ಜೇಟ್ಲಿ ಕ್ರೀಡಾಂಗಣ ಮರು ನಾಮಕರಣ ವೇಳೆ ಕೊಹ್ಲಿ-ಅನುಷ್ಕಾ ಕಿಸ್ಸಿಂಗ್; ವಿಡಿಯೋ ವೈರಲ್!

ಸಮಾರಂಭದ ಮಧ್ಯೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯ ಕೈಗೆ ಮುತ್ತಿಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Vinay Bhat | news18-kannada
Updated:September 13, 2019, 1:05 PM IST
ಜೇಟ್ಲಿ ಕ್ರೀಡಾಂಗಣ ಮರು ನಾಮಕರಣ ವೇಳೆ ಕೊಹ್ಲಿ-ಅನುಷ್ಕಾ ಕಿಸ್ಸಿಂಗ್; ವಿಡಿಯೋ ವೈರಲ್!
ಸಮಾರಂಭದ ಮಧ್ಯೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯ ಕೈಗೆ ಮುತ್ತಿಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
  • Share this:
ಬೆಂಗಳೂರು (ಸೆ. 13): ವಿಶ್ವದ ಶ್ರೇಷ್ಠ ಕ್ರಿಕೆಟ್ ಮೈದಾನದ ಪೈಕಿ ಒಂದಾದ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ದಿ. ಅರುಣ್​ ಜೇಟ್ಲಿ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. ಜೊತೆಗೆ ಕ್ರೀಡಾಂಗಣದ ಒಂದು ಸ್ಟ್ಯಾಂಡ್​ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿಟ್ಟು ಗೌರವಿಸಲಾಗಿದೆ.

ಈ ಭವ್ಯ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕ್ರೀಡಾ ಸಚಿವ ಕಿರಣ್​ ರಿಜಿಜು, ಬಿಸಿಸಿಐಯ ಪ್ರಮುಖ ಅಧಿಕಾರಿಗಳು ಹಾಜರಿದ್ದರು. ಕ್ರಿಕೆಟಿಗರ ಪೈಕಿ ಮನೀಶ್ ಪಾಂಡೆ, ಕೆ ಎಲ್ ರಾಹುಲ್, ಶಿಖರ್ ಧವನ್ ಸೇರಿದಂರೆ ಕೊಹ್ಲಿ ಜೊತೆಗೆ ಅನುಷ್ಕಾ ಶರ್ಮಾ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Virat Kohli reveals how Arun Jaitely ‘encouraged’ him after father’s death
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ


ಅನುಷ್ಕಾ ಕಡು ನೀಲಿ ಬಣ್ಣದ ಡ್ರೆಸ್​ನಲ್ಲಿ ಮಿಂಚಿದರೆ, ಕೊಹ್ಲಿ ಕೂಡ ನೆಹರೂ ಜಾಕೆಟ್ ಧರಿಸಿ ಟಿಪ್ ಟಾಪಾಗಿ ಬಂದಿದ್ದರು. ಆದರೆ, ಸಮಾರಂಭದ ಮಧ್ಯೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯ ಕೈಗೆ ಮುತ್ತಿಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಭಾರತದ ಪ್ರಸಿದ್ಧ ಮನರಂಜನ ತಾಣವಾದ ಫಿಲ್ಮ್​​ಫೇರ್ ಈ ವಿಡಿಯೋ ಹಂಚಿಕೊಂಡು ಮುದ್ದಾಗಿದೆ ಎಂದು ಬರೆದುಕೊಂಡಿದೆ.

 ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದು, ಕೆಲವರು 'ಇದು ನಿಜವಾದ ಪ್ರೀತಿ' ಎಂದಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ಕಿಡಿಕಾರಿದ್ದು, 'ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಖಾಸಗಿ ಪತ್ರಿಕೆ ವರದಿ ಮಾಡಿರುವ ಪ್ರಕಾರ ಸಮಾರಂಭದಲ್ಲಿ ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಅವರು, ಕೊಹ್ಲಿ ತಂದೆ ನಿಧನರಾದ ಸಂದರ್ಭ ಅವರ ಮನೆಗೆ ದಿವಂಗತ ಅರುಣ್ ಜೇಟ್ಲಿ ಅವರು ಭೇಟಿನೀಡಿ ಸಂತಾಪ ಸೂಚಿಸಿದ ಘಟನೆಯನ್ನು ವಿವರಿಸುತ್ತಿದ್ದರು. ಈ ವೇಳೆ ಭಾವನಾತ್ಮಕವಾಗಿ ಅನುಷ್ಕಾ ಅವರು ಕೊಹ್ಲಿ ಕೈಗೆ ಮುತ್ತಿಟ್ಟರು ಎಂದು ಹೇಳಿದೆ.

ಅದೇನೆ ಇದ್ದರು ವಿರುಷ್ಕಾ ಜೋಡಿಯ ಈ ಕ್ಯೂಟ್ ವಿಡಿಯೋ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

 First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading