Ind vs Aus: ಚೊಚ್ಚಲ ಪಂದ್ಯದಲ್ಲೇ 30 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದ ಸುಂದರ್-ಶಾರ್ದೂಲ್..!

ವಾಷಿಂಗ್ಟನ್ ಸುಂದರ್ (62) ಮತ್ತು ಶಾರ್ದೂಲ್ ಠಾಕೂರ್ (67) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ ಬ್ರಿಸ್ಬೇನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ 336 ರನ್ ಗಳಿಸಿತು.

washington sundar - shardul thakur

washington sundar - shardul thakur

  • Share this:
    ಬ್ರಿಸ್ಬೇನ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಹೊಸ ದಾಖಲೆ ಬರೆದಿದ್ದಾರೆ. ಚೊಚ್ಚಲ ಪಂದ್ಯವಾಡುತ್ತಿರುವ ಸುಂದರ್ ಹಾಗೂ ಶಾರ್ದೂಲ್ ತಲಾ 3 ವಿಕೆಟ್​ ಉರುಳಿಸಿ ಮಿಂಚಿದ್ದರು. ಬಳಿಕ ಬ್ಯಾಟಿಂಗ್​ನಲ್ಲೂ ಅರ್ಧಶತಕ ಬಾರಿಸಿ ಗಮನ ಸೆಳೆದರು. 186 ರನ್ ಗೆ 6ನೇ ವಿಕೆಟ್ ಪತನವಾದಾಗ ಒಂದಾದ ಈ ಜೋಡಿ ಶತಕದ ಜೊತೆಯಾಟವಾಡಿದರು. ಈ ಮೂಲಕ 30 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.

    ಬ್ರಿಸ್ಬೇನ್ ಗಾಬ್ಬಾ ಮೈದಾನದಲ್ಲಿ 1991ರಲ್ಲಿ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ 58 ರನ್​ ಜೊತೆಯಾಟವಾಡಿರುವುದು 7ನೇ ವಿಕೆಟ್​ ಅತ್ಯುತ್ತಮ ಜೊತೆಯಾಟವಾಗಿತ್ತು. ಆದರೆ ಸುಂದರ್ ಹಾಗೂ ಶಾರ್ದೂಲ್ ಜೋಡಿ 59 ರನ್​ ಗಳಿಸುವುದರೊಂದಿಗೆ 3 ದಶಕಗಳ ಹಿಂದಿನ ದಾಖಲೆಯನ್ನು ಮುರಿದರು. ಈ ಮೂಲಕ ಗಬ್ಬಾ ಮೈದಾನದಲ್ಲಿ 7ನೇ ವಿಕೆಟ್​ ಅತೀ ಹೆಚ್ಚು ರನ್ ಜೊತೆಯಾಟವಾಡಿದ ಜೋಡಿ ಎಂಬ ಹಿರಿಮೆಗೆ ಶಾರ್ದೂಲ್-ಸುಂದರ್ ಪಾತ್ರರಾಗಿದ್ದಾರೆ.



    ಇನ್ನು ವಾಷಿಂಗ್ಟನ್ ಸುಂದರ್ (62) ಮತ್ತು ಶಾರ್ದೂಲ್ ಠಾಕೂರ್ (67) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ ಬ್ರಿಸ್ಬೇನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ 336 ರನ್ ಗಳಿಸಿತು. ಆಸ್ಟ್ರೇಲಿಯಾದ 369 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಭಾರತ 33 ರನ್​ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಆಸ್ಟ್ರೇಲಿಯಾ 3ನೇ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ಮುನ್ನಡೆಯನ್ನು 54 ರನ್​ಗೆ ಹೆಚ್ಚಿಸಿಕೊಂಡು ತುಸು ಮೇಲುಗೈ ಸ್ಥಿತಿಯಲ್ಲಿದೆ.
    Published by:zahir
    First published: