ಕೊಹ್ಲಿ ಪಡೆಯತ್ತ ಎಲ್ಲರ ಚಿತ್ತ: ಗೆಲುವಿನ ಖಾತೆ ತೆರೆಯುತ್ತಾ ಆರ್​ಸಿಬಿ

ಕಳೆದ ಐಪಿಲ್​ ಪಂದ್ಯದಲ್ಲಿ ಕಿಂಗ್ಸ್​ ಇಲೆವನ್​ ಪಂಜಾಬ್​ ತಂಡವನ್ನು ಮಣಿಸಿದ ಕೊಲ್ಕತ್ತಾ ತಂಡಕ್ಕೆ ಬೆಂಗಳೂರು ತಂಡವನ್ನು ಮಣಿಸುವುದು ದೊಡ್ಡ ಸವಾಲೇನು ಅಲ್ಲ. ಆ್ಯಂಡ್ರೂ ರಸೆಲ್​, ನಿತಿಶ್​ ರಾಣಾರಂತಹ ಸ್ಪೋಟಕ ಬ್ಯಾಟ್ಸ್​ಮ್ಯಾನ್​ ಹೊಂದಿರುವ ಕೊಲ್ಕತ್ತಾ ತಂಡ ಬೆಂಗಳೂರು ತಂಡವನ್ನು ಸೋಲಿಸುವಲ್ಲಿ ಹೊಂಚು ಹಾಕುತ್ತಿದೆ.

Harshith AS | news18
Updated:April 5, 2019, 2:46 PM IST
ಕೊಹ್ಲಿ ಪಡೆಯತ್ತ ಎಲ್ಲರ ಚಿತ್ತ: ಗೆಲುವಿನ ಖಾತೆ ತೆರೆಯುತ್ತಾ ಆರ್​ಸಿಬಿ
ಆರ್​ಸಿಬಿ ತಂಡ
  • News18
  • Last Updated: April 5, 2019, 2:46 PM IST
  • Share this:
ಐಪಿಎಲ್​ನಲ್ಲಿಂದು ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡಗಳ ನಡುವೆ ಜಿದ್ದಾ-ಜಿದ್ದಿಯ ಪಂದ್ಯ ಬೆಂಗಳೂರು ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ ನಡೆಯಲಿದೆ. ಈಗಾಗಲೇ ಕೊಹ್ಲಿ ನಾಯಕತ್ವದ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ ಬೀಡು ಬಿಟ್ಟಿದ್ದು. ಎದುರಾಳಿ ದಿನೇಶ್​ ಕಾರ್ತಿಕ್​ ತಂಡವನ್ನು ಎದುರಿಸಲಿದೆ.

ಸತತವಾಗಿ ಸೋಲಿನ ವೃತ್ತದಲ್ಲಿ ಸುತ್ತುತ್ತಿರುವ ಕೊಹ್ಲಿ ಪಡೆ ತವರಿನಲ್ಲಿ ಇಂದಾದರು ಗೆಲುವಿನ ಮೊದಲ ಬಾಗಿಲು ತಟ್ಟುತ್ತಾ ಎಂಬುದು ಅಭಿಮಾನಿಗಳ ಕಾತುರತೆಯ ಪ್ರಶ್ನೆಯಾಗಿದೆ. ಕಳಪೆ ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ಪ್ರದರ್ಶನದಲ್ಲಿ  ಎಚ್ಚೆತ್ತುಕೊಳ್ಳಬೇಕಾದ ಬೆಂಗಳೂರು ತಂಡ ಜಯ ಸಾಧಿಸುತ್ತಾ ಎಂಬುದೇ ಕೂತೂಹಲ.

ಇದನ್ನೂ ಓದಿ: 2014 ಚುನಾವಣೆಗಿಂತ ಈ ಬಾರಿ ಶೇ.15 ಹೆಚ್ಚು ಮತ ಪಡೆಯುತ್ತೇವೆ; ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಇನ್ನೂ ಕಳೆದ ಐಪಿಲ್​ ಪಂದ್ಯದಲ್ಲಿ ಕಿಂಗ್ಸ್​ ಇಲೆವನ್​ ಪಂಜಾಬ್​ ತಂಡವನ್ನು ಮಣಿಸಿದ ಕೊಲ್ಕತ್ತಾ ತಂಡಕ್ಕೆ ಬೆಂಗಳೂರು ತಂಡವನ್ನು ಮಣಿಸುವುದು ದೊಡ್ಡ ಸವಾಲೇನು ಅಲ್ಲ. ಆ್ಯಂಡ್ರೂ ರಸೆಲ್​, ನಿತೀಶ್​​ ರಾಣಾರಂತಹ ಸ್ಪೋಟಕ ಬ್ಯಾಟ್ಸ್​ಮ್ಯಾನ್​ ಹೊಂದಿರುವ ಕೊಲ್ಕತ್ತಾ ತಂಡ ಬೆಂಗಳೂರು ತಂಡವನ್ನು ಸೋಲಿಸುವಲ್ಲಿ ಹೊಂಚು ಹಾಕುತ್ತಿದೆ.

 ಬೆಂಗಳೂರು ತಂಡದ ಆಟಗಾರರು

ವಿರಾಟ್ ಕೊಹ್ಲಿ (ಕ್ಯಾಪ್ಟನ್​), ಪಾರ್ಥಿವ್ ಪಟೇಲ್, ಎಬಿ ಡಿವಿಲಿಯರ್ಸ್, ಶಿಮ್ರೋನ್ ಹೆಟ್ಮೈರ್​, ಮಾರ್ಕಸ್ ಸ್ಟೊಯಿನಿಸ್, ಮೊಯೆನ್ ಅಲಿ, ಅಕ್ಷದೀಪ್ ನಾಥ್, ಉಮೇಶ್ ಯಾದವ್, ನವದೀಪ್ ಸೈನಿ, ಯುಜ್ವೆಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ದೇವದೂತ್​ ಪಡಿಕಲ್, ಹೆನ್ರಿಚ್ ಕ್ಲಾಸೇನ್, ಹಿಮ್ಮತ್​​ ಸಿಂಗ್, ಕೊಲಿನ್ ಡಿ ಗ್ರಾಂಡ್​​​ಹೊಮ್ಮೆ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಶಿವಮ್ ದುಬೆ, ಮಿಲಿಂದ್ ಕುಮಾರ್, ಗುರ್ಕೀರಾತ್ ಸಿಂಗ್ ಮನ್, ಪ್ರೇಯಸ್ ಬರ್ಮನ್, ಕುಲ್ವಂತ್ ಖೇಜೋಲಿಯ, ಟಿಮ್ ಸೌಥಿ, ನಾಥನ್ ಕೌಲ್ಟರ್-ನೈಲ್

ಕೊಲ್ಕತ್ತಾ ತಂಡ ಆಟಗಾರರು

ದಿನೇಶ್ ಕಾರ್ತಿಕ್ (ಕ್ಯಾಪ್ಟನ್​),ನಿಖಿಲ್ ನಾಯ್ಕ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ಶುಬ್ಬನ್ ಗಿಲ್, ಆಂಡ್ರೆ ರಸೆಲ್, ಪಿಯುಶ್ ಚಾವ್ಲಾ, ಕುಲ್ದೀಪ್​ ಯಾದವ್, ಲಾಕೀ ಫರ್ಗುಸನ್, ಪ್ರಶಿದ್ಧ್​ ಕೃಷ್ಣ, ರಿಂಕು ಸಿಂಗ್, ಜೋ ಡೆನ್ಲಿ, ಶ್ರೀಕಾಂತ್ ಮುಂಡೆ, ಕಾರ್ಲೋಸ್ ಬ್ರಾಥ್ವೈಟ್, ಸುನೀಲ್ ನರೈನ್, ಸಂದೀಪ್ ವಾರಿಯರ್, ಹ್ಯಾರಿ ಗರ್ನಿ, ಯಾರ ಪೃಥ್ವಿರಾಜ್, ಕೆಸಿ ಕ್ಯಾರಿಯಪ್ಪ

First published: April 5, 2019, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading