ವೆಸ್ಟ್​ ಇಂಡೀಸ್​ನಲ್ಲಿ ಕೊಹ್ಲಿ ಆಟೋಗ್ರಾಫ್​ಗಾಗಿ ಮುಗಿಬಿದ್ದ ಜನರು; ಆದರೆ ಅಲ್ಲಿ ಆಗಿದ್ದೇ ಬೇರೆ!

ಕೊಹ್ಲಿಗೆ ಬಾಲಕ ಆಟೋಗ್ರಾಫ್​ ಕೊಟ್ಟ ವಿಡಿಯೋವನ್ನು ಆತನ ಆತ್ಮೀಯರಾದ ಅಮಿತ್​ ಎಂಬವರು ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Vinay Bhat | news18-kannada
Updated:September 4, 2019, 9:01 AM IST
ವೆಸ್ಟ್​ ಇಂಡೀಸ್​ನಲ್ಲಿ ಕೊಹ್ಲಿ ಆಟೋಗ್ರಾಫ್​ಗಾಗಿ ಮುಗಿಬಿದ್ದ ಜನರು; ಆದರೆ ಅಲ್ಲಿ ಆಗಿದ್ದೇ ಬೇರೆ!
ಕೊಹ್ಲಿಗೆ ಆಟೋಗ್ರಾಫ್​ ನೀಡುತ್ತಿರುವ ಬಾಲಕ
  • Share this:
ಬೆಂಗಳೂರು (ಸೆ. 04): ವೆಸ್ಟ್​ ಇಂಡೀಸ್ ಪ್ರವಾಸವನ್ನು ಭರ್ಜರಿ ಆಗಿ ಅಂತ್ಯಗೊಳಿಸಿರುವ ಭಾರತ ಟಿ-20, ಏಕದಿನ ಹಾಗೂ ಟೆಸ್ಟ್​ ಸರಣಿಯನ್ನು ವಶ ಪಡಿಸಿಕೊಂಡ ಸಾಧನೆ ಮಾಡಿದೆ. ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ನೂತನ ಸಾಧನೆ ಮಾಡಿದ್ದಾರೆ. ಈ ಮಧ್ಯೆ ವೆಸ್ಟ್​ ಇಂಡೀಸ್​ನಲ್ಲಿ ಕೊಹ್ಲಿ ಆಟೋಗ್ರಾಫ್​ಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು. ಆದರೆ, ಇಲ್ಲಿ ನಡೆದಿದ್ದೆ ಬೇರೆ!

ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಅದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡ. ಹೀಗಿರುವಾಗ ಸಾಮಾನ್ಯವಾಗಿ ಎಲ್ಲರೂ ಕೊಹ್ಲಿಯಿಂದ ಆಟೋಗ್ರಾಫ್​​ ಬೇಕೆಂದು ಮುಗಿ ಬೀಳುತ್ತಾರೆ. ಆದರೆ, ಇಲ್ಲಿ ಕೊಹ್ಲಿಯೇ ಒಬ್ಬರಿಂದ ಆಟೋಗ್ರಾಫ್​​ ಪಡೆದಿದ್ದಾರೆ.

ವೆಸ್ಟ್​ ಇಂಡೀಸ್​​ನ ಜಮೈಕಾದ ಹೋಟೆಲ್ ಒಂದರಲ್ಲಿ ಕೊಹ್ಲಿಯನ್ನು ಕಂಡ ಅಭಿಮಾನಿಗಳು ಆಟೋಗ್ರಾಫ್​​ಗಾಗಿ ಕಾಯುತ್ತಿದ್ದರು. ಈ ಸಂದರ್ಭ 7 ವರ್ಷದ ಬಾಲಕ ಕೊಹ್ಲಿ ಬಳಿ ಆಟೋಗ್ರಾಫ್​ ಕೇಳುವ ಬದಲು ‘ನಿಮಗೆ ನನ್ನ ಆಟೋಗ್ರಾಫ್​ ಬೇಕಾ?’ ಎಂದು ಕೇಳಿದ್ದಾನೆ.

ಕೆರಿಬಿಯನ್ ಪ್ರವಾಸ ಅಂತ್ಯ; ಮುಂದಿದೆ ಕೊಹ್ಲಿ ಪಡೆಗೆ ಬಹುದೊಡ್ಡ ಸವಾಲು!

 ಇದಕ್ಕೆ ಕೊಹ್ಲಿ ಖುಷಿಯಿಂದಲೆ ಮುಗುಳುನಗುತ್ತ ಬಾಲಕನಿಂದ ಆಟೋಗ್ರಾಫ್​ ಪಡೆಯುತ್ತಾರೆ. ಪುಟ್ಟ ಅಭಿಮಾನಿಯ ಆಟೋಗ್ರಾಫ್​​ ನೋಡಿ ಕೊಹ್ಲಿ ವಾವ್, ಸೂಪರ್ ಎಂದಿದ್ದಾರೆ. ಕೊಹ್ಲಿ ಜೊತೆ ಇದ್ದ ಪತ್ನಿ ಅನುಷ್ಕಾ ಕೂಡ ಈ ಸಂದರ್ಭವನ್ನು ನೋಡಿ ಖುಷಿ ಪಟ್ಟರು.

ಕೊಹ್ಲಿಗೆ ಬಾಲಕ ಆಟೋಗ್ರಾಫ್​ ಕೊಟ್ಟ ವಿಡಿಯೋವನ್ನು ಆತನ ಆತ್ಮೀಯರಾದ ಅಮಿತ್​ ಎಂಬವರು ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

First published: September 4, 2019, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading