ರಜನಿ ಸ್ಟೈಲ್​ ಕನ್ನಡಕ ಕೊಳ್ಳಲು ವೇಷ ಬದಲಿಸಿ ಶಾಪಿಂಗ್ ಮಾಡಿದ ಹೇಡನ್

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ಪಂದ್ಯದ ಕಮೆಂಟ್ರಿ ನೀಡಲು ಆಗಮಿಸಿದ್ದ ಮ್ಯಾಥ್ಯು, ಬಿಡುವಿನ ವೇಳೆ ಚೆನ್ನೈ ನಗರದಲ್ಲಿ ಶಾಪಿಂಗ್​ ಮಾಡಲು ಆಲೋಚಿಸಿದ್ದಾರೆ. ಆದರೆ ಮ್ಯಾಥ್ಯು ಶಾಪಿಂಗ್​ ಮಾಡಲು ಧರಿಸಿದ ವೇಷ ಭೂಷಣ ಮಾತ್ರ ವಿಭಿನ್ನವಾಗಿದೆ.

ಮ್ಯಾಥ್ಯು ಹೇಡನ್

ಮ್ಯಾಥ್ಯು ಹೇಡನ್

 • News18
 • Last Updated :
 • Share this:
  ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯು ಹೇಡನ್​ ತನ್ನ ವೇಷ ಬದಲಿಸಿಕೊಂಡು ಚೆನ್ನೈ ನಗರದ ಶಾಪಿಂಗ್ ಮಾಲ್​ನಲ್ಲಿ ಸುತ್ತಾಡಿದ್ದಾರೆ. ಹೊಸ ವೇಷದಲ್ಲಿ ಹೇಡನ್ ಚೆನ್ನೈ ನಗರದಾದ್ಯಂತ ಸುತ್ತಾಡಿದ್ದು, ಯಾರಿಗೂ ಕೂಡ ನನನ್ನು ಕಂಡು ಹಿಡಿಯಲಾಗಲಿಲ್ಲ ಎಂದು ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬರೆದಿದ್ದಾರೆ.

  ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ಪಂದ್ಯದ ಕಮೆಂಟ್ರಿ ನೀಡಲು ಆಗಮಿಸಿದ್ದ ಹೇಡನ್, ಬಿಡುವಿನ ವೇಳೆ ಚೆನ್ನೈ ನಗರದಲ್ಲಿ ಶಾಪಿಂಗ್​ ಮಾಡಲು ಆಲೋಚಿಸಿದ್ದಾರೆ. ಆದರೆ  ಶಾಪಿಂಗ್​ ಮಾಡಲು ಧರಿಸಿದ ವೇಷ ಭೂಷಣ ಮಾತ್ರ ವಿಭಿನ್ನವಾಗಿದೆ.

      
  View this post on Instagram
   

  Bit of undercover shopping at T Nagar Street Mall in Chennai @starsportsindia @iplt20 @chennaiipl


  A post shared by Matthew Hayden (@haydos359) on


  ಇದನ್ನೂ ಓದಿ: ಅನುವಂಶಿಕ ರಾಜಕಾರಣವನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ – ಮಾಜಿ ಸಿಎಂ ಎಸ್​ಎಂ ಕೃಷ್ಣ

  47 ವರ್ಷದ ಹೇಡನ್​​ 2008 ರಿಂದ 2010 ಚೆನ್ನೈ ಸೂಪರ್​ ಕಿಂಗ್​ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಚೆನ್ನೈಯಾದ್ಯಂತ ಹೇಡನ್​ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ಶಾಪಿಂಗ್ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಹೇಡನ್​ ಕಪ್ಪು ಬಣ್ಣದ ಗಡ್ಡ ಮತ್ತು ಬಿಳಿಯ ಪಂಚೆಯನ್ನು ಸುತ್ತಿದ್ದಾರೆ.
  ಶಾಪಿಂಗ್​ ತೆರಳುವ ಮುನ್ನ ಹೇಡನ್​ ತನ್ನ ಸ್ನೇಹಿತ ಶೇನ್​ ವಾರ್ನ್​ ಜೊತೆ ಚಾಲೆಂಜ್​ ಮಾಡಿದ್ದು, ಚೆನ್ನೈ ನಗರದಲ್ಲಿ 1000 ರೂಪಾಯಿಯ ಒಳಗಡೆ ಶಾಪಿಂಗ್​ ಮಾಡುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೆ ಲುಂಗಿ, ಶರ್ಟ್​, ವಾಚ್ ಮತ್ತು ರಜನಿ ಸ್ಟೈಲ್​ ಕನ್ನಡಕ​ ಕೊಂಡುಕೊಳ್ಳುತ್ತೇನೆ ಎಂದು ಹೇಳಿದ್ದರು.

  ನಿಮ್ಮ ನ್ಯೂಸ್​18 ಕನ್ನಡವನ್ನು ಇನ್​ಸ್ಟಾಗ್ರಾಂನಲ್ಲಿ  ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada

  First published: