Wasim Akram: ಪಾಕಿಸ್ತಾನ ಕ್ರಿಕೆಟ್‌ ಕೋಚ್ ಆಗಲು ಬಯಸುವುದಿಲ್ಲ ಎಂದು ವಾಸಿಂ ಅಕ್ರಂ ಹೇಳಿದ್ದೇಕೆ..?

ಕಳೆದ ತಿಂಗಳು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಮಿಸ್ಬಾ ಉಲ್ ಹಕ್ ಕೆಳಗಿಳಿದರು ಮತ್ತು ವಕಾರ್ ಯೂನಿಸ್ ಸಹ ಬೌಲಿಂಗ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸದ್ಯ, ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮತ್ತು ಆಲ್ ರೌಂಡರ್ ಅಬ್ದುಲ್ ರಜಾಕ್‌ ಮುಂಬರುವ ಐಸಿಸಿ ಟಿ 20 ವಿಶ್ವಕಪ್‌ಗೆ ತಂಡದ ಹಂಗಾಮಿ ಕೋಚ್‌ಗಳಾಗಿದ್ದಾರೆ.

ವಾಸಿಂ ಅಕ್ರಂ

ವಾಸಿಂ ಅಕ್ರಂ

  • Share this:
    ಪಾಕಿಸ್ತಾನದ ಮಾಜಿ ನಾಯಕ ಮತ್ತು ವೇಗದ ಬೌಲಿಂಗ್ ದಂತಕಥೆ ವಾಸಿಂ ಅಕ್ರಂ (Wasim Akram) ಪಾಕ್ ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ (Pakistan Cricket Team Coach) ಆಗಲು ಅಥವಾ ತರಬೇತುದಾರನಾಗಲು ಏಕೆ ಬಯಸುವುದಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. 1992ರ ವಿಶ್ವಕಪ್ ಆಟಗಾರನಾಗಿ ಗೆದ್ದ ಮತ್ತು 1999ರ ಐಸಿಸಿ ವಿಶ್ವಕಪ್‌ನ ಫೈನಲ್‌ಗೆ ತಂಡದ ನಾಯಕತ್ವ ವಹಿಸಿದ್ದ ಅಕ್ರಮ್, ಫ್ರಾಂಚೈಸಿ ಟಿ 20 ಲೀಗ್‌ಗಳಲ್ಲಿ ತರಬೇತುದಾರರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದರು. ಮತ್ತು ಹಲವು ವರ್ಷಗಳಿಂದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಫ್ರಾಂಚೈಸಿಗಳೊಂದಿಗೂ ಸಂಬಂಧ ಹೊಂದಿದ್ದಾರೆ.

    ಕ್ರಿಕೆಟ್ ಪಾಕಿಸ್ಥಾನದ ಬಗ್ಗೆ 'ಕ್ರಿಕೆಟ್ ಕಾರ್ನರ್' ಕಾರ್ಯಕ್ರಮದ ಇತ್ತೀಚಿನ ಸಂವಾದದಲ್ಲಿ, ವಾಸಿಂ ಅಕ್ರಮ್‌ ಅವರು ರಾಷ್ಟ್ರೀಯ ತಂಡಕ್ಕೆ ಏಕೆ ತರಬೇತುದಾರರಾಗಿಲ್ಲ ಎಂದು ಕೇಳಲಾಯಿತು. ಅದಕ್ಕೆ ಅಕ್ರಂ, ಕೋಚಿಂಗ್ ಉದ್ಯೋಗ ಪೂರ್ಣ ಸಮಯ ಬೇಡಿಕೆ ಕೆಲಸ. ನನಗೆ ಅಷ್ಟು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    "ನೀವು ತರಬೇತುದಾರರಾದಾಗ, ತಂಡಕ್ಕೆ ವರ್ಷಕ್ಕೆ ಕನಿಷ್ಠ 200 - 250 ದಿನಗಳನ್ನು ನೀಡಬೇಕಾಗುತ್ತದೆ ಮತ್ತು ಅದು ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ. ನಾನು ಪಾಕಿಸ್ತಾನದಿಂದ, ನನ್ನ ಕುಟುಂಬದಿಂದ ದೂರವಿದ್ದು, ತುಂಬಾ ಕೆಲಸ ನಿರ್ವಹಿಸಬಹುದು ಎಂದು ನಾನು ಭಾವಿಸುವುದಿಲ್ಲ.’’ ಎಂದಿದ್ದಾರೆ. ಹಾಗೆ, ನಾನು ಪಿಎಸ್‌ಎಲ್‌ನಲ್ಲಿ ಹೆಚ್ಚಿನ ಆಟಗಾರರೊಂದಿಗೆ ಸಮಯ ಕಳೆಯುತ್ತೇನೆ, ಅವರೆಲ್ಲರೂ ನನ್ನ ಮೊಬೈಲ್‌ ನಂಬರ್‌ ಹೊಂದಿದ್ದಾರೆ ಮತ್ತು ಆಗಾಗ್ಗೆ ಕರೆ ಮಾಡಿ ಅವರು ನನ್ನ ಸಲಹೆ ಕೇಳುತ್ತಿರುತ್ತಾರೆ ಎಂದೂ ವಾಸಿಂ ಅಕ್ರಂ ಕ್ರಿಕೆಟ್‌ ಪಾಕಿಸ್ತಾನಕ್ಕೆ ಬಗ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

    ಇಷ್ಟೇ ಅಲ್ಲದೆ, ರಾಷ್ಟ್ರೀಯ ತಂಡದ ಕೋಚಿಂಗ್ ಬಗ್ಗೆ ಯೋಚಿಸದಿರಲು ಕಾರಣ ಅಭಿಮಾನಿಗಳ ಅನುಚಿತ ವರ್ತನೆ ಎಂದೂ ವಾಸಿಂ ಅಕ್ರಂ ಉಲ್ಲೇಖಿಸಿದ್ದಾರೆ. ನಾನು ಮೂರ್ಖನಲ್ಲ. ತಂಡವು ಸೋತರೆ, ಜನರು ತಮ್ಮ ತರಬೇತುದಾರರು ಮತ್ತು ಹಿರಿಯರೊಂದಿಗೆ ಹೇಗೆ ತಪ್ಪಾಗಿ ವರ್ತಿಸುತ್ತಾರೆ ಎಂಬುದನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಕೇಳುತ್ತಿದ್ದೇನೆ ಮತ್ತು ನೋಡುತ್ತಿದ್ದೇನೆ ಎಂದು ವೀಕ್ಷಕರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

    ನನ್ನೊಂದಿಗೆ ಯಾರೊಬ್ಬರೂ ಅನುಚಿತವಾಗಿ ವರ್ತಿಸುವುದನ್ನು ನಾನು ಸಹಿಸುವುದಿಲ್ಲ: ವಾಸೀಂ ಅಕ್ರಂ

    ಕೋಚ್‌ ಕ್ರಿಕೆಟ್‌ ಆಡುವುದಿಲ್ಲ. ಆಟಗಾರರೇ ಆಡುತ್ತಾರೆ. ಕೋಚ್‌ ಪ್ಲ್ಯಾನಿಂಗ್‌ಗೆ ಕೇವಲ ಸಹಾಯ ಮಾಡಬಹುದು. ಆದ್ದರಿಂದ, ತಂಡವು ಸೋತರೆ, ಅದಕ್ಕೆ ದೇಶ ಕೋಚ್‌ರನ್ನು ಹೊಣೆಗಾರರನ್ನಾಗಿ ಮಾಡುವಷ್ಟು, ಅವರು ಅಷ್ಟಾಗಿ ಜವಾಬ್ದಾರರಾಗುತ್ತಾರೆ ಎಂದು ಅವರನ್ನು ಭಾವಿಸುವುದಿಲ್ಲ. "ಹಾಗಾಗಿ, ಈ ಕಾರಣಕ್ಕೂ ನಾನು ಕೋಚ್‌ ಆಗಲು ಹೆದರುತ್ತೇನೆ. ಏಕೆಂದರೆ ನನ್ನೊಂದಿಗೆ ಯಾರೊಬ್ಬರೂ ಅನುಚಿತವಾಗಿ ವರ್ತಿಸುವುದನ್ನು ನಾನು ಸಹಿಸುವುದಿಲ್ಲ. ಆದರೆ, ನಾವು (ಪಾಕಿಸ್ತಾನ) ಆ ರೀತಿ ಆಗುತ್ತಿದ್ದೇವೆ. ನಾನು ಜನರನ್ನು, ಅವರ ಉತ್ಸಾಹ ಮತ್ತು ಆಟದ ಉತ್ಸಾಹವನ್ನು ಪ್ರೀತಿಸುತ್ತೇನೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ತೋರಿಸಿದ ತಪ್ಪು ನಡವಳಿಕೆಯನ್ನಲ್ಲ. ನಾವು ಏನೆಂದು ಇದು ತೋರಿಸುತ್ತದೆ. ಬೇರೆ ದೇಶಗಳಲ್ಲಿ ಇದು ಸಂಭವಿಸುವುದನ್ನು ನಾನು ನೋಡಿಲ್ಲ’’ ಎಂದೂ ವಾಸಿಂ ಅಕ್ರಂ ಹೇಳಿದ್ದಾರೆ.

    ಇದನ್ನು ಓದಿ: KKR - MI Playoff Chances: ಐಪಿಎಲ್​ ಪ್ಲೇಆಫ್​ಗೆ ಆಯ್ಕೆಯಾಗಲು ಕೆಕೆಆರ್​ - ಮುಂಬೈ ಇಂಡಿಯನ್ಸ್​ಗೆ ಕಡೆಯ ಅವಕಾಶ

    ಕಳೆದ ತಿಂಗಳು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಮಿಸ್ಬಾ ಉಲ್ ಹಕ್ ಕೆಳಗಿಳಿದರು ಮತ್ತು ವಕಾರ್ ಯೂನಿಸ್ ಸಹ ಬೌಲಿಂಗ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸದ್ಯ, ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮತ್ತು ಆಲ್ ರೌಂಡರ್ ಅಬ್ದುಲ್ ರಜಾಕ್‌ ಮುಂಬರುವ ಐಸಿಸಿ ಟಿ 20 ವಿಶ್ವಕಪ್‌ಗೆ ತಂಡದ ಹಂಗಾಮಿ ಕೋಚ್‌ಗಳಾಗಿದ್ದಾರೆ.
    Published by:HR Ramesh
    First published: