ಪಾಲುದಾರರಿಂದಲೇ ಕ್ರಿಕೆಟಿಗ ಸೆಹ್ವಾಗ್ ಪತ್ನಿಗೆ ಪಂಗನಾಮ

ಸಾಲಗಾರರಿಗೆ ಎರಡು ಪೋಸ್ಟ್‌ಡೇಟೆಡ್ ಚೆಕ್‌ಗಳನ್ನು ಪಾಲುದಾರರು ನೀಡಿದ್ದರು. ನಂತರ ಸಾಲದ ಮೊತ್ತವನ್ನು ಮರುಪಾವತಿಸಲು ಸಂಸ್ಥೆ ವಿಫಲವಾಗಿದ್ದು, ಇದರಿಂದ ಸಾಲಗಾರರು ಮಧ್ಯಸ್ಥಿಕೆ ಷರತ್ತು ವಿಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

zahir | news18
Updated:July 13, 2019, 6:31 PM IST
ಪಾಲುದಾರರಿಂದಲೇ ಕ್ರಿಕೆಟಿಗ ಸೆಹ್ವಾಗ್ ಪತ್ನಿಗೆ ಪಂಗನಾಮ
sehwag
  • News18
  • Last Updated: July 13, 2019, 6:31 PM IST
  • Share this:
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್ ತಮ್ಮ ಉದ್ಯಮ ಪಾಲುದಾರರ ವಿರುದ್ಧ ವಂಚನೆ ದೂರು ನೀಡಿದ್ದಾರೆ. ಆರತಿ ಅವರ ಸಹಿಯನ್ನು ನಕಲು ಮಾಡಿ 4.5 ಕೋಟಿ ಸಾಲ ಪಡೆದಿದ್ದು, ಇದನ್ನು ಮರುಪಾವತಿ ಮಾಡದೇ ಕಂಪೆನಿಗೆ ಮೋಸ ಮಾಡಿದ್ದಾರೆ ಎಂದು ಪೊಲೀಸ್​ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರು ಕಳೆದ ತಿಂಗಳು ದಾಖಲಾಗಿದ್ದು, ಆರೋಪಿಗಳು ಯಾವುದೇ ಒಪ್ಪಿಗೆಯಿಲ್ಲದೆ ಸಾಲಗಾರರಿಂದ 4.5 ಕೋಟಿ ರೂ.ಗಳ ಲೋನ್ ಪಡೆದಿದ್ದರು. ಈ ಸಾಲಕ್ಕಾಗಿ ಉದ್ಯಮದ ಪಾಲುದಾರರಾಗಿರುವ ನನ್ನ ಸಹಿಯನ್ನು ನಕಲು ಮಾಡಲಾಗಿತ್ತು ಎಂದು ಆರತಿ ಆರೋಪಿಸಿದ್ದಾರೆ.

ಸಾಲಗಾರರಿಗೆ ಎರಡು ಪೋಸ್ಟ್‌ಡೇಟೆಡ್ ಚೆಕ್‌ಗಳನ್ನು ಪಾಲುದಾರರು ನೀಡಿದ್ದರು. ನಂತರ ಸಾಲದ ಮೊತ್ತವನ್ನು ಮರುಪಾವತಿಸಲು ಸಂಸ್ಥೆ ವಿಫಲವಾಗಿದ್ದು, ಇದರಿಂದ ಸಾಲಗಾರರು ಮಧ್ಯಸ್ಥಿಕೆ ಷರತ್ತು ವಿಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ತನ್ನ ಸಹಿಯನ್ನು ನಕಲು ಮಾಡಿರುವುದು ಕಂಪೆನಿಯ ಪಾಲುದಾರರಾಗಿದ್ದ ಆರತಿ ಅವರ ಗಮನಕ್ಕೆ ಬಂದಿದೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ಮೋಸ ಮತ್ತು ಅಪ್ರಾಮಾಣಿಕತೆ), 468 (ನಕಲಿ), 471 (ನಕಲಿ ದಾಖಲೆಯನ್ನು ಬಳಸುವುದು) ಮತ್ತು 34 (ಸಾಮಾನ್ಯ ದುರುದ್ದೇಶ) ಕಾಯ್ದೆಯ ಅಡಿಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ವಿರೇಂದ್ರ ಸೆಹ್ವಾಗ್​ ಆರತಿ ಅವರನ್ನು 2004 ರಲ್ಲಿ ವಿವಾಹವಾಗಿದ್ದರು.
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading