದೊಡ್ಡ ಪಟ್ಟಿಯನ್ನೇ ಮಾಡಬಹುದು.

ಇದಕ್ಕೀಗ ಹೊಸತೊಂದು ಶಾಟ್ ಸೇರ್ಪಡೆಯಾಗಿದೆ. ಬಿಗ್ ಬ್ಯಾಷ್​ ಲೀಗ್ ಟೂರ್ನಿ ವೇಳೆ ಜೋಶ್ ಇಂಗ್ಲಿಸ್‌ ಬಾರಿಸಿದ ಹೊಡೆತ ಇದೀಗ ಭಾರೀ ವೈರಲ್ ಆಗಿದೆ. ಪರ್ತ್ ಸ್ಕಾರ್ಚರ್ಸ್ Vs ಹೊಬಾರ್ಟ್ ಹುರ್ರಿಕೇನ್ಸ್​ ನಡುವಣ ಪಂದ್ಯದಲ್ಲಿ ಪರ್ತ್ ತಂಡವು 77 ರನ್‌ಗಳಿಂದ ಸುಲಭ ಜಯ ದಾಖಲಿಸಿದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಜೋಶ್ ಇಂಗ್ಲಿಸ್‌ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

46 ಎಸೆತಗಳನ್ನು ಎದುರಿಸಿದ ಜೋಶ್ ಇಂಗ್ಲಿಸ್‌ ಅದ್ಭುತ 73 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿಗಳು ಮತ್ತು 4 ಸಿಕ್ಸರ್​ಗಳು ಸೇರಿವೆ. ಈ ವೇಳೆ ಇಂಗ್ಲಿಸ್ ಡಿಫೆರೆಂಟ್ ಆಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಗಮನ ಸೆಳೆದಿದ್ದಾರೆ. ತಿರುಗಿ ನಿಂತು ಬಾರಿಸಿದ ಈ ಶಾಟ್ ಅತ್ತ ಸ್ಕೂಪ್ , ಇತ್ತ ಅಪ್ಪರ್ ಕಟ್ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಹೊಸ ಶಾಟ್ ಬಗ್ಗೆ ಇದೀಗ ಕ್ರಿಕೆಟ್​ ಲೋಕದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಈ ವಿಡಿಯೋವನ್ನು ಬಿಬಿಎಲ್​ ಲೀಗ್ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ ಕೂಡ ಇಂಗ್ಲಿಸ್​ ಅವರ ಭರ್ಜರಿ ಶಾಟ್​ ಅನ್ನು ಹಾಡಿ ಹೊಗಳಿದ್ದಾರೆ. ಸಖತ್ ಢಿಫೆರೆಂಟ್ ಆಗಿರುವ ಈ ಶಾಟ್​ನ ವಿಡಿಯೋ ಭಾರೀ ವೈರಲ್ ಆಗಿದ್ದು, ಈ ಶಾಟ್‌ಗೆ ಏನೆಂದು ಹೆಸರಿಡುವುದು ಎಂಬ ಚರ್ಚೆ ಕೂಡ ಕ್ರಿಕೆಟ್​ ಪ್ರೇಮಿಗಳಲ್ಲಿ ಶುರುವಾಗಿದೆ.

ಇದನ್ನೂ ಓದಿ: ಹರಿದ ಗ್ಲೌಸ್, ಮುರಿದ ಬ್ಯಾಟ್, ತಂದೆಯ ಜೇಬಲಿದ್ದದ್ದು ಕೇವಲ 280 ರೂ: ಆದರೆ ಇಂದು ಟೀಂ ಇಂಡಿಯಾ ಪ್ಲೇಯರ್
Published by: zahir
First published: January 15, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading