• Home
 • »
 • News
 • »
 • sports
 • »
 • U19 ಫೈನಲ್​ನಲ್ಲಿ ಭಾರತೀಯರ ವಿರುದ್ಧ ಹೊಡೆದಾಡಲು ಬಾಂಗ್ಲಾ ನೀಡಿದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

U19 ಫೈನಲ್​ನಲ್ಲಿ ಭಾರತೀಯರ ವಿರುದ್ಧ ಹೊಡೆದಾಡಲು ಬಾಂಗ್ಲಾ ನೀಡಿದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಮೈದಾನದಲ್ಲಿ ಕೈ ಮಿಲಾಯಿಸುತ್ತಿರುಯವ ಉಭಯ ತಂಡದ ಆಟಗಾರರು.

ಮೈದಾನದಲ್ಲಿ ಕೈ ಮಿಲಾಯಿಸುತ್ತಿರುಯವ ಉಭಯ ತಂಡದ ಆಟಗಾರರು.

India vs Bangladesh Cricket Fight: 2018ರ ಏಷ್ಯಾ ಕಪ್‌ ಸೆಮಿಫೈನಲ್‌, 2019 ಏಷ್ಯಾ ಕಪ್‌ ಫೈನಲ್‌ನಲ್ಲಿ ನಾವು ಭಾರತ ವಿರುದ್ಧ ಸೋಲು ಅನುಭವಿಸಿದ್ದೆವು. ಅದಾದ ಬಳಿಕ ನಮ್ಮನ್ನು ಭಾರತದ ಆಟಗಾರರು ನಮ್ಮದೇ ನೆಲದಲ್ಲಿ ಅಣಕಿಸಿದ್ದರು.

 • Share this:

  ಐಸಿಸಿ ಅಂಡರ್-19 ವಿಶ್ವಕಪ್​ ಫೈನಲ್​ನಲ್ಲಿ ಭಾರತ ವಿರುದ್ಧ ಗೆದ್ದಾಗ ಬಾಂಗ್ಲಾ ಅಂಡರ್-19 ತಂಡದ ಆಟಗಾರರು ವರ್ತನೆ ಕ್ರಿಕೆಟ್ ಅಂಗಳದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ವಿಶ್ವಕಪ್ ಪ್ರಶಸ್ತಿ ಗೆದ್ದ ಖುಷಿಯಲ್ಲಿ ಮೈದಾನಕ್ಕಿಳಿದ ಬಾಂಗ್ಲಾ ತಂಡ ಹಾಗೂ ಭಾರತದ ಕಿರಿಯರ ನಡುವೆ ಮಾತಿನ ಚಕಮಕಿ ನಡೆದಿದ್ದಲ್ಲದೇ, ಗಲಾಟೆ ಕೈ ಕೈ ಮಿಲಾಯಿಸುವ ಹಂತದವರೆಗೂ ಹೋಗಿತ್ತು.


  ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಭಾರತದ ಇಬ್ಬರು, ಬಾಂಗ್ಲಾದ ಮೂವರು ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿತು. ಸದ್ಯ ಆ ಘಟನೆಯನ್ನು ಬಾಂಗ್ಲಾ ತಂಡದ ಸದಸ್ಯ ಶೊರಿಫುಲ್ ಇಸ್ಲಾಂ ಸಮರ್ಥಿಸಿಕೊಂಡು ಟೀಕೆಗೆ ಗುರಿಯಾಗಿದ್ದಾರೆ.  Happy Birthday AB de Villiers: ವಿಶ್ವದ ಪ್ರೀತಿಯ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಸಂಭ್ರಮ; ಇಲ್ಲಿದೆ ಎಬಿಡಿಯ ಕುತೂಹಲಕಾರಿ ಮಾಹಿತಿ!


  "ಅಂಡರ್​-19 ವಿಶ್ವಕಪ್​ನಲ್ಲಿ​ ಸೋತರೆ ಯಾವರೀತಿ ಪ್ರತಿಕ್ರಿಯೆ ನೀಡುತ್ತದೆ ಎಂದು ನೋಡಲು ನಾವು ಬಯಸಿದ್ದೆವೆ" ಎಂದು ಬಾಂಗ್ಲಾ ಅಂಡರ್​-19 ತಂಡದ ವೇಗಿ ಶೋರಿಫುಲ್ ಇಸ್ಲಾಂ ಹೇಳಿದ್ದಾರೆ.


  "ಫೈನಲ್ ಪಂದ್ಯ ನಡೆಯುವ ಮೊದಲು​ ಭಾರತ ಎಲ್ಲಾದರು ಗೆದ್ದರೆ ಯಾವರೀತಿ ವರ್ತಿಸುತ್ತದೆ ಎಂಬುದನ್ನು ನಾನು ಯೋಚಿಸಿದ್ದೆ. ಹೀಗಾಗಿ ನಾವು ಗೆಲ್ಲಲೇ ಬೇಕೆಂದು ಕೊನೆಯ ಗಳಿಗೆಯವರೆಗೂ ಸೋಲು ಒಪ್ಪಿಕೊಳ್ಳದೆ ಹೋರಾಡಿದೆವು. ಅದರಂತೆ ಗೆಲುವು ಸಾಧಿಸಿದೆವು"


  ಟಾರ್ಗೆಟ್ 223; ಗುರಿ ಮುಟ್ಟಿದ್ದು ಕೇವಲ 19.1 ಓವರ್​ನಲ್ಲಿ; ಇಂಗ್ಲೆಂಡ್ ನಾಯಕನ ಸಿಡಿಲಬ್ಬರದ ಬ್ಯಾಟಿಂಗ್!


  "2018ರ ಏಷ್ಯಾ ಕಪ್‌ ಸೆಮಿಫೈನಲ್‌, 2019 ಏಷ್ಯಾ ಕಪ್‌ ಫೈನಲ್‌ನಲ್ಲಿ ನಾವು ಭಾರತ ವಿರುದ್ಧ ಸೋಲು ಅನುಭವಿಸಿದ್ದೆವು. ಅದಾದ ಬಳಿಕ ನಮ್ಮನ್ನು ಭಾರತದ ಆಟಗಾರರು ನಮ್ಮದೇ ನೆಲದಲ್ಲಿ ಅಣಕಿಸಿದ್ದರು. ಆದರೆ, ಅದಕ್ಕೆ ನಾವು ಯಾವುದೇ ಪ್ರತಿಕ್ರಿಯೆ ನೀಡದೆ ತುಂಬಾ ಸಮಾಧಾನದಿಂದ ಇದ್ದೆವು. ಸರಿಯಾದ ಸಮಯಕ್ಕಾಗಿ ನಾವು ಕಾಯುತ್ತಿದ್ದೆವು"


  "ವಿಶ್ವಕಪ್​ ಫೈನಲ್​ನಲ್ಲಿ ನಾವು ಗೆದ್ದು ಬಿಟ್ಟೆವು. ಬೇರೆಯವರಿಗೆ ಹೀಯಾಳಿಸಿದಾಗ ಆಗುವ ನೋವನ್ನು ಅವರಿಗೂ ಗೊತ್ತುಪಡಿಸುವುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ವಿಶ್ವಕಪ್​ ಗೆದ್ದ ಬಳಿಕ ನಮ್ಮ ವರ್ತನೆ ಹಾಗಿತ್ತು" ಎಂದು ಶೋರಿಫುಲ್ ಇಸ್ಲಾಂ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.


  Published by:Vinay Bhat
  First published: