HOME » NEWS » Sports » CRICKET WASHINGTON SUNDAR HELPS INDIA GAIN 160 RUNS FIRST INNINGS LEAD AGAINST ENGLAND SNVS

India vs Eng – ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 160 ರನ್ ಮುನ್ನಡೆ; ಶತಕವಂಚಿತ ವಾಷಿಂಗ್ಟನ್

ಇಂಗ್ಲೆಂಡ್ ತಂಡದ 205 ರನ್​ಗಳ ಮೊದಲ ಇನ್ನಿಂಗ್ಸ್ಗೆ ಪ್ರತಿಯಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 365 ರನ್ ಗಳಿಸಿ 160 ರನ್​ಗಳ ಅಮೂಲ್ಯ ಮುನ್ನಡೆ ಪಡೆದಿದೆ. ಇದರೊಂದಿಗೆ ಭಾರತದ ಗೆಲುವಿನ ಆಸೆ ಗಟ್ಟಿಗೊಂಡಿದೆ.

cricketnext
Updated:March 6, 2021, 11:54 AM IST
India vs Eng – ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 160 ರನ್ ಮುನ್ನಡೆ; ಶತಕವಂಚಿತ ವಾಷಿಂಗ್ಟನ್
ವಾಷಿಂಗ್ಟನ್ ಸುಂದರ್
  • Cricketnext
  • Last Updated: March 6, 2021, 11:54 AM IST
  • Share this:
ಅಹ್ಮದಾಬಾದ್(ಮಾ. 06): ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ತಂಡ 160 ರನ್​ಗಳ ಅತ್ಯಮೂಲ್ಯ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ. ಇಂಗ್ಲೆಂಡ್​ನ 205 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಭಾರತದ ಇನ್ನಿಂಗ್ಸ್ 365 ರನ್​ಗೆ ಅಂತ್ಯಗೊಂಡಿದೆ. ಇದರೊಂದಿಗೆ ಭಾರತ 160 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.

ನಿನ್ನೆ ಭಾರತದ ಇನ್ನಿಂಗ್ಸಲ್ಲಿ ರಿಷಭ್ ಪಂತ್ ಅವರ ಭರ್ಜರಿ ಶತಕ ಹೈಲೈಟ್ ಆಗಿತ್ತು. ಇವತ್ತು ಮೂರನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಅವರ ಆಟ ಎಲ್ಲರನ್ನೂ ಸೆಳೆಯಿತು. ಶತಕದತ್ತ ದಾಪುಗಾಲಿಕ್ಕುತ್ತಿದ್ದ ಅವರಿಗೆ ಬೇರೆಯವರಿಂದ ಸಹಯೋಗ ಸಿಗದೆ ಕೇವಲ ನಾಲ್ಕು ರನ್ನಿಂಗ್ ಶತಕವಂಚಿತರಾದರು. ನಿನ್ನೆ ಏಳು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದ ಭಾರತದ ಇನ್ನಿಂಗ್ಸ್​ಗೆ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಪುಷ್ಟಿ ನೀಡುವುದನ್ನು ಮುಂದುವರಿಸಿದರು. ಇವರಿಬ್ಬರೂ ಎಂಟನೇ ವಿಕೆಟ್​ಗೆ 106 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಭಾರತಕ್ಕೆ ಒಳ್ಳೆಯ ಮುನ್ನಡೆ ತಂದುಕೊಟ್ಟರು. ಅಕ್ಷರ್ ಪಟೇಲ್ ಔಟಾಗುತ್ತಿದ್ದಂತೆಯೇ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಶೂನ್ಯ ಸಂಪಾದನೆ ಮಾಡಿ ಪೆವಿಲಿನ್​ಗೆ ಮರಳಿದರು. ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ: Rohit Sharma: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ..!

ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ತಲುಪಬೇಕಾದರೆ ಈ ಟೆಸ್ಟ್ ಪಂದ್ಯ ಗೆಲ್ಲುವುದು ಬಹಳ ಮುಖ್ಯವಾಗಿದೆ. 2-1ರಿಂದ ಮುನ್ನಡೆ ಹೊಂದಿರುವ ಭಾರತ ಈ ಸರಣಿಯನ್ನು ಗೆದ್ದರೆ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೆ ಕ್ವಾಲಿಫೈ ಆಗಲಿದೆ.

ಸ್ಕೋರು ವಿವರ:

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 75.5 ಓವರ್ 205/10

ಭಾರತ ಮೊದಲ ಇನ್ನಿಂಗ್ಸ್ 114.4 ಓವರ್ 365/10(ರಿಷಭ್ ಪಂತ್ 101, ವಾಷಿಂಗ್ಟನ್ ಸುಂದರ್ ಅಜೇಯ 96, ರೋಹಿತ್ ಶರ್ಮಾ 49, ಅಕ್ಷರ್ ಪಟೇಲ್ 43, ಅಜಿಂಕ್ಯ ರಹಾನೆ 27 ರನ್ – ಬೆನ್ ಸ್ಟೋಕ್ಸ್ 89/4, ಜೇಮ್ಸ್ ಆಂಡರ್ಸನ್ 44/3, ಜ್ಯಾಕ್ ಲೀಚ್ 89/2)
Published by: Vijayasarthy SN
First published: March 6, 2021, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories