ಒಂದೇ ದಿನದಲ್ಲಿ ಕ್ರಿಸ್ ಗೇಲ್ ವಿಶ್ವ ದಾಖಲೆಯನ್ನು ಸರಿಗಟ್ಟಿದ ಯುವ ಬ್ಯಾಟ್ಸ್​ಮನ್..!

2018 ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಫ್ಘಾನಿಸ್ತಾನದ ಬ್ಯಾಟ್ಸ್​ಮನ್ ಮೊಹಮ್ಮದ್ ಶೆಹಝಾದ್ ಅಬುಧಾಬಿ ಟಿ10 ಲೀಗ್​ನಲ್ಲಿ ಇತಿಹಾಸ ಬರೆದಿದ್ದರು. ಶಾರ್ಜಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರಜಪೂತ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶೆಹಝಾದ್ ಅಬ್ಬರಿಸಿದ್ದರು.

waseem

waseem

 • Share this:
  ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ-10 ಲೀಗ್​ನಲ್ಲಿ ಗುರುವಾರ ನಡೆದ ಪಂದ್ಯವು ದಾಖಲೆಯೊಂದಕ್ಕೆ ಸಾಕ್ಷಿಯಾಗಿತ್ತು. ಅದು ಕೂಡ ಸ್ಪೋಟಕ ದಾಂಡಿಗ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಫೆಬ್ರವರಿ 3 ರಂದು ನಡೆದ ಮರಾಠಾ ಅರೇಬಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟೀಂ ಅಬುಧಾಬಿ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಮೊದಲ ಓವರ್​ನಿಂದಲೇ ಅಬ್ಬರಿಸಿದ್ದರು.

  ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ ಕೇವಲ 22 ಎಸೆತಗಳಲ್ಲಿ 84 ರನ್ ಚಚ್ಚಿದರು. ಇದರಲ್ಲಿ 9 ಅಮೋಘ ಸಿಕ್ಸರ್, 6 ಭರ್ಜರಿ ಬೌಂಡರಿಗಳು ಒಳಗೊಂಡಿತ್ತು. ಈ ಮೂಲಕ ಗೇಲ್ ಟಿ10 ಕ್ರಿಕೆಟ್​ನ ಅತೀ ವೇಗದ ಅರ್ಧಶತಕ ದಾಖಲೆ ಬರೆದರು. ಕ್ರಿಸ್ ಗೇಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಬುಧಾಬಿ ತಂಡ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

  ಇದಕ್ಕೂ ಮೊದಲು 2018 ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಫ್ಘಾನಿಸ್ತಾನದ ಬ್ಯಾಟ್ಸ್​ಮನ್ ಮೊಹಮ್ಮದ್ ಶೆಹಝಾದ್ ಅಬುಧಾಬಿ ಟಿ10 ಲೀಗ್​ನಲ್ಲಿ ಇತಿಹಾಸ ಬರೆದಿದ್ದರು. ಶಾರ್ಜಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರಜಪೂತ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶೆಹಝಾದ್ ಅಬ್ಬರಿಸಿದ್ದರು. ಸಿಂಧೀಸ್ ತಂಡ ನೀಡಿದ 94 ರನ್​ಗಳ ಟಾರ್ಗೆಟ್​ನ್ನು ಶೆಹಝಾದ್-ಮೆಕಲಂ ಜೋಡಿ ಕೇವಲ 4 ಓವರ್​ನಲ್ಲಿ ಚೇಸ್ ಮಾಡಿತ್ತು.

  ಈ ವೇಳೆ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಟಿ10 ಲೀಗ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ದಾಖಲೆಯನ್ನು ಶೆಹಝಾದ್ ಬರೆದಿದ್ದರು. ಅಲ್ಲದೆ ಈ ಪಂದ್ಯದಲ್ಲಿ 16 ಎಸೆತಗಳಲ್ಲಿ 74 ರನ್ ಚಚ್ಚಿದ್ದರು. ಈ ವೇಳೆ ಶೆಹಝಾದ್ ಬ್ಯಾಟ್​ನಿಂದ ಸಿಡಿದದ್ದು 8 ಭರ್ಜರಿ ಸಿಕ್ಸರ್, 6 ಸೂಪರ್ ಫೋರ್​ಗಳು. ಬುಧವಾರ ಕ್ರಿಸ್ ಗೇಲ್ 12 ಎಸೆತಗಳಲ್ಲೇ ಅರ್ಧಶತಕ ಪೂರೈಸುವ ಮೂಲಕ 2 ವರ್ಷಗಳ ಹಿಂದೆ ಶೆಹಝಾದ್ ನಿರ್ಮಿಸಿದ್ದ ಟಿ10 ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.

  ಈ ದಾಖಲೆ ನಿರ್ಮಾಣವಾಗಿ 24 ಗಂಟೆಯೊಳಗೆ ಇದೀಗ ಯುಎಇ ತಂಡದ ಆಟಗಾರ ವಾಸಿಂ ಮೊಹಮ್ಮದ್ ಗೇಲ್-ಶೆಹಝಾದ್ ದಾಖಲೆಯನ್ನು ಸರಿಗಟ್ಟುವ ಮೂಲಕ ಗಮನ ಸೆಳೆದಿದ್ದಾರೆ. ನಾರ್ತನ್ ವಾರಿಯರ್ಸ್-ಪುಣೆ ಡೆವಿಲ್ಸ್ ನಡುವಣ ಪಂದ್ಯದಲ್ಲಿ ಕಣಕ್ಕಿಳಿದ ವಾಸಿಂ ಸಹ 12 ಎಸೆತಗಳಲ್ಲಿ 50 ರನ್ ಪೂರೈಸಿದರು. ಅಲ್ಲದೆ 13 ಎಸೆತಗಳಲ್ಲಿ 56 ರನ್ ಸಿಡಿಸುವ ಮೂಲಕ ನಾರ್ತನ್ ವಾರಿಯರ್ಸ್ ತಂಡಕ್ಕೆ ಜಯ ತಂದುಕೊಟ್ಟರು.  ಈ ಸ್ಪೋಟಕ ಇನಿಂಗ್ಸ್​ನಲ್ಲಿ ವಾಸಿಂ 3 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ವಾಸಿಂ ಅವರ ಬಿರುಸಿನ ಇನಿಂಗ್ಸ್ ನೆರವಿನಿಂದ ಪುಣೆ ಡೆವಿಲ್ಸ್ ನೀಡಿದ 97 ರನ್​ಗಳ ಟಾರ್ಗೆಟ್​ನ್ನು 4.3 ಓವರ್​ನಲ್ಲಿ ನಾರ್ತನ್ ವಾರಿಯರ್ಸ್ ಚೇಸ್ ಮಾಡಿತು.
  Published by:zahir
  First published: