10 ವರ್ಷ, 500 ಪಂದ್ಯಗಳು...ಆದರೆ ಭಾರತ ಕ್ರಿಕೆಟ್ ಮಂಡಳಿ ಬಿಡಿಗಾಸು ನೀಡಿಲ್ಲ..!

ವಿ. ಜಯದೇವನ್ ಮಳೆಗೆ ಆಹುತಿಯಾಗುವ ಸೀಮಿತ ಓವರ್ ಕ್ರಿಕೆಟ್​ಗಾಗಿ ವಿಜೆಡಿ ನಿಯಮವನ್ನು ರಚಿಸಿದ್ದರು. ಇದರಿಂದ ಪರಿಷ್ಕೃತ ಗುರಿಗಳನ್ನು ನಿಗದಿಪಡಿಸಲು ಸಹಾಯಕವಾಗುತ್ತಿತ್ತು

zahir | news18-kannada
Updated:December 4, 2019, 6:26 PM IST
10 ವರ್ಷ, 500 ಪಂದ್ಯಗಳು...ಆದರೆ ಭಾರತ ಕ್ರಿಕೆಟ್ ಮಂಡಳಿ ಬಿಡಿಗಾಸು ನೀಡಿಲ್ಲ..!
ಸಾಂದರ್ಭಿಕ ಚಿತ್ರ
  • Share this:
ಬಿಸಿಸಿಐ ವಿಶ್ವದಲ್ಲೇ ಕ್ರಿಕೆಟ್ ಆಡಳಿತದ ಶ್ರೀಮಂತ ಸಂಸ್ಥೆಯಾಗಿ ಬೆಳೆದಿದೆ. ಈ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆಯಾದ ಬೆನ್ನಲ್ಲೇ ದೇಸಿ ಕ್ರಿಕೆಟಿಗರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಾಗಿ ಭರವಸೆ ನೀಡಿದ್ದರು. ಇದರ ಹೊರತಾಗಿಯೂ, ಭಾರತೀಯ ಕ್ರಿಕೆಟ್​ಗೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡಿದ ವ್ಯಕ್ತಿಯೊಬ್ಬರನ್ನು ಕೂಡ ಬಿಸಿಸಿಐ ಸಂಸ್ಥೆ ಈ ಹಿಂದೆ ಕಡೆಗಣಿಸಿರುವ ವಿಷಯವೊಂದು ಬಹಿರಂಗವಾಗಿದೆ.

ಐಪಿಎಲ್, ಏಕದಿನ, ಟಿ20 ಸೇರಿದಂತೆ ಸುಮಾರು 500 ಪಂದ್ಯಗಳಲ್ಲಿ ಪ್ರಮುಖ ಕೊಡುಗೆ ನೀಡಿದ ವಿ. ಜಯದೇವನ್ ಅವರಿಗೆ ಸುಮಾರು 12 ವರ್ಷಗಳಿಂದ ಬಿಸಿಸಿಐ ಬಿಡಿಗಾಸನ್ನು ನೀಡಿಲ್ಲ. ಇದೀಗ ಬಿಸಿಸಿಐ ಜನರಲ್ ಮ್ಯಾನೇಜರ್ ಆಗಿರುವ ಸಬಾ ಕರೀಮ್ ಈ ವಿಷಯವನ್ನು ಮಂಡಳಿಯ ಉನ್ನತ ಅಧಿಕಾರಿಗಳ ಗಮನ ತಂದಿದ್ದಾರೆ.

ಯಾರು ವಿ. ಜಯದೇವನ್?

ಸಾಮಾನ್ಯವಾಗಿ ಮಳೆಯಿಂದ ಸ್ಥಗಿತಗೊಳ್ಳುವ ಪಂದ್ಯಗಳನ್ನು ಡಕ್​ವರ್ತ್ ಲೂಯಿಸ್ ಸೇರಿದಂತೆ ಕೆಲವು ಕ್ರಿಕೆಟ್ ನಿಯಮ/ವಿಧಾನಗಳ ಮೂಲಕ ಮುಂದುವರೆಸಲಾಗುತ್ತದೆ. ಹಾಗೆಯೇ ಬಳಸಲಾಗುವ ಒಂದು ನಿಯಮ ವಿಜೆಡಿ (VJD Method). ವಿಜೆಡಿ ಮೆಥಡ್​ನ್ನು ರೂಪಿಸಿದವರೇ ವಿ ಜಯದೇವನ್. ಈ ನಿಯಮದ ಆಧಾರದಲ್ಲಿ ಪಂದ್ಯದ ರನ್​ರೇಟ್, ವಿಕೆಟ್ ನಿರ್ಧರಿಸಿ ಗುರಿ ನೀಡಲಾಗುತ್ತದೆ. ಮಳೆ ಬಂದರೂ ವಿಜೆಡಿ ನಿಯಮದ ಸಹಾಯದಿಂದ ಅನೇಕ ಪಂದ್ಯಗಳ ಫಲಿತಾಂಶ ಹೊರಬಿದ್ದಿದೆ.

ವಿ. ಜಯದೇವನ್


12 ವರ್ಷಗಳಲ್ಲಿ 500 ಕ್ಕೂ ಹೆಚ್ಚು ಪಂದ್ಯಗಳ ಫಲಿತಾಂಶಗಳು:
ಒಂದು ದಶಕದಿಂದ ಮಳೆ ಪೀಡಿತ ಪಂದ್ಯಗಳ ಫಲಿತಾಂಶಕ್ಕಾಗಿ ಭಾರತೀಯ ಕ್ರಿಕೆಟ್ ಸಂಸ್ಥೆ ವಿಜೆಡಿ ನಿಯಮವನ್ನು ಬಳಸಿದೆ. ಆದರೆ ಈ ನಿಯಮವನ್ನು ರಚಿಸಿದ ವಿ.ಜಯದೇವನ್ ಅವರಿಗೆ ಕಳೆದ ಹತ್ತು ವರ್ಷಗಳಿಂದ ಬಿಸಿಸಿಐ ಯಾವುದೇ ಆರ್ಥಿಕ ಸಹಾಯ ನೀಡಿಲ್ಲ.ಕಳೆದ 12 ವರ್ಷಗಳಲ್ಲಿ ವಿಜೆಡಿ ವಿಧಾನವನ್ನು ಬಳಸಿ ದೇಶೀಯ ಕ್ರಿಕೆಟ್‌ನಲ್ಲಿ 500 ಪಂದ್ಯಗಳ ಫಲಿತಾಂಶಗಳನ್ನು ನೀಡಿದ್ದಾರೆ. ಇದನ್ನು ಕರ್ನಾಟಕ ಪ್ರೀಮಿಯರ್ ಲೀಗ್ ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್‌ನಂತಹ ಟಿ 20 ಲೀಗ್‌ಗಳಲ್ಲಿಯೂ ಬಳಸಲಾಗಿದೆ. ಆದರೆ ಕಳೆದ ಎರಡು ದಶಕಗಳ ನನ್ನ ಪ್ರಯತ್ನಗಳಿಗೆ ಸಂಬಂಧಿಸಿದಂತೆ, ನನಗೆ ಯಾವುದೇ ಮಾನ್ಯತೆ ಅಥವಾ ಯಾವುದೇ ಆರ್ಥಿಕ ಲಾಭ ದೊರೆತಿಲ್ಲ ಎಂಬ ನೋವು ವಿ. ಜಯದೇವನ್ ಅವರಲ್ಲಿದೆ.

2007 ರಿಂದ ದೇಶೀಯ ಕ್ರಿಕೆಟ್‌ನಲ್ಲಿ ವಿಜೆಡಿ:
ವಿ. ಜಯದೇವನ್ ಮಳೆಗೆ ಆಹುತಿಯಾಗುವ ಸೀಮಿತ ಓವರ್ ಕ್ರಿಕೆಟ್​ಗಾಗಿ ವಿಜೆಡಿ ನಿಯಮವನ್ನು ರಚಿಸಿದ್ದರು. ಇದರಿಂದ ಪರಿಷ್ಕೃತ ಗುರಿಗಳನ್ನು ನಿಗದಿಪಡಿಸಲು ಸಹಾಯಕವಾಗುತ್ತಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಡಕ್​ವರ್ತ್​ ಲೂಯಿಸ್ ನಿಯಮಕ್ಕಿಂತ ಅನೇಕರು ಇದನ್ನು ಉತ್ತಮವೆಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಸಿನಿಪ್ರಿಯರಿಗೆ ಪ್ಯಾನ್ ಇಂಡಿಯಾ ಸಿನಿಮಾ ಸುಗ್ಗಿ

ಸೆಪ್ಟೆಂಬರ್ 2007 ರಲ್ಲಿ ಬಿಸಿಸಿಐ ಎಲ್ಲಾ ದೇಶೀಯ ಪಂದ್ಯಗಳಲ್ಲಿ ವಿಜೆಡಿ ವಿಧಾನವನ್ನು ಬಳಸಲು ಪ್ರಾರಂಭಿಸಿತು. ಅಂದಿನಿಂದ, 500 ಕ್ಕೂ ಹೆಚ್ಚು ಪಂದ್ಯಗಳ ಫಲಿತಾಂಶವನ್ನು ವಿಜೆಡಿ ನಿಯಮದ ಸಹಾಯದಿಂದ ಹೊರಬಂದಿದೆ. ಈ ನಿಯಮವನ್ನು ಮತ್ತಷ್ಟು ಸುಧಾರಿಸಲು ಪ್ರಯತ್ನಿಸುತ್ತಿರುವ ಜಯದೇವನ್​ ಅವರಿಗೆ ಹಣದ ಕೊರತೆ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಇದರಿಂದ ನಿಯಮದಲ್ಲಿ ಮತ್ತಷ್ಟು ಬದಲಾವಣೆ ತರುವ ಅವರ ಕನಸನ್ನು ಕೈ ಬಿಟ್ಟಿದ್ದಾರೆ.

2009 ರಲ್ಲಿ 5 ಲಕ್ಷ ರೂ.:
'ಆರಂಭದಲ್ಲಿ ನಾನು ಈ ವಿಧಾನದ ಅಭಿವೃದ್ಧಿಗೆ ಆರ್ಥಿಕ ಸಹಾಯವನ್ನು ಕೋರಿದ್ದೆ. ಆ ನಂತರ ಕೇರಳ ಕ್ರಿಕೆಟ್ ಸಂಘದ ಕಾರ್ಯದರ್ಶಿ ಟಿಸಿ ಮ್ಯಾಥ್ಯೂ ಅವರ ಸಹಾಯದಿಂದ ಅಂದಿನ ಬಿಸಿಸಿಐ ಕಾರ್ಯದರ್ಶಿ ಎನ್.ಸಿ. ಶ್ರೀನಿವಾಸನ್ ಅವರನ್ನು ಭೇಟಿಯಾದೆ. 2009 ರಲ್ಲಿ ಅವರಿಂದ ನನಗೆ ಐದು ಲಕ್ಷ ರೂಪಾಯಿಗಳ ಸಹಾಯ ಸಿಕ್ಕಿತು. ಆ ಬಳಿಕ ನನಗೆ ಯಾವುದೇ ಆರ್ಥಿಕ ಸಹಾಯವನ್ನು ಬಿಸಿಸಿಐ ಮಾಡಿಲ್ಲ. ಈ ವಿಧಾನವನ್ನು ಪ್ರಸ್ತುತ ವಿಧಾನಕ್ಕಿಂತ ಸುಲಭಗೊಳಿಸಲು ನಾನು ಬಯಸುತ್ತೇನೆ. ಇದರಿಂದ ವಿಜೆಡಿ ನಿಯಮ ಬಳಸಲು ಹೆಚ್ಚು ಅನುಕೂಲಕರವಾಗುತ್ತದೆ ಎಂದು ವಿ. ಜಯದೇವನ್ ಹೇಳಿದ್ದಾರೆ.

ಇದನ್ನೂ ಓದಿ: Airtel-Vodafone: ಪ್ರತಿದಿನ 1GB ಡೇಟಾ ಪ್ಲ್ಯಾನ್ ನಿಲ್ಲಿಸಿದ ಏರ್​ಟೆಲ್-ವೊಡಾಫೋನ್

ಪ್ರಸ್ತುತ ಕ್ರಿಕೆಟ್​ನಲ್ಲಿ ಅತ್ಯುತ್ತಮ ನಿಯಮಗಳ ಅತ್ಯವಶ್ಯಕತೆ ಇದೆ. ಇದಕ್ಕೆ ದೊಡ್ಡ ಉದಾಹರಣೆ ವಿಶ್ವಕಪ್ 2019 ರ ಇಂಗ್ಲೆಂಡ್ - ನ್ಯೂಜಿಲೆಂಡ್ ಫೈನಲ್ ಪಂದ್ಯ. ಫೈನಲ್ ಪಂದ್ಯದಲ್ಲಿ ಹಳೆಯ ನಿಯಮವನ್ನು ಬಳಸಿ ಚಾಂಪಿಯನ್ ತಂಡವನ್ನು ನಿರ್ಧರಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಡಕ್​ವರ್ತ್​ ನಿಯಮಕ್ಕೆ ಸವಾಲೆಸುವ ನಿಯಮವನ್ನು ರೂಪಿಸುವಂತಹ ವ್ಯಕ್ತಿ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಮುಂದಿದ್ದಾರೆ. ಆದರೆ ಅವರಿಗೆ  ಪ್ರೋತ್ಸಾಹ ನೀಡದಿರುವುದು ಮಾತ್ರ ವಿಪರ್ಯಾಸ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading