Watch| ಜೋಗಿಂದರ್ ಶರ್ಮಾ ಕೊನೆಯ ಎಸೆತಕ್ಕೆ ಭಾರತ 2007 T20 ವಿಶ್ವಕಪ್ ಗೆದ್ದು ಇಂದಿಗೆ 14 ವರ್ಷ!

ಧೋನಿ ನಾಯಕತ್ವದ ಯುವ ತಂಡ ದಕ್ಷಿಣ ಆಫ್ರಿಕಾದಲ್ಲಿ ಅಭುತಪೂರ್ವ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲೇ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ನಂತಹ ಬಲಿಷ್ಠ ತಂಡಗಳಿಗೆ ಸುಲಭವಾಗಿ ಸೋಲುಣಿಸಿತ್ತು. ಪಾಕಿಸ್ತಾನದ ವಿರುದ್ಧ ಡ್ರಾ ಸಾಧಿಸಿದ್ದ ಪಂದ್ಯದಲ್ಲಿ ಬೌಲ್​ ಔಟ್ ಮೂಲಕ ಜಯಿಸಿತ್ತು.

ಟಿ20 2007 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಭಾರತ ತಂಡ.

ಟಿ20 2007 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಭಾರತ ತಂಡ.

 • Share this:
  ಸೆ.24 ಭಾರತ ಕ್ರಿಕೆಟ್ ತಂಡ ಮತ್ತು ಕ್ರಿಕೆಟ್​ ಪ್ರೇಮಿಗಳು ಎಂದಿಗೂ ಮರೆಯಲಾಗದ ದಿನ. ಜೋಗಿಂದರ್ ಶರ್ಮಾ ಎಸೆತಕ್ಕೆ ಶಾರ್ಟ್​ ಫೈಂಡ್​ ಲೆಗ್​ನಲ್ಲಿ ಫೀಲ್ಡಿಂಗ್​ಗೆ ನಿಂತಿದ್ದ ಶ್ರೀಶಾಂತ್​ ಕೈಗೆ ಪಾಕಿಸ್ತಾನದ ಬ್ಯಾಟ್ಸ್​ಮನ್ ಮಿಸ್ಬಾ ಉಲ್ ಹಕ್ ಕ್ಯಾಚಿತ್ತು ಹೊರ ನಡೆದಾಗ 24 ವರ್ಷಗಳ ಭಾರತದ ಕನಸು ಮತ್ತು ತಪಸ್ಸು ಅಂದು ಫಲ ನೀಡಿತ್ತು. ಹೌದು ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್ ಜಯಿಸಿತ್ತು. ಆ ಮೂಲಕ 24 ವರ್ಷಗಳ ಬಳಿಕ ಐಸಿಸಿ ಟ್ರೋಫ್ ಗೆದ್ದು ಸಾರ್ಥಕಥೆ ಮೆರೆದಿತ್ತು. ಭಾರತ 2007ರ ಟಿ20 ವಿಶ್ವಕಪ್ ಗೆದ್ದು ಇಂದಿಗೆ 14 ವರ್ಷ. ಎಂದಿನಂತೆ ಕ್ರಿಕೆಟ್ ದಿಗ್ಗಜರು ಈ ದಿನವನ್ನು ನೆನೆದು ಮಹೇಂದ್ರ ಸಿಂಗ್ ಧೋನಿ ಮತ್ತು 2007 ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

  ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸೆ.14 ವಿಶೇಷವಾದ ದಿನವಾಗಿದ್ದು, ಈ ಸಂದರ್ಭವನ್ನು ನೆಟ್ಟಿಗರು ನೆನಪಿಸಿಕೊಂಡು ತಮ್ಮ ನೆಚ್ಚಿನ ಆಟಗಾರನಿಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲೇ ಧೋನಿ ತಂಡ ಟ್ರೋಫಿ ಗೆದ್ದು ಬೀಗಿದ್ದು ಇತಿಹಾಸ. ಈ ವಿಶೇಷ ದಿನವನ್ನು ನೆನಪಿಸಿಕೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಧೋನಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಈ ಟೂರ್ನಿಗೆ ಧೋನಿ ನಾಯಕರಾಗಿ ಆಯ್ಕೆಯಾದದ್ದು ಮತ್ತು ಭಾರತದ ಯುವ ಪಡೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಪಾರಮ್ಯ ಮೆರೆದದ್ದೆ ಒಂದು ರೋಚಕ ಕಥೆ.

  2007ರ ಏಕದಿನ ವಿಶ್ವಕಪ್ ಸೋಲಿನ ನಂತರ ಭಾರತ ಕ್ರಿಕೆಟ್ ತಂಡ ಅಕ್ಷರಶಃ ಕುಗ್ಗಿ ಹೋಗಿತ್ತು. ಅಭಿಮಾನಿಗಳೂ ಸಹ ನಿರಾಸೆಯಲ್ಲಿ ಮುಳುಗಿದ್ದರು. ಈ ವೇಳೆ ಆರಂಭವಾದ ಟಿ20 ವಿಶ್ವಕಪ್​ಗೆ ಹಿರಿಯ ಆಟಗಾರರು ಯಾರೂ ಭಾಗವಹಿಸುವುದಿಲ್ಲ ಎಂದು ಅಂದಿನ ನಾಯಕ ರಾಹುಲ್ ದ್ರಾವಿಡ್ ಘೋಷಿಸಿದ್ದರು. ಇದೇ ಕಾರಣಕ್ಕೆ ಟಿ20 ವಿಶ್ವಕಪ್​ಗೆ ಸಂಪೂರ್ಣ ಯುವಕರನ್ನು ಆಯ್ಕೆ ಮಾಡಲಾಗಿತ್ತು. ಮತ್ತು ಸಚಿನ್ ತೆಂಡೂಲ್ಕರ್​ ಒಲವಿನ ಮೇರೆಗೆ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಲಭಿಸಿತ್ತು.

  ಧೋನಿ ನಾಯಕತ್ವದ ಯುವ ತಂಡ ದಕ್ಷಿಣ ಆಫ್ರಿಕಾದಲ್ಲಿ ಅಭುತಪೂರ್ವ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲೇ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ನಂತಹ ಬಲಿಷ್ಠ ತಂಡಗಳಿಗೆ ಸುಲಭವಾಗಿ ಸೋಲುಣಿಸಿತ್ತು. ಪಾಕಿಸ್ತಾನದ ವಿರುದ್ಧ ಡ್ರಾ ಸಾಧಿಸಿದ್ದ ಪಂದ್ಯದಲ್ಲಿ ಬೌಲ್​ ಔಟ್ ಮೂಲಕ ಜಯಿಸಿತ್ತು. ಸೆಮಿ ಫೈನಲ್​ನಲ್ಲಿ ಆಸ್ಟ್ರೇಲಿಯಾಗೆ ಮನೆ ದಾರಿ ತೋರಿಸಿದ್ದ ಭಾರತ ತಂಡ ಫೈನಲ್​ನಲ್ಲಿ ಮತ್ತೆ ಪಾಕಿಸ್ತಾನವನ್ನು ಎದುರುಗೊಳ್ಳುವಂತಹ ಸನ್ನಿವೇಶ ಉಂಟಾಗಿತ್ತು.

  ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಮತ್ತು ಆ ಕೊನೆಯ ಓವರ್ ಅನ್ನು ಯಾವ ಕ್ರಿಕೆಟ್ ಅಭಿಮಾನಿಗಳೂ ಸಹ ಮರೆಯಲು ಸಾಧ್ಯವೇ ಇಲ್ಲ. ಆ ಪಂದ್ಯದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿದಿದ್ದರೂ ಸಹ ಜಹೀರ್​ ಖಾನ್, ಆರ್​.ಪಿ. ಸಿಂಗ್ ನೇತೃತ್ವದ ಬೌಲಿಂಗ್ ಪಡೆ ಪಾಕಿಸ್ತಾನದ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಕೊನೆಯ ಓವರ್​ಗೆ 13 ರನ್​ಗಳ ಅಗತ್ಯವಿಲ್ಲ. ಜೋಗಿಂದರ್​ ಶರ್ಮಾ ಕೈಗೆ ಧೋನಿ ಬಾಲಿಟ್ಟಾಗ ಆ ಕ್ಷಣಕ್ಕೆ ಕ್ರಿಕೆಟ್ ಪ್ರೇಮಿಗಳಿಗೆ ಆಘಾತ, ಆತಂಕ ಉಂಟಾಗಿದ್ದು ಸುಳ್ಳಲ್ಲ.

  ಜೋಗಿಂದರ್​ ಶರ್ಮಾ ಅವರ ಮೊದಲ ಎರಡೂ ಎಸೆತಗಳನ್ನು ಪಾಕಿಸ್ತಾನದ ಬ್ಯಾಟ್ಸ್​ಮನ್ ಮಿಸ್ಬಾ ಉಲ್ ಹಕ್ ಬೌಂಡರಿ ಗೆರೆ ದಾಟಿಸಿದ್ದಾಗ ಪಾಕ್ ಪಾಳಯದಲ್ಲಿ ಗೆಲುವು ಮನೆ ಮಾಡಿತ್ತು. ಭಾರತ ನಿರಾಸೆಯ ಮಡುವಿನಲ್ಲಿತ್ತು. ಆದರೆ, ಮೂರನೇ ಎಸೆತವನ್ನು ಕೀಪರ್​ ತಲೆಯ ಮೇಲೆ ಹೊಡೆಯಲು ಮಿಸ್ಬಾ ಉಲ್ ಹಕ್ ಯತ್ನಿಸಿದಾಗ ಆ ಚೆಂಡು ನೇರವಾಗಿ ಶ್ರೀಶಾಂತ್ ಕೈಸೇರಿತ್ತು. ಅದರೊಂದಿಗೆ ಭಾರತದ 24 ವರ್ಷ ಕನಸು ನನಸಾಗಿತ್ತು. ಕ್ರಿಕೆಟ್ ಪ್ರೇಮಿಗಳ ನೆನಪಲ್ಲಿ ಜೋಗಿಂದರ್ ಶರ್ಮಾ ಅವರ ಆ ಕೊನೆಯ ಓವರ್ 14 ವರ್ಷ ಕಳೆದು ಇಂದಿಗೂ ಹಚ್ಚ ಹಸಿರಾಗಿ ನೆನಪಿನಲ್ಲಿ ಹಾಗೆ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ. ಇಂದೂ ಸಹ ಬಿಸಿಸಿಐ ಆ ಕ್ಷಣಗಳನ್ನು ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

  ಇದನ್ನೂ ಓದಿ: RCB vs CSK| ಶಾರ್ಜಾ ಅಂಗಳದಲ್ಲಿ ಕೊಹ್ಲಿ vs ಧೋನಿ ಬಿಗ್​ ಫೈಟ್​; ಯಾರ ಪಾಲಾಗಲಿದೆ ಗೆಲುವು?

  ಪ್ರಸ್ತುತ 38 ವರ್ಷದ ಮಹೇಂದ್ರ ಸಿಂಗ್ ಧೋನಿ ಟೀಂ ಭಾರತದ ಪರ ಐಸಿಸಿ ಏರ್ಪಡಿಸುವ ಎಲ್ಲಾ ಟೂರ್ನಿಗಳ ಕಪ್ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್‍ನಲ್ಲಿ ಯಶಸ್ವಿ ನಾಯಕ ಎಂದು ಹೆಸರಾಗಿದ್ದಾರೆ. ಧೋನಿ ನಾಯತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿತ್ತು. ಧೋನಿ ನಾಯಕತ್ವದಲ್ಲಿ ಆಡಿದ್ದ 60 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಗೆದ್ದು ದಾಖಲೆ ಬರೆದಿತ್ತು. 2014 ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ್ದರು. 2017 ರಲ್ಲಿ ಸಿಮೀತ ಓವರ್ ಗಳ ಪಂದ್ಯಗಳ ನಾಯಕತ್ವವನ್ನು ತೊರೆದಿದ್ದರು. 2019ರ ವಿಶ್ವಕಪ್ ನಂತರ ಅವರು ಎಲ್ಲಾ ಮಾದರಿ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.
  Published by:MAshok Kumar
  First published: