ಮೊದಲ ಗೆಲುವಿಗಾಗಿ ಹೈದರಾಬಾದ್-ರಾಜಸ್ಥಾನ ನಡುವೆ ಸೆಣಸಾಟ

Harshith AS | news18
Updated:March 29, 2019, 4:21 PM IST
ಮೊದಲ ಗೆಲುವಿಗಾಗಿ ಹೈದರಾಬಾದ್-ರಾಜಸ್ಥಾನ ನಡುವೆ ಸೆಣಸಾಟ
ಹೈದರಾಬಾದ್-ರಾಜಸ್ಥಾನ ಪಂದ್ಯ
  • News18
  • Last Updated: March 29, 2019, 4:21 PM IST
  • Share this:
ಮೊದಲ ಜಯಕ್ಕಾಗಿ ಹೋರಾಡುತ್ತಿರುವ ಸನ್​ರೈಸರ್ಸ್​ ಮತ್ತು ರಾಜಸ್ಥಾನ​ ರಾಯಲ್ಸ್​ ತಂಡವು ಇಂದು ಮುಖಾಮುಖಿಯಾಗುತ್ತಿದೆ. ಹೈದರಾಬಾದ್​​​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಜಿದ್ದಾ-ಜಿದ್ದಿಯ ಸಮರಕ್ಕೆ ಎರಡು ತಂಡಗಳು ಸಿದ್ಧಗೊಂಡಿದೆ.

ತವರಿನಲ್ಲಿ ಹೋರಾಡಲು ಸಜ್ಜಾದ ಸನ್​ರೈಸರ್ಸ್​​ ತಂಡ ಮೊದಲ ಗೆಲುವನ್ನು ಗಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ . ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸಮರ ಹೂಡಿ ಬೌಲಿಂಗ್​ ವೈಫಲ್ಯದಿಂದ ಸೋಲನ್ನು ಕಂಡ ಸನ್​ರೈಸರ್ಸ್​ ಈ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸಿದೆ.

ಪಂಜಾಬ್​ ತಂಡದ ವಿರುದ್ಧ ಹೊರಾಡಿ ಗೆಲುವು ಸಾಧಿಸಲು ಮುನ್ನುಗ್ಗಿದ ರಾಜಸ್ಥಾನ​ ರಾಯಲ್ಸ್​ ಅಂತಿಮವಾಗಿ ಸೋಲಿನ ನಿರಾಸೆಕಂಡಿತು. ಇಂದು ನಡೆಯುವ ಉಭಯ ತಂಡಗಳ ಜಟಾಪಟಿಯಲ್ಲಿ ಯಾರ ಪಾಲಿಗೆ ಜಯ ಒದಗಿಬರುತ್ತದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: ವಿವಿ ಪ್ಯಾಟ್​ ಸಂಖ್ಯೆ ಹೆಚ್ಚಿಸುವ ಅಗತ್ಯವಿಲ್ಲ; ಸುಪ್ರೀಂಕೋರ್ಟ್​​ಗೆ ಚುನಾವಣಾ ಆಯೋಗದ ಪ್ರತಿಕ್ರಿಯೆ

ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಗೆಲುವಿನ ಗೆರೆ ದಾಟಿಸುತ್ತಿದ್ದ ಜೋಸ್​ ಬಟ್ಲರ್​ 43 ಎಸೆತಗಳಲ್ಲಿ 10 ಬೌಂಡರಿ​, 2 ಸಿಕ್ಸ್​ ಜೊತೆಗೆ 69 ರನ್​ಗಳಿಸಿ ಜಯ ತಂದುಕೊಡುವ ನಿರೀಕ್ಷೆಯಲ್ಲಿದ್ದರು. ಆದರೆ ಬಟ್ಲರ್​ ಅವರ ಬ್ಯಾಟಿಂಗ್​ ಪ್ರದರ್ಶನವನ್ನು ಗಮನಿಸಿದ ಪಂಜಾಬ್​ ತಂಡದ ನಾಯಕ ರವಿಚಂದ್ರನ್​ ಅಶ್ವಿನ್​ ‘ಮನ್​ ಕಡ್​​ಡಿಂಗ್‘ ಮಾಡುವ ಮೂಲಕ ​ಔಟ್​ ಮಾಡಿದ್ದರು. ಅಲ್ಲಿ ತನಕ ಗೆಲುವಿನ ಹಾದಿಯಲ್ಲಿದ್ದ ರಾಜಸ್ಥಾನ ತಂಡ ಬಟ್ಲರ್​ ವಿಕೆಟ್​ ಪತನದ ನಂತರ ಸೋಲಿಗೆ ತುತ್ತಾಯಿತು. ಇದೀಗ ಸೋಲನ್ನು ಮರೆತಿರುವ ರಾಜಸ್ಥಾನ​ ರಾಯಲ್ಸ್​ ತಂಡ ಹೈದರಾಬಾದ್​ ವಿರುದ್ಧ ಖಾತೆ ತೆಗೆಯಲು ಸಂಚು ಹಾಕಿದೆ.  ಪ್ರಮುಖ ಆಟಗಾರರಾದ ಜೋಸ್​ ಬಟ್ಲರ್​ , ನಾಯಕ ಅಜಿಂಕ್ಯ ರಹಾನೆ, ಜಯದೇವ್​ ಉನಾದ್ಕಟ್​, ಸ್ಟೀವನ್​ ಸ್ಮಿತ್​, ಜೋಫ್ರಾ ಆರ್ಚರಿ, ಸಂಜು ಸ್ಯಾಮ್ಸನ್​ ಹೈದರಾಬಾದ್​ ವಿರುದ್ಧ ಗೆಲುವು ಸಾಧಿಸಲು ಚಿಂತನೆ ನಡೆಸಿದೆ.

ತವರಿನಲ್ಲಿ ಹೋರಾಡಲು ಸಜ್ಜಾದ ಸನ್​ರೈಸರ್ಸ್​ ಹೈದರಾಬಾದ್​ ತಂಡ ರಾಜಸ್ಥಾನ ತಂಡದ ಜೊತೆ ದ್ವಿತಿಯ ಹಣಾ-ಹಣಿಯನ್ನು ಎದುರಿಸುತ್ತಿದೆ. ಗೆಲುವಿನ ಖಾತೆಯನ್ನು ತೆರೆಯಲು ಸಜ್ಜಾಗಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡದಲ್ಲಿ ಡೇವಿಡ್​ ವಾರ್ನರ್​, ಜಾನಿ ಬೈರ್​ಸ್ಟೋವ್​, ಭುವನೇಶ್ವರ್ ಕುಮಾರ್​, ಮನೀಶ್​ ಪಾಂಡೆ, ಶಾಕಿಬ್​ ಅಲ್​ ಹಸನ್​ ಪ್ರಮುಖ ಆಟಗಾರರಿದ್ದಾರೆ

ಪಂದ್ಯ ಪ್ರಾರಂಭದ ಸಮಯ: 8 ಗಂಟೆ, ಸ್ಥಳ : ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್‌
First published:March 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ