ಹೃತಿಕ್​ ರೋಷನ್​ ವೀರ್ಯದಾನ ಮಾಡಬೇಕಂತೆ!; ಕ್ರಿಕೆಟ್ ಕಾಮೆಂಟೇಟರ್ ಭಾವನಾ ಸಲಹೆ!

ಇತ್ತೀಚೆಗಷ್ಟೆ ಭಾವನ ಅವರು 'ವಾರ್' ಸಿನಿಮಾ ವೀಕ್ಷಿಸಿದ್ದಾರಂತೆ. ಇದರಲ್ಲಿ ಹೃತಿಕ್ ಅವರು ಲುಕ್ ಕಂಡು ಫಿದಾ ಆಗಿದ್ದಾರೆ. ಹೃತಿಕ್ ತನ್ನ ಜೀನ್ಸ್​ ಮುಂದುವರೆಸಲು ಇಚ್ಚಿಸಿದರೆ ಅವರು ವೀರ್ಯದಾನ ಮಾಡಬೇಕು ಎಂದು ಭಾವನ ಅವರು ಟ್ವೀಟ್ ಮಾಡಿದ್ದಾರೆ.

ಹೃತಿಕ್ ರೋಷನ್ ಹಾಗೂ ಭಾವನಾ

ಹೃತಿಕ್ ರೋಷನ್ ಹಾಗೂ ಭಾವನಾ

  • Share this:
ಬೆಂಗಳೂರು (ಅ. 08): ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯ 'ವಾರ್' ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರ ಕೇವಲ ಐದು ದಿನಗಳಲ್ಲಿ ಗಳಿಸಿದ್ದು ಬರೋಬ್ಬರಿ 166.25 ಕೋಟಿ ರೂಪಾಯಿ! ಗಳಿಕೆ ವಿಚಾರದಲ್ಲಿ 'ವಾರ್' ಸಿನಿಮಾ ದಾಖಲೆಗಳನ್ನೇ ಬರೆದಿವೆ. ಈ ಮಧ್ಯೆ ಅವರ ಅಭಿಮಾನಿಯೋರ್ವಳು ಹೃತಿಕ್​ ಬಳಿ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.

ತಮಿಳುನಾಡಿನ ಕ್ರಿಕೆಟ್ ಕಾಮೆಂಟೇಟರ್ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ಬೇಡಿಕೆ ಇಟ್ಟವರು. ಹ್ಯಾಂಡ್ಸಮ್​ ಹಂಕ್​ ಹೃತಿಕ್ ಅವರು ವೀರ್ಯದಾನ ಮಾಡಬೇಕು ಎಂದು  ಭಾವನಾ ಬಾಲಕೃಷ್ಣನ್ ಎಂಬವರು ಸಲಹೆ ನೀಡಿದ್ದಾರೆ. ತಮ್ಮ ಜೀನ್ಸ್​ ಮುಂದುವರೆಸಲು ಹೃತಿಕ್ ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಅವರು ಕೋರಿದ್ದಾರೆ.

ಧೋನಿ ಮಗಳು ಜೀವಾಳ ಸನ್​ಗ್ಲಾಸ್ ಹೊತ್ತೊಯ್ದ ರಣವೀರ್ ಸಿಂಗ್; ಫೋಟೋ ವೈರಲ್

ಇತ್ತೀಚೆಗಷ್ಟೆ ಭಾವನಾ ಅವರು 'ವಾರ್' ಸಿನಿಮಾ ವೀಕ್ಷಿಸಿದ್ದಾರಂತೆ. ಇದರಲ್ಲಿ ಹೃತಿಕ್ ಅವರು ಲುಕ್ ಕಂಡು ಫಿದಾ ಆಗಿದ್ದಾರೆ. ಹೃತಿಕ್ ತನ್ನ ಜೀನ್ಸ್​ ಮುಂದುವರೆಸಲು ಇಚ್ಚಿಸಿದರೆ ಅವರು ವೀರ್ಯದಾನ ಮಾಡಬೇಕು ಎಂದು ಭಾವನ ಅವರು ಟ್ವೀಟ್ ಮಾಡಿದ್ದಾರೆ. ಈರೀತಿ ಭಾವನೆ ಕೇವಲ ನನ್ನಲ್ಲಿ ಮಾತ್ರವಲ್ಲ ಅನೇಕ ಯುವತಿಯರಲ್ಲಿದೆ ಎಂದು ಹೇಳಿದ್ದಾರೆ.

 ಸದ್ಯ 'ವಾರ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಬಾಲಿವುಡ್ ಇತಿಹಾಸದಲ್ಲಿ ಬಿಗ್ ಓಪನಿಂಗ್ ಪಡೆದುಕೊಂಡ ಸಿನಿಮಾಗಳ ಪೈಕಿ ‘ವಾರ್’ ಮೊದಲ ಸ್ಥಾನದಲ್ಲಿದೆ.

IPL: ಐಪಿಎಲ್ ಹರಾಜಿನಲ್ಲಿ ನಡೆದಿತ್ತು ಊಹಿಸಲಾಗದ ಘಟನೆ; ಏನದು ಗೊತ್ತಾ..?

ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 53.10 ಕೋಟಿ ರೂಪಾಯಿ. 2019ರಲ್ಲಿ ತೆರೆಕಂಡ ಸಿನಿಮಾಗಳ ಪೈಕಿ ವೇಗವಾಗಿ 100 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ ಎನ್ನುವ ಖ್ಯಾತಿಗೂ ಪಾತ್ರವಾಗಿದೆ ವಾರ್.

First published: