(VIDEO): ಈ ರೀತಿಯೂ ಸಿಕ್ಸ್ ಬಾರಿಸಬಹುದಾ?; ಬಾಂಗ್ಲಾ ಬ್ಯಾಟ್ಸ್​ಮನ್​ ಸಿಕ್ಸ್​ ನೋಡಿ ಕೊಹ್ಲಿ ಶಾಕ್!

ಭಾರತೀಯ ಬೌಲರ್​ಗಳ ಸ್ವಿಂಗ್ ಮೋಡಿಗೆ ಬಾಂಗ್ಲಾ ಪಡೆ ಮತ್ತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿತು. ಈ ನಡುವೆ ಮೆಹ್ದಿ ಹಸನ್ ಬ್ಯಾಟ್​ನಿಂದ ಸಿಡಿದ ಒಂದು ಸಿಕ್ಸ್​ ಮೈದಾನಲ್ಲಿದ್ದ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿತು.

ಫೋಟೋ ಕೃಪೆ: BCCI ಸ್ಕ್ರೀನ್​ ಶಾಟ್

ಫೋಟೋ ಕೃಪೆ: BCCI ಸ್ಕ್ರೀನ್​ ಶಾಟ್

  • Share this:
ಬೆಂಗಳೂರು (ನ. 24): ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಸಾಗುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಐತಿಹಾಸಿಕ ಡೇ ನೈಟ್ ಟೆಸ್ಟ್​ ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲಿಡುತ್ತಿದೆ. 2ನೇ ಇನ್ನಿಂಗ್ಸ್​ನಲ್ಲೂ ಇಶಾಂತ್ ಶರ್ಮಾ ಬೌಲಿಂಗ್ ದಾಳಿಗೆ ತತ್ತರಿಸಿರುವ ಬಾಂಗ್ಲಾ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿದೆ.

ಮುಷ್ಫೀಕರ್ ರಹೀಮ್ ಅರ್ಧಶತಕ ಬಾರಿಸಿ ಬಾಂಗ್ಲಾಕ್ಕೆ ಆಸರೆಯಾಗಿ ನಿಂತಿದ್ದಾರೆ. ಇಂದು 89 ರನ್​​ ಒಳಗೆ ಬಾಂಗ್ಲಾದ 4 ವಿಕೆಟ್ ಕಿತ್ತರೆ ಭಾರತ ಇನ್ನಿಂಗ್ಸ್​ ಜೊತೆಗೆ ಸುಲಭ ಜಯ ಸಾಧಿಸಲಿದೆ. ನಿನ್ನೆ ಭಾರತ 347 ರನ್​ಗೆ ಡಿಕ್ಲೇರ್ ಮಾಡಿದ ಪರಿಣಾಮ 241 ರನ್​ಗಳ ಹಿನ್ನಡೆಯೊಂದಿಗೆ ಬಾಂಗ್ಲಾ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿತು.

IND vs BAN: 2ನೇ ಟೆಸ್ಟ್​ನ ಎರಡನೇ ದಿನದಾಟದ ಕೆಲ ರೋಚಕ ಕ್ಷಣಗಳು!ಆದರೆ, ಭಾರತೀಯ ಬೌಲರ್​ಗಳ ಸ್ವಿಂಗ್ ಮೋಡಿಗೆ ಬಾಂಗ್ಲಾ ಪಡೆ ಮತ್ತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿತು. ಈ ನಡುವೆ ಮೆಹ್ದಿ ಹಸನ್ ಬ್ಯಾಟ್​ನಿಂದ ಸಿಡಿದ ಒಂದು ಸಿಕ್ಸ್​ ಮೈದಾನಲ್ಲಿದ್ದ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿತು.

ಬಾಂಗ್ಲಾ ಬ್ಯಾಟಿಂಗ್​ ಮಾಡುವಾಗ 24ನೇ ಓವರ್​ ಅನ್ನು ಮೊಹಮ್ಮದ್ ಶಮಿ ಬೌಲಿಂಗ್​ ಮಾಡಲು ಬಂದರು. ಈ ಸಂದರ್ಭ ಲೆಗ್​ ಸೈಡ್​ನಲ್ಲಿ ಶಮಿ ಎಸೆದ ಶಾರ್ಟ್​​ ಬಾಲ್​ನ್ನು ಮೆಹ್ದಿ ಬ್ಯಾಟ್ ಮೂಲಕ ಟಚ್ ಮಾಡಿದರಷ್ಟೆ. ಆದರೆ, ಬಾಲ್ ಕೀಪರ್ ತಲೆಮೇಲೆ ಹೋಗಿ ಬೌಂಡರಿ ಗೆರೆ ದಾಟಿದ್ದು ವಿಶೇಷ.

IPL 2020: ಭಾರತದ ಈ ನಾಲ್ವರು ಯುವ ಆಟಗಾರರ ಖರೀದಿಗೆ ನಡೆಯಲಿದೆ 8 ತಂಡಗಳ ಬಿಗ್ ಫೈಟ್..!

ಚೆಂಡು ನೇರವಾಗಿ ಬೌಂಡರಿ ಗೆರೆಗೆ ತಲುಪಿದ್ದು ಕಂಡು ಸ್ವತಃ ಮೆಹ್ದಿ ಅವರಿಗೆ ಶಾಕ್ ಆಯಿತು, ಅಲ್ಲದೆ ನಾಯಕ ವಿರಾಟ್ ಕೊಹ್ಲಿ ತಲೆ ಮೇಲೆ ಕೈಯಿಟ್ಟು ಅರೆ, ಇದು ಹೇಗೆ ಸಾಧ್ಯ ಎಂಬಂತೆ ಲುಕ್ ಕೊಟ್ಟರು. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

First published: