MS Dhoni: ಧೋನಿ ಅಭಿಮಾನಿಗಳು ನನಗೆ ಮನ ಬಂದಂತೆ ಬೈದಿದ್ದರು ಎಂದ ಆಕಾಶ್ ಛೋಪ್ರ!

ಈ ವಿಚಾರ ಧೋನಿ ಅಭಿಮಾನಿಗಳ ಸಿಟ್ಟಗೆ ಕಾರಣವಾಗಿತ್ತು. ಧೋನಿಯನ್ನು ಕೈಬಿಟ್ಟ ಕಾರಣಕ್ಕೆ ಚೋಪ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತಾಯಿತು. ಅಷ್ಟೆ ಅಲ್ಲದೆ 15 ದಿನಗಳಿಗೂ ಹೆಚ್ಚು ಕಾಲ ಸೋಷಿಯಲ್‌ ಮೀಡಿಯಾಗಳಿಂದ ದೂರ ಉಳಿದಿದ್ದರಂತೆ.

news18-kannada
Updated:May 20, 2020, 10:02 AM IST
MS Dhoni: ಧೋನಿ ಅಭಿಮಾನಿಗಳು ನನಗೆ ಮನ ಬಂದಂತೆ ಬೈದಿದ್ದರು ಎಂದ ಆಕಾಶ್ ಛೋಪ್ರ!
ಆಕಾಶ್ ಛೋಪ್ರ ಹಾಗೂ ಎಂಎಸ್ ಧೋನಿ.
  • Share this:
ಮಹೇಂದ್ರ ಸಿಂಗ್ ಧೋನಿ, ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಪ್ರಮುಖರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯಗಳಲ್ಲಿ ಅತ್ಯಂತ ಆಕ್ರಮಣಕಾರಿ ತಂಡವಾಗಿ ಪರಿವರ್ತನೆಗೊಂಡಿತು. 2011ರ ವಿಶ್ವಕಪ್, 2007ರ ಟಿ-20 ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಐಸಿಸಿಯ ಮೂರು ಪ್ರಮುಖ ಟ್ರೋಫಿಗಳಲ್ಲಿ ಗೆಲುವು ಸಾಧಿಸಿದ ಭಾರತದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಇವರದ್ದು!.

ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಅನೇಕ ಸಾಧನೆ ಮಾಡಿರುವ ಧೋನಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಸದ್ಯ ಧೋನಿ ಮೈದಾನಕ್ಕಿಳಿಯದೆ ಅರ್ಧ ವರ್ಷವೇ ಕಳೆದಿದೆ. ಧೋನಿ ಕಮ್​ಬ್ಯಾಕ್​​ಗೆ ಸೇತುವೆಯಂತಿದ್ದ ಐಪಿಎಲ್ ಕೂಡ ಕೊರೋನಾ ವೈರಸ್ ಲಾಕ್​ಡೌನ್​ನಿಂದಾಗಿ ಮುಂದಕ್ಕೆ ಹೋಗಿದೆ.

Sachin Tendulkar: ಮಗನ ಹೇರ್​ಕಟ್​ ಮಾಡಿದ ಸಚಿನ್​​ ತೆಂಡೂಲ್ಕರ್​​!; ವಿಡಿಯೋ ವೈರಲ್​

ಇದೇ ಕಾರಣಕ್ಕೆ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಛೋಪ್ರ, ಮುಂಬರುವ ಐಸಿಸಿ ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಹೆಸರಿಸಿದ್ದ ತಮ್ಮ ತಂಡದಲ್ಲಿ ಧೋನಿ ಹೆಸರನ್ನು ಕೈಬಿಟ್ಟಿದ್ದರು. ಧೋನಿ ಸ್ಥಾನದಲ್ಲಿ ರಿಷಭ್‌ ಪಂತ್‌ಗೆ ಅವಕಾಶ ನೀಡಿರುವುದಾಗಿ ಹೇಳಿದ್ದರು.

ಆದರೆ, ಈ ವಿಚಾರ ಧೋನಿ ಅಭಿಮಾನಿಗಳ ಸಿಟ್ಟಗೆ ಕಾರಣವಾಗಿತ್ತು. ಧೋನಿಯನ್ನು ಕೈಬಿಟ್ಟ ಕಾರಣಕ್ಕೆ ಚೋಪ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತಾಯಿತು. ಅಷ್ಟೆ ಅಲ್ಲದೆ 15 ದಿನಗಳಿಗೂ ಹೆಚ್ಚು ಕಾಲ ಸೋಷಿಯಲ್‌ ಮೀಡಿಯಾಗಳಿಂದ ದೂರ ಉಳಿದಿದ್ದರಂತೆ. ಇದನ್ನು ಇತ್ತೇಚೆಗೆ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಅಜಿತ್‌ ಅಗರ್ಕರ್‌ ಜೊತೆಗಿನ ಚರ್ಚೆ ವೇಳೆ ಹೇಳಿಕೊಂಡಿದ್ದಾರೆ.

ಪ್ರೇಕ್ಷಕರಿಲ್ಲದೆ ಕ್ರಿಕೆಟ್ ಆಡುವುದು ಎಂದರೆ ವಧುವೇ ಇಲ್ಲದೆ ಮದುವೆ ಮಾಡಿದಂತೆ; ಅಖ್ತರ್​​

"ಧೋನಿ ಅಭಿಮಾನಿಗಳು ನನಗೆ ಸಿಕ್ಕಾಪಟ್ಟೆ ಬೈದಿದ್ದರು. ಹೀಗಾಗಿ ಅನಿವಾರ್ಯವಾಗಿ ಸಾಮಾಜಿಕ ತಾಲತಾಣಗಳಿಂದ ನಾನು ಕೆಲ ದಿನಗಳ ಕಾಲ ದೂರ ಉಳಿಯುವಂತಾಯಿತು. ಜನ ಬೈಯುತ್ತಲೇ ಇದ್ದರು, ನನ್ನ ಮಕ್ಕಳನ್ನೆಲ್ಲಾ ಬಯ್ಯಲಾರಂಭಿಸಿದರು. ಆಗಿದ್ದು ಆಯಿತು ಕ್ಷಮಿಸಿಬಿಡಿ ಎಂದು ಅಂಗಲಾಚಿದ್ದೆ," ಎಂದು ಆಕಾಶ್‌ ಚೋಪ್ರಾ ಹೇಳಿದ್ದಾರೆ.
First published: May 20, 2020, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading