ಚೆನ್ನೈಗೆ ಪ್ರಯಾಣ ಮಾಡುವ ವೇಳೆ ವಿಮಾನದಲ್ಲಿ ಹರ್ಭಜನ್ ಸಿಂಗ್ ಬ್ಯಾಟ್ ಕಳವು?

Harbhajan Singh: ಹರ್ಭಜನ್ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಇಂಡಿಗೊ ಸಂಸ್ಥೆ ಕ್ಷಮೆ ಕೇಳಿದೆ. 'ಈ ರೀತಿ ಆಗಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಈ ಕೂಡಲೇ ನಿಮ್ಮ ಬ್ಯಾಟ್‌ ಕಳೆದು ಹೋಗಿರುವ ಬಗ್ಗೆ ನಾವು ಪರಿಶೀಲಿಸುತ್ತೇವೆ' ಎಂದು ಹೇಳಿದೆ.

ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಇನ್‍ಸ್ಟಾಗ್ರಾಮ್ ಲೈವ್ ಚಾಟ್‍ನಲ್ಲಿ ಮಾತನಾಡಿದ ಭಜ್ಜಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಶಿಬಿರದಲ್ಲಿದ್ದಾಗ ಅನೇಕರು ನನಗೆ, ಧೋನಿ ಟೀಮ್ ಇಂಡಿಯಾ ಪರ ಮತ್ತೆ ಆಡಲಿದ್ದಾರಾ ಎಂದು ಪ್ರಶ್ನಿಸಿದ್ದರು. ಹಾಗೆಯೇ ವಿಶ್ವಕಪ್​ನಲ್ಲಿ ಅವರು ಭಾಗವಹಿಸಲಿದ್ದಾರಾ ಎಂದು ಕೇಳಲಾಗಿತ್ತು.

ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಇನ್‍ಸ್ಟಾಗ್ರಾಮ್ ಲೈವ್ ಚಾಟ್‍ನಲ್ಲಿ ಮಾತನಾಡಿದ ಭಜ್ಜಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಶಿಬಿರದಲ್ಲಿದ್ದಾಗ ಅನೇಕರು ನನಗೆ, ಧೋನಿ ಟೀಮ್ ಇಂಡಿಯಾ ಪರ ಮತ್ತೆ ಆಡಲಿದ್ದಾರಾ ಎಂದು ಪ್ರಶ್ನಿಸಿದ್ದರು. ಹಾಗೆಯೇ ವಿಶ್ವಕಪ್​ನಲ್ಲಿ ಅವರು ಭಾಗವಹಿಸಲಿದ್ದಾರಾ ಎಂದು ಕೇಳಲಾಗಿತ್ತು.

 • Share this:
  13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನೇನು 20 ದಿನಗಳಷ್ಟೆ ಬಾಕಿಯಿದೆ. ಕೆಲ ತಂಡದ ಆಟಗಾರರು ಈಗಾಗಲೇ ಅಭ್ಯಾಸ ಕೂಡ ಶುರು ಮಾಡಿಕೊಂಡಿದ್ದಾರೆ.

  ಅಂತೆಯೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಪ್ರಮುಖ ಸ್ಪಿನ್ನರ್ ಆಗಿರುವ ಹರ್ಭಜನ್ ಸಿಂಗ್ ಅಭ್ಯಾಸ ನಡೆಸಲೆಂದು ಮುಂಬೈನಿಂದ ಕೊಯಂಬತ್ತೂರ್​ಗೆ ವಿಮಾನದಲ್ಲಿ ತೆರಳುವಾಗ ಅವರ ಬ್ಯಾಟ್‌ ಕಳವಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಹರ್ಭಜನ್‌ ಸಿಂಗ್‌ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

  'Bat Missing':Harbhajan Singh Calls Out Indigo Airlines, Says 'action Must Be Taken'
  ಹರ್ಭಜನ್ ಸಿಂಗ್.


  RCB: 2020 ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುವವರು ಯಾರು?; ಇಲ್ಲಿದೆ ಪ್ಲೇಯಿಂಗ್ XI

  ಟ್ವಿಟರ್‌ನಲ್ಲಿ ಇಂಡಿಗೋ ಏರ್‌ಲೈನ್‌ಗೆ ಮನವಿ ಮಾಡಿರುವ ಹರ್ಭಜನ್‌, 'ನನ್ನ ಬ್ಯಾಟ್‌ ಕಳವಾಗಿದೆಯೋ ಅಥವಾ ಮಿಸ್ ಆಗಿದಿಯೋ ತಿಳಿಯುತ್ತಿಲ್ಲ. ನಾನು ಇಂಡಿಗೋ ಏರ್‌ಲೈನ್ಸ್‌ನ @IndiGo6E, 6E 6313ನಂಬರ್‌ನ ಫ್ಲೈಟ್‌ನಲ್ಲಿ ಬ್ಯಾಟ್‌ ಕಳೆದುಕೊಂಡಿದ್ದೇನೆ. ನನ್ನ ಬ್ಯಾಟ್‌ ಕದ್ದವರು ಯಾರೇ ಆಗಿರಲಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ' ಎಂದು ಬರೆದುಕೊಂಡಿದ್ದಾರೆ.

     ಸೋಲಿಗೆ ಶಫಾಲಿ ಕಾರಣವಲ್ಲ ಆಕೆಗಿನ್ನೂ 16 ವರ್ಷ; ಡ್ಯಾಶಿಂಗ್ ಓಪನರ್ ಬೆನ್ನಿಗೆ ನಿಂತ ಟೀಂ ಇಂಡಿಯಾ ನಾಯಕಿ

  ಇನ್ನೂ ಹರ್ಭಜನ್ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಇಂಡಿಗೊ ಸಂಸ್ಥೆ ಕ್ಷಮೆ ಕೇಳಿದೆ. 'ಈ ರೀತಿ ಆಗಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಈ ಕೂಡಲೇ ನಿಮ್ಮ ಬ್ಯಾಟ್‌ ಕಳೆದು ಹೋಗಿರುವ ಬಗ್ಗೆ ನಾವು ಪರಿಶೀಲಿಸುತ್ತೇವೆ' ಎಂದು ಹೇಳಿದೆ.

     ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆಟಗಾರರು ಐಪಿಎಲ್ ಆರಂಭಕ್ಕೆ ಇನ್ನೂ ಒಂದು ತಿಂಗಳಿ ಇದೇ ಎನ್ನುವಾಗಲೇ ಅಭ್ಯಾಸ ಪ್ರಾರಂಭಿಸಿದ್ದರು. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೇಪಾಕ್ ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದರೆ, ಸುರೇಶ್ ರೈನಾ, ಅಂಬಟಿ ರಾಯುಡು, ಮುರಳಿ ವಿಜಯ್ ಸೇರಿದಂತೆ ಕೆಲವು ಆಟಗಾರರು ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ.

  First published: