VIDEO: ವಿಭಿನ್ನವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ವಿರಾಟ್ ಕೊಹ್ಲಿ

Virat Kohli : ಪ್ರಸ್ತುತ ವೆಸ್ಟ್​ ಇಂಡೀಸ್ ಸರಣಿ ಪ್ರವಾಸದಲ್ಲಿ ಟೀಂ ಇಂಡಿಯಾ ಇದ್ದು, ಈಗಾಗಲೇ ಟಿ20 ಪಂದ್ಯಗಳನ್ನು ಕೊಹ್ಲಿ ಪಡೆ ಗೆದ್ದು ಬೀಗಿದೆ.

zahir | news18-kannada
Updated:August 11, 2019, 5:15 PM IST
VIDEO: ವಿಭಿನ್ನವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ವಿರಾಟ್ ಕೊಹ್ಲಿ
Virat kohli
  • Share this:
ಸೋಷಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಬಾಟಲ್​ ಕ್ಯಾಪ್​ ಚಾಲೆಂಜ್​ ಸಾಕಷ್ಟು ಸೌಂಡ್​ ಮಾಡಿತ್ತು. ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳು ವಿಶಿಷ್ಟ ಚಾಲೆಂಜ್ ಮೂಲಕ ಮೋಡಿ ಮಾಡಿದ್ದರು. ಇನ್ನು ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಸಹ ತಮ್ಮ ಕಮಾಲ್ ತೋರಿಸಿದ್ದರು.​

ಇದೀಗ ಚಾಲೆಂಜ್ ಸ್ವೀಕರಿಸುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಭಿನ್ನವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿದ್ದಾರೆ. ನೀರು ತುಂಬಿದ ಬಾಟಲ್​ ಕ್ಯಾಪನ್ನು ಹಲವರು ಕಿಕ್ ಮೂಲಕ ಹಾರಿಸಿದರೆ, ಕೊಹ್ಲಿ ಮಾತ್ರ ಬ್ಯಾಟ್ ಮೂಲಕ ಎಗರಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿರುವ ವಿರಾಟ್, ತಡವಾಗಿಯಾದರು ಈ ಚಾಲೆಂಜ್​ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಪ್ರಸ್ತುತ ವೆಸ್ಟ್​ ಇಂಡೀಸ್ ಸರಣಿ ಪ್ರವಾಸದಲ್ಲಿ ಟೀಂ ಇಂಡಿಯಾ ಇದ್ದು, ಈಗಾಗಲೇ ಟಿ20 ಪಂದ್ಯಗಳನ್ನು ಕೊಹ್ಲಿ ಪಡೆ ಗೆದ್ದು ಬೀಗಿದೆ. ಸದ್ಯ ಏಕದಿನ ಪಂದ್ಯವನ್ನಾಡುತ್ತಿರುವ ಭಾರತ 2ನೇ ಪಂದ್ಯವನ್ನು ಎದುರು ನೋಡುತ್ತಿದೆ.


First published:August 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...