ನಿನ್ನ ಗಬ್ಬಾಗೆ ಕರೆದೊಯ್ಯುವೆ, ನೀ ಭಾರತಕ್ಕೆ ಬಾ: ಆಸೀಸ್ ಆಟಗಾರನಿಗೆ ಅಶ್ವಿನ್ ತಿರುಗೇಟು..!

ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್​ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.

paine_ashwin

paine_ashwin

 • Share this:
  ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿದೆ. ನಾಲ್ಕು ದಿನಗಳ ಕಾಲ ಮೇಲುಗೈ ಸಾಧಿಸಿದ್ದ ಆಸೀಸ್ ಪಡೆಗೆ ಗೆಲುವು ಸಿಗದಂತೆ ನೋಡಿಕೊಳ್ಳುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಅದರಲ್ಲೂ ನಾಲ್ಕನೇ ಇನಿಂಗ್ಸ್​ನಲ್ಲಿ 100 ಅಧಿಕ ಓವರ್ ಬ್ಯಾಟಿಂಗ್ ಮಾಡಿ ಭಾರತ ಆಲೌಟ್ ಆಗದೇ ಉಳಿದು ತನ್ನ ಟೆಸ್ಟ್ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದೆ.

  ಇನ್ನು ಐದನೇ ದಿನ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಮೇಲುಗೈ ಸಾಧಿಸುತ್ತಿದ್ದಂತೆ, ಅತ್ತ ಆಸೀಸ್ ನಾಯಕ ವಿಕೆಟ್ ಕೀಪರ್ ಟಿಮ್ ಪೈನ್ ಹೇಗಾದರೂ ಮಾಡಿ ಪಂದ್ಯವನ್ನು ಗೆಲ್ಲಬೇಕೆಂದು ಬಯಸಿದ್ದರು. ಹಲವು ಬಾರಿ ಬ್ಯಾಟ್ಸ್​ಮನ್​ಗಳ ಏಕಾಗ್ರತೆಗೆ ಭಂಗ ತರುವ ಪ್ರಯತ್ನಗಳನ್ನು ಮಾಡಿದ್ದರು. ಅದರಲ್ಲೂ ಅಶ್ವಿನ್ ಬ್ಯಾಟಿಂಗ್ ಮಾಡುವಾಗ ಕೆಣಕಲು ಯತ್ನಿಸಿದ್ದರು.

  ಭಾರತದ 2ನೇ ಇನಿಂಗ್ಸ್ 122ನೇ ಓವರ್‌ನಲ್ಲಿ ಅಶ್ವಿನ್ ಅವರನ್ನು ಕೀಪರ್ ಪೈನ್ ಸ್ಲೆಡ್ಜ್ ಮಾಡಿದರು. ನಾವು ನಿಮ್ಮನ್ನು ಗಬ್ಬಾಗೆ ಕರೆದೊಯ್ಯಲ್ಲಿದ್ದೇವೆ ಆಶ್‌. ಎಂದು ಕೆಣಕಿದರು. ಬ್ರಿಸ್ಬೇನ್ ಕೊರೋನಾ ನಿಯಮದಡಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಆಡಲು ಬಯಸುತ್ತಿಲ್ಲ ಎಂದಿರುವುದಕ್ಕೆ ಟಿಮ್ ಪೈನ್ ಬ್ರಿಸ್ಬೇನ್ ಗಬ್ಬಾ ಮೈದಾನಕ್ಕೆ ಕೊರೆದೊಯ್ಯಲು ಕಾಯುತ್ತಿದ್ದೇವೆ ಎಂಬಾರ್ಥದಲ್ಲಿ ಸ್ಲೆಡ್ಜ್ ಮಾಡಿದ್ದರು.

  ಇದಕ್ಕೆ ಅಷ್ಟೇ ಬೇಗನೆ ಮರುತ್ತರ ನೀಡಿದ ಅಶ್ವಿನ್, ನಾನು ಸಹ ನೀನು ಭಾರತಕ್ಕೆ ಬರುವುದನ್ನು ಕಾಯುತ್ತಿರುತ್ತೇನೆ. ಏಕೆಂದರೆ ಇದು ನಿನ್ನ ಕೊನೆಯ ಸರಣಿ ಆಗಲಿದೆ ಎಂದು ತಿರುಗೇಟು ನೀಡಿದರು. ಅಶ್ವಿನ್ ಹೀಗೆ ತಿರುಗೇಟು ನೀಡಲು ಒಂದು ಕಾರಣ, ಪೈನ್ ಹಲವು ಕ್ಯಾಚ್​ಗಳನ್ನು ಕೈ ಚೆಲ್ಲಿರುವುದು. ಆಸ್ಟ್ರೇಲಿಯಾ ಆಟಗಾರು ಅದೆಷ್ಟೇ ಕೆಣಕಲು ಯತ್ನಿಸಿದರೂ ಅಂತಿಮವಾಗಿ ಅಜೇಯರಾಗಿ ಉಳಿದ ಹನುಮ ವಿಹಾರಿ ಹಾಗೂ ಆರ್​.ಅಶ್ವಿನ್ 3ನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾದರು.  ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್​ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.
  Published by:zahir
  First published: