ಉದ್ದೀಪನ ಮದ್ದು ಸೇವನೆ: ಒಲಿಂಪಿಕ್​ನಿಂದ ರಷ್ಯಾ 4 ವರ್ಷ ನಿಷೇಧ!

ಹಿಂದಿನ ಎರಡು ಒಲಿಂಪಿಕ್ಸ್‌ಗಳಿಗೆ ರಷ್ಯಾ ತನ್ನ ಪ್ರಮುಖ ಅಥ್ಲೀಟುಗಳಿಗೆ ಅವಕಾಶ ನೀಡಿರಲಿಲ್ಲ. ಕಳೆದ ವರ್ಷ ಪ್ಯಾಂಗ್‌ಚಾಂಗ್‌ ಚಳಿಗಾಲದ ಕ್ರೀಡೆಗಳಲ್ಲಿ ರಷ್ಯಾ ಸ್ವಂತ ಧ್ವಜದಡಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು.

news18-kannada
Updated:December 9, 2019, 5:26 PM IST
ಉದ್ದೀಪನ ಮದ್ದು ಸೇವನೆ: ಒಲಿಂಪಿಕ್​ನಿಂದ ರಷ್ಯಾ 4 ವರ್ಷ ನಿಷೇಧ!
ರಷ್ಯಾದ ಒಲಿಂಪಿಕ್ ಕಮಿಟಿ
  • Share this:
ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣಿಸಿದಕ್ಕಾಗಿ ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ವಾಡಾ) ರಷ್ಯಾವನ್ನು ನಾಲ್ಕು ವರ್ಷ ಒಲಿಂಪಿಕ್​ನಿಂದ ನಿಷೇಧ ಮಾಡಿದೆ.

ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಪ್ರಯೋಗಾಲಯದ ವರದಿಗಳನ್ನು ತಿರುಚಿರುವ ಜೊತೆಗೆ ಸುಳ್ಳು ದಾಖಲಾತಿಗಳನ್ನು ನೀಡಿದೆ ಎಂಬ ಕಾರಣಕ್ಕೆ ವಿಶ್ವ ಉದ್ದೀಪನ ನಿಗ್ರಹ ಘಟಕ ಈ ತೀರ್ಮಾನ ಕೈಗೊಂಡಿದೆ.

ಡೋಪಿಂಗ್​​ ಟೆಸ್ಟ್​​ನಲ್ಲಿ ಪಾಸಿಟಿವ್​ ಫಲಿತಾಂಶ ಬಂದಿದ್ದರೂ ಅದನ್ನು ಮರೆಮಾಚಲು ಲ್ಯಾಬ್ ಮಾಹಿತಿಯನ್ನ ಟ್ಯಾಂಪರ್​ ಮಾಡಿ ನಕಲಿ ದಾಖಲೆಗಳನ್ನ ಇಟ್ಟಿದ್ದ ದೂರು ರಷ್ಯಾ ಮೇಲೆ ಇದೆ.

ಐಪಿಎಲ್ ಹರಾಜಿಗೆ ಕೇವಲ 10 ದಿನ ಬಾಕಿ; ದೊಡ್ಡ ಮೊತ್ತಕ್ಕೆ ಸೇಲ್ ಆಗಲಿರುವ ಆಟಗಾರರು ಇವರೆ!

ರಷ್ಯಾ ಅಥ್ಲೆಟಿಕ್ಸ್‌ನಲ್ಲಿ ಉದ್ದೀಪನ ಮದ್ದು ಸೇವನೆ ವ್ಯಾಪಕವಾಗಿದೆ ಎನ್ನುವುದಕ್ಕೆ 2015ರಲ್ಲಿ ವಾಡಾ ಸಿದ್ಧಪಡಿಸಿದ ವರದಿಯಲ್ಲಿ ಸಾಕ್ಷ್ಯ ದೊರಕಿತ್ತು. ಕ್ರೀಡಾ ಕ್ಷೇತ್ರದ ಪ್ರಬಲ ಶಕ್ತಿಯಾಗುವ ಯತ್ನದಲ್ಲಿದ್ದ ರಷ್ಯಾ ಈ ವರದಿಯ ನಂತರ ಡೋಪಿಂಗ್‌ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿದೆ.

ಈ ನಿರ್ಧಾರದಿಂದ 2020ರ ಟೋಕಿಯೋ ಒಲಿಂಪಿಕ್ಸ್​ ಹಾಗೂ 2022ರಲ್ಲಿ ಕತಾರ್​​ನಲ್ಲಿ ನಡೆಯಲಿರೋ ಫುಟ್​​ಬಾಲ್​​ ವರ್ಲ್ಡ್​ ಕಪ್​ನಲ್ಲಿ ರಷ್ಯಾದ ಆಟಗಾರರು ಭಾಗವಹಿಸುವಂತಿಲ್ಲ.

ಆದರೆ ಅಥ್ಲೀಟ್​​ಗಳು ಎಲ್ಲಾದರು ಡೋಪಿಂಗ್​​​ನಲ್ಲಿ ಭಾಗಿಯಾಗಿಲ್ಲ ಎಂದು ಸಾಬೀತುಪಡಿಸುವುದಾದರೆ ಅವರು ನ್ಯೂಟ್ರಲ್ ಫ್ಲ್ಯಾಗ್ ಅಡಿ ಸ್ಪರ್ಧಿಸಬಹುದಾಗಿದೆ ಎಂದು ವಾಡಾ ಹೇಳಿದೆ.ಹಿಂದಿನ ಎರಡು ಒಲಿಂಪಿಕ್ಸ್‌ಗಳಿಗೆ ರಷ್ಯಾ ತನ್ನ ಪ್ರಮುಖ ಅಥ್ಲೀಟುಗಳಿಗೆ ಅವಕಾಶ ನೀಡಿರಲಿಲ್ಲ. ಕಳೆದ ವರ್ಷ ಪ್ಯಾಂಗ್‌ಚಾಂಗ್‌ ಚಳಿಗಾಲದ ಕ್ರೀಡೆಗಳಲ್ಲಿ ರಷ್ಯಾ ಸ್ವಂತ ಧ್ವಜದಡಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. 2014ರ ಸೋಚಿ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆ ಹಗರಣಗಳನ್ನು ಸರ್ಕಾರವೇ ಮುಚ್ಚಿಟ್ಟಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು.

Ranji Trophy: ರಣಜಿ ಟ್ರೋಫಿ ಪಂದ್ಯ ಆರಂಭದ ವೇಳೆ ಹಾವು ಪ್ರತ್ಯಕ್ಷ; ಮುಂದೇನಾಯ್ತು?; ಇಲ್ಲಿದೆ ವಿಡಿಯೋ!

ರಷ್ಯಾ ಯಾವುದೇ ಪ್ರಮುಖ ಕ್ರೀಡಾಕೂಟಗಳ ಆತಿಥ್ಯ ವಹಿಸುವಂತಿಲ್ಲ. ಸಚ್ಚಾರಿತ್ರ್ಯದ ಅಥ್ಲೀಟುಗಳು ಪಾಲ್ಗೊಳ್ಳಬಹುದಾದರೂ ರಾಷ್ಟ್ರೀಯ ಧ್ವಜದಡಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದೆ.

ಈ ಹಿಂದೆ 2012ರ ಲಂಡನ್ ಒಲಿಂಪಿಕ್ಸ್ ಹಾಗೂ 2014ರ ಸೋಚಿ ವಿಂಟರ್ ಗೇಮ್ಸ್‌ನಲ್ಲಿ ರಷ್ಯಾದ ಡೋಪಿಂಗ್ ಹಗರಣ ಬಯಲಾಗಿತ್ತು.

First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading