HOME » NEWS » Sports » CRICKET WATCH DINESH KARTHIKS SPECTACULAR RUNNING CATCH

IPL2019: ಕಾರ್ತಿಕ್​ ಮ್ಯಾಜಿಕ್​, ಇದೇ ಐಪಿಎಲ್​​ನ ಬೆಸ್ಟ್​ ಕ್ಯಾಚ್​ ?

ಮುಂಬೈ ತಂಡದ ಬ್ಯಾಟ್ಸ್​ಮನ್​ ಕ್ವಿಂಟನ್​ ಡಿಕಾಕ್​ರ ಕ್ಯಾಚ್​ ಅನ್ನು ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ 50 ಮೀಟರ್​ನಷ್ಟು ದೂರ ಓಡಿ ಹಿಡಿದಿದ್ದಾರೆ.

news18
Updated:May 7, 2019, 6:51 PM IST
IPL2019: ಕಾರ್ತಿಕ್​ ಮ್ಯಾಜಿಕ್​, ಇದೇ ಐಪಿಎಲ್​​ನ ಬೆಸ್ಟ್​ ಕ್ಯಾಚ್​ ?
ದಿನೇಶ್​ ಕಾರ್ತಿಕ್
  • News18
  • Last Updated: May 7, 2019, 6:51 PM IST
  • Share this:
ನವ ದೆಹಲಿ(ಮೇ.07): ಇಂಡಿಯನ್​ ಪ್ರೀಮಿಯರ್​ ಲೀಗ್​ನ 12ನೇ ಆವೃತ್ತಿಯಲ್ಲಿ ಅನೇಕ ಅದ್ಭುತ ಕ್ಯಾಚ್​ಗಳನ್ನು ನೋಡಿರುತ್ತೇವೆ. ಆದರೆ ಇತ್ತೀಚೆಗೆ ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ನಾಯಕ ಹಾಗೂ ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ ಹಿಡಿದ ಕ್ಯಾಚ್​ ಬೆಸ್ಟ್​ ಕ್ಯಾಚ್​ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.

ಮುಂಬೈ ತಂಡದ ಬ್ಯಾಟ್ಸ್​ಮನ್​ ಕ್ವಿಂಟನ್​ ಡಿಕಾಕ್​ರ ಕ್ಯಾಚ್​ ಅನ್ನು ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ 50 ಮೀಟರ್​ನಷ್ಟು ದೂರ ಓಡಿ ಹಿಡಿದಿದ್ದಾರೆ. ಬ್ಯಾಟ್ಸ್​ಮನ್​ ಡಿಕಾಕ್​ರ ಬ್ಯಾಟ್​ಗೆ ತಾಕಿ ಎತ್ತರಕ್ಕೆ ಹೋದ ಚೆಂಡನ್ನು  ಕಾರ್ತಿಕ್​ ಅದ್ಭುತವಾಗಿ ಹಿಡಿದಿದ್ದರು. ಕಾರ್ತಿಕ್​ರ ಈ ವಿಭಿನ್ನ ಪ್ರಯತ್ನ ಅಭಿಮಾನಿಗಳನ್ನು ನಿಬ್ಬೆರಗಾಗುವಂತೆ ಮಾಡಿತ್ತು.

ಇದನ್ನೂ ಓದಿ: ಪೊಲೀಸ್​ ಠಾಣೆಯಲ್ಲೇ ಗುತ್ತಿಗೆದಾರನ ಭರ್ಜರಿ ಬರ್ತ್​ ಡೇ: ವಿಡಿಯೋ ಭಾರೀ ವೈರಲ್

ಇದೇ ಸಂದರ್ಭದಲ್ಲಿ ಕಾರ್ತಿಕ್​ರ ಕ್ಯಾಚ್ ಕುರಿತಾಗಿ ವಿವರಣೆ ನೀಡುತ್ತಿದ್ದ ಕ್ರಿಕೆಟ್​ ದಿಗ್ಗಜ ಸುನಿಲ್​ ಗವಾಸ್ಕರ್​, ಈ ಕ್ಯಾಚ್​ ಅನ್ನು ಐಪಿಎಲ್​ನ ಶ್ರೇಷ್ಠ ಕ್ಯಾಚ್​ ಎಂದು ಬಣ್ಣಿಸಿದ್ದರು. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿಕ್​, ಇದು ಗೆಲುವಿಗಾಗಿ ತೋರಿಸಿದ ಅರ್ಪಣೆ. ಆದರೆ ಗೆಲುವು ನಮ್ಮ ಪರವಾಗಿಲ್ಲ. ಈ ಸಾಲಿನಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದ್ದು, ಮುಂದಿನ ವರ್ಷ ಮತ್ತಷ್ಟು ಶಕ್ತಿಶಾಲಿಯಾಗಿ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಿದೆ ಎಂದಿದ್ದಾರೆ.
First published: May 7, 2019, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories