HOME » NEWS » Sports » CRICKET VIVO IPL 2019 RCB FANS CELEBRATING VICTORY AGAINST CSK IN BENGALURU

ಕಪ್ ಗೆದ್ದಿದ್ರೂ ಆರ್​ಸಿಬಿ ಅಭಿಮಾನಿಗಳು ಇಷ್ಟು ಸಂಭ್ರಮಿಸುತ್ತಿರಲಿಲ್ಲವಂತೆ

Vivo IPL 2019 RCB vs CSK: ಸಿಎಸ್​ಕೆ ವಿರುದ್ಧದ ಮೊದಲ ಮ್ಯಾಚ್​ನಲ್ಲಿ ಹೀನಾಯವಾಗಿ ಸೋತಿದ್ದ ಆರ್​ಸಿಬಿ ಈಗ ಸೇಡು ತೀರಿಸಿಕೊಂಡಿದೆ. ಈ ಗೆಲುವನ್ನು ಆರ್​​ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Rajesh Duggumane | news18
Updated:April 22, 2019, 12:01 PM IST
ಕಪ್ ಗೆದ್ದಿದ್ರೂ ಆರ್​ಸಿಬಿ ಅಭಿಮಾನಿಗಳು ಇಷ್ಟು ಸಂಭ್ರಮಿಸುತ್ತಿರಲಿಲ್ಲವಂತೆ
ಸಾಂದರ್ಭಿಕ ಚಿತ್ರ
  • News18
  • Last Updated: April 22, 2019, 12:01 PM IST
  • Share this:
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ನಡುವಣ ಪಂದ್ಯದ​ ಕೊನೆಯ ಓವರ್​. ಸಿಎಸ್​ಕೆ ಗೆಲುವಿಗೆ 26ರನ್​ಗಳ ಅವಶ್ಯಕತೆ ಇತ್ತು. ಬ್ಯಾಟಿಂಗ್​ಗೆ ನಿಂತಿದ್ದು ಧೋನಿ. ಹೀಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಅಚಲ ನಂಬಿಕೆಯಲ್ಲಿದ್ದರು ಸಿಎಸ್​ಕೆ ಅಭಿಮಾನಿಗಳು.

ಕೊನೆಯ ಓವರ್​ನಲ್ಲಿ ಧೋನಿ ಹೊಡಿಬಡಿ ಆಟಕ್ಕೆ ನಿಂತರು. ಫೋರ್​, ಸಿಕ್ಸ್​ಗಳ ಸುರಿಮಳೆ ಸುರಿಸಿದರು. ಒಂದು ಚೆಂಡಂತೂ ಚಿನ್ನಸ್ವಾಮಿ ಸ್ಟೇಡಿಯಂ ದಾಟಿತ್ತು. 19ನೇ ಓವರ್​ನ ಆರಂಭದಲ್ಲಿ ಆರ್​ಸಿಬಿ ಕಡೆ ಇದ್ದ ವಿಜಯಲಕ್ಷ್ಮಿ ಧೋನಿ ಅಬ್ಬರಕ್ಕೆ ನಿಧಾನವಾಗಿ ಸಿಎಸ್​ಕೆ ಕಡೆ ಮುಖ ಮಾಡಿದ್ದಳು. ಆರ್​ಸಿಬಿ-ಸಿಎಸ್​ಕೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ನಿಂತಿದ್ದರು. ವಿಜಯಲಕ್ಷ್ಮೀ ಕೂಡ ತಾನು ಯಾರಿಗೆ ಒಲಿಯಬೇಕು ಎನ್ನುವ ಗೊಂದಲದಲ್ಲಿದ್ದಳು! ಕೊನೆಯ ಓವರ್​ನ ಕೊನೆಯ ಬಾಲ್​. ಚೆನ್ನೈ ಗೆಲುವಿಗೆ ಬೇಕಿದ್ದಿದ್ದು ಕೇವಲ ಎರಡು ರನ್​ ಮಾತ್ರ.

ಉಮೇಶ್​ ಜಾದವ್​ ಎಸೆದ ಬಾಲ್​ ಎದುರಿಸಲು ಧೋನಿ ವಿಫಲರಾದರು. ಬಾಲ್​ ಕೀಪರ್​ ಕೈಸೇರಿತ್ತು. ಕನಿಷ್ಠ  ಒಂದು ರನ್​ ಪಡೆದು ಮ್ಯಾಚ್​ ಟೈ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಎಸ್​ಎನ್​ ಠಾಕೂರ್​ ರನ್​ಔಟ್​ ಆದರು. ಈ ಮೂಲಕ ಬೆಂಗಳೂರು ರೋಚಕ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: RCB vs CSK: ಧೋನಿ ಹೋರಾಟ ವ್ಯರ್ಥ; ರೋಚಕ ಪಂದ್ಯದಲ್ಲಿ ಆರ್​ಸಿಬಿಗೆ 1 ರನ್​ ಅಂತರದ ಜಯ

ಸಿಎಸ್​ಕೆ ವಿರುದ್ಧದ ಮೊದಲ ಮ್ಯಾಚ್​ನಲ್ಲಿ ಹೀನಾಯವಾಗಿ ಸೋತಿದ್ದ ಆರ್​ಸಿಬಿ ಈಗ ಸೇಡು ತೀರಿಸಿಕೊಂಡಿದೆ. ಈ ಗೆಲುವನ್ನು ಆರ್​​ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮೊದಲಿನಿಂದಲೂ ಆರ್​ಸಿಬಿ-ಸಿಎಸ್​ಕೆ ಮ್ಯಾಚ್​ ಎಂದರೆ ಅಭಿಮಾನಿಗಳಲ್ಲಿ ಅದೇನೋ ರೋಚಕತೆ. ಈಗ ಸಿಎಸ್​ಕೆ ವಿರುದ್ಧ ಗೆದ್ದಿರುವುದಕ್ಕೆ ಆರ್​ಸಿಬಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.“ನಾವು ಕಪ್​ ಗೆದ್ದರೂ ಇಷ್ಟು ಸಂಭ್ರಮಿಸುತ್ತಿರಲಿಲ್ಲ. ಆದರೆ, ಸಿಎಸ್​ಕೆ ವಿರುದ್ಧ ಗೆದ್ದಿರುವುದು ಸಂತೋಷ ಹೆಚ್ಚಿಸಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಧೋನಿ ಹೋರಾಟ ವ್ಯರ್ಥವಾಗಿರುವುದಕ್ಕೆ ಸಿಎಸ್​ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಆರ್​ಸಿಬಿ ನೀಡಿದ್ದ 162 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ 30 ರನ್​​ಗೂ ಮುನ್ನವೆ ಪ್ರಮುಖ 4 ವಿಕೆಟ್ ಕಳೆದಯಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್​ನಲ್ಲೇ ಡೇಲ್ ಸ್ಟೇನ್​​ ಶೇನ್ ವಾಟ್ಸನ್(5) ಹಾಗೂ ಸರೇಶ್ ರೈನಾ(0) ವಿಕೆಟ್ ಕಿತ್ತರು. ಇದಾದ ಬೆನ್ನಲ್ಲೆ ಫಾಫ್ ಡುಪ್ಲೆಸಿಸ್(5) ಹಾಗೂ ಕೇದರ್ ಜಾಧವ್(9) ಕೂಡ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಎಡವಿದರು.

ಇದನ್ನೂ ಓದಿ: IPL 2019 Live Score, RCB vs CSK: ಧೋನಿ ಏಕಾಂಗಿ ಹೋರಾಟ ವ್ಯರ್ಥ; ಆರ್​ಸಿಬಿಗೆ 1 ರನ್​ಗಳ ರೋಚಕ ಜಯ

ಈ ಸಂದರ್ಭ ನಾಯಕನ ಎಂಎಸ್ ಧೋನಿ ಹಾಗೂ ಅಂಬಟಿ ರಾಯುಡು ಜೊತೆಯಾಗಿ ಇನ್ನಿಂಗ್ಸ್​ ಕಟ್ಟಲು ಹೊರಟರು. ಅದರಂತೆ ಉತ್ತಮ ಆಟವಾಡಿದ ಈ ಜೋಡಿ 55 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ರಾಯುಡು 29 ರನ್ ಗಳಿಸಿರುವಾಗ ಚಹಾಲ್ ಸ್ಪಿನ್ ಬಲೆಗೆ ಬಲಿಯಾದರು. ಇದಾದ ಸ್ವಲ್ಪದರಲ್ಲೆ ಜಡೇಜಾ(11) ಕೂಡ ರನೌಟ್​ ಆಗಿದ್ದು ಚೆನ್ನೈ ಸೂಲಿನ ಸುಳಿಯಲ್ಲಿ ಸಿಲುಕಿತು.

ಗೆಲುವಿನ ಸಂತಸದಲ್ಲಿ ತೇಲುತ್ತಿದ್ದ ಆರ್​​ಸಿಬಿಗೆ ಮೈಚಳಿ ಬಿಡಿಸಿದ್ದು ಚೆನ್ನೈ ನಾಯಕ ಎಂಎಸ್ ಧೋನಿ. ವಿಕೆಟ್ ಉರುಳುತ್ತಿದ್ದರು ಕೊನೆ ಹಂತದಲ್ಲಿ ಸ್ಫೋಟಕ ಆಟವಾಡಿದ ಧೋನಿ ಇನ್ನೇನು ಚೆನ್ನೈಗೆ ಗೆಲುವು ತಂದುಕೊಡುತ್ತಾರೆ ಎಂದುಕೊಂಡಿದ್ದರು. ಕೊನೆಯ 12 ಎಸೆತಗಳಲ್ಲಿ ಚೆನ್ನೈ ಗೆಲುವುಗೆ 36 ರನ್​ಗಳ ಅವಶ್ಯಕತೆಯಿತ್ತು. 19ನೇ ಓವರ್​ನಲ್ಲಿ ಧೋನಿ ಬ್ಯಾಟ್​ನಿಂದ 1 ಸಿಕ್ಸ್ ಸೇರಿ ಒಟ್ಟು 10 ರನ್​ಗಳು ಬಂದವು. ಪರಿಣಾಮ ಕೊನೆಯ ಓವರ್​ನಲ್ಲಿ 26 ರನ್​ಗಳು ಬೇಕಾಗಿತ್ತು. ಚೆನ್ನೈ 20 ಓವರ್​ಗೆ 8 ವಿಕಟ್ ಕಳೆದುಕೊಂಡು 160 ರನ್​ ಗಳಿಲಷ್ಟೆ ಶಕ್ತವಾಯಿತು. ಧೋನಿ 48 ಎಸೆತಗಳಲ್ಲಿ 5 ಬೌಂಡರಿ, 7 ಮನಮೋಹಕ ಸಿಕ್ಸ್​ ಸಿಡಿಸಿ ಅಜೇಯ 84 ರನ್ ಗಳಿಸಿದರು. ಆರ್​ಸಿಬಿ ಪರ ಡೇಲ್ ಸ್ಟೇನ್ ಹಾಗೂ ಉಮೇಶ್ ಯಾದವ್ ತಲಾ 2 ವಿಕೆಟ್ ಕಿತ್ತರೆ, ಸೈನಿ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು

First published: April 22, 2019, 11:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading