Prithvi Shaw: ಗಂಭೀರತೆ ಪಡೆದುಕೊಂಡ ಉದ್ದೀಪನ ಮದ್ದು ಸೇವನೆ ಪ್ರಕರಣ; ಪೃಥ್ವಿ ಶಾ ಕ್ರಿಕೆಟ್ ಬದುಕು ನುಚ್ಚುನೂರು?

ಬಿಸಿಸಿಐ ಇತ್ತೀಚೆಗೆ ನಡೆಸಲಾದ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ನವೆಂಬರ್​ 15, 2019ರವರೆಗೆ 19 ವರ್ಷದ ಶಾ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾಗಿಯಾಗುವಂತಿಲ್ಲ.

Vinay Bhat | news18
Updated:August 9, 2019, 12:51 PM IST
Prithvi Shaw: ಗಂಭೀರತೆ ಪಡೆದುಕೊಂಡ ಉದ್ದೀಪನ ಮದ್ದು ಸೇವನೆ ಪ್ರಕರಣ; ಪೃಥ್ವಿ ಶಾ ಕ್ರಿಕೆಟ್ ಬದುಕು ನುಚ್ಚುನೂರು?
ಪೃಥ್ವಿ ಶಾ
  • News18
  • Last Updated: August 9, 2019, 12:51 PM IST
  • Share this:
ಬೆಂಗಳೂರು (ಆ. 09): ಟೀಂ ಇಂಡಿಯಾದ ಭರವಸೆಯ ಯುವ ಆಟಗಾರ ಪೃಥ್ವಿ ಶಾ ಅವರನ್ನು ಮಾದಕ ದ್ರವ್ಯ ವ್ಯಸನದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ಎಂಟು ತಿಂಗಳ ಕಾಲ ಕ್ರಿಕೆಟ್​ನಿಂದ ಅಮಾನತುಗೊಳಿಸಿದೆ.

ಈಗಾಗಲೇ ಬಿಸಿಸಿಐ ತಿಳಿಸಿರುವಂತೆ ತನ್ನದೇ ಆದ ನಿಯಮಾವಳಿಯಲ್ಲಿ ಪೃಥ್ವಿ ಶಾಗೆ ನಿಷೇಧ ವಿಧಿಸಿದ್ದಾಗಿ ಹೇಳಿದೆ. ಆದರೆ, ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ) ಈ ಪ್ರಕರಣದ ಕುರಿತಾಗಿ ವಿಶೇಷ ಗಮನ ಹರಿಸಿದೆ.

ಸದ್ಯ ಈ ವಿಚಾರ ಕುತೂಹಲಕ್ಕೆ ಕಾರಣವಾಗಿದ್ದು, ವಾಡಾ ಮಧ್ಯಪ್ರವೇಶವಾದಲ್ಲಿ ಪೃಥ್ವಿ ಷಾ ಕ್ರಿಕೆಟ್​ನಿಂದಲೇ ನಿಷೇಧ ಅಥವಾ ದೊಡ್ಡ ಮಟ್ಟದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ವಾಡಾ ಹೇಳಿರುವ ಪ್ರಕಾರ ಉದ್ದೀಪನ ನಿಗ್ರಹದ ನಿಯಮಗಳನ್ನು ಬಿಸಿಸಿಐ ಸರಿಯಾಗಿ ರೀತಿಯಲ್ಲಿ ಪಾಲಿಸಿಲ್ಲವಂತೆ.

Wada threat looms over Prithvi Shaw,
ಪೃಥ್ವಿ ಶಾ


'ಪೃಥ್ವಿ ಶಾ ವಿಚಾರದಲ್ಲಿ ಬಿಸಿಸಿಐ ವಾಡಾದ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿಲ್ಲ ಎಂಬ ವಿಚಾರ ನಮಗೆ ತಿಳಿದು ಬಂದರೆ, ಈ ಪ್ರಕರಣ ಕುರಿತಾದ ಸಂಪೂರ್ಣ ಮಾಹಿತಿ ಪಡೆಯುವ ಅಧಿಕಾರ ನಮಗಿದೆ. ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ' ಎಂದು ಇಮೇಲ್​ ಮೂಲಕ ಟೆಲಿಗ್ರಾಫ್​ಗೆ ಮಾಹಿತಿಯನ್ನು ವಾಡಾ ವಕ್ತಾರ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಲಡಾಖ್​​ನಲ್ಲಿ ಎಂ ಎಸ್ ಧೋನಿ ದ್ವಜಾರೋಹಣ..?

ಇದಿಷ್ಟೇ ಅಲ್ಲದೆ ಉದ್ದೀಪನ ನಿಗ್ರಹ ನಿಯಮವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸರಿಯಾಗಿ ಪಾಲಿಸಿಲ್ಲ ಎಂಬ ಕಾರಣ ನೀಡಿ ಸ್ವಿಜರ್ಲೆಂಡ್​ನಲ್ಲಿರುವ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಮೇಲ್ಮನವಿಯನ್ನು ಕೂಡ ಸಲ್ಲಿಸಬಹುದಾಗಿದೆ.
Loading...

2018ರ ಎಪ್ರಿಲ್​ನಲ್ಲಿ ಪ್ರಸಿದ್ಧ ವೈಟ್​ಲಿಫ್ಟರ್​ ಗೀತಾರಾಣಿ ವಿಚಾರದಲ್ಲೂ ಇದೇರೀತಿಯಾಗಿದ್ದು, ಆರಂಭದಲ್ಲಿ ನೀಡಿದ್ದ 2 ವರ್ಷ ನಿಷೇಧ ಶಿಕ್ಷೆಯನ್ನು ಸ್ವಿಜರ್ಲೆಂಡ್​ನ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ 4 ವರ್ಷಕ್ಕೆ ಏರಿಕೆ ಮಾಡಿತ್ತು. ಸದ್ಯ ಪೃಥ್ವಿ ಶಾ ಪ್ರಕರಣ ಕೂಡ ಇದೇ ಹಾದಿಯತ್ತ ಮುನ್ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

2018-19ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟ್ರೋಫಿ ಪಂದ್ಯದ ವೇಳೆ ನಿಷೇಧಿತ ದ್ರವ್ಯ ಸೇವನೆ ಆರೋಪದಲ್ಲಿ ಪೃಥ್ವಿ ಶಾ ಸಿಕ್ಕಿಬಿದ್ದಿದ್ದರು. ಫೆಬ್ರವರಿ 22, 2019ರಂದು ಮೂತ್ರ ಪರೀಕ್ಷೆ ನಡೆಸಲಾಗಿತ್ತು.

ಬಿಸಿಸಿಐ ಇತ್ತೀಚೆಗೆ ನಡೆಸಲಾದ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ನವೆಂಬರ್​ 15, 2019ರವರೆಗೆ 19 ವರ್ಷದ ಶಾ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾಗಿಯಾಗುವಂತಿಲ್ಲ.

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...