Virat Kohli| ಭಾರತದ ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ದಾಖಲೆ; ಆರು ಸರಣಿ ಗೆಲುವು, ರನ್ ಗಳಿಕೆಯಲ್ಲೂ ಮುಂದು!

ಬಲಿಷ್ಠ ತಂಡಗಳ ವಿರುದ್ಧ ಸರಣಿ ಗೆಲುವುಗಳನ್ನು ದಾಖಲಿಸಿದ ಏಕೈಕ ಭಾರತದ ನಾಯಕ ವಿರಾಟ್ ಕೊಹ್ಲಿ. ಭಾರತವು ಕೊಹ್ಲಿ ನಾಯಕತ್ವದಲ್ಲಿ 2020 ರಲ್ಲಿ ನ್ಯೂಜಿಲೆಂಡ್‌ನಲ್ಲಿ 5-0, 2020 ರಲ್ಲಿ ಆಸ್ಟ್ರೇಲಿಯಾದಲ್ಲಿ 2-1, 2018 ರಲ್ಲಿ ಇಂಗ್ಲೆಂಡ್‌ನಲ್ಲಿ 2-1 ಮತ್ತು 2018 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 2-1 ಅಂತರದಲ್ಲಿ ಗೆಲುವು ಸಾಧಿಸಿದ್ದು ವಿಶೇಷ.

ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

 • Share this:
  ಅಕ್ಟೋಬರ್​ ನಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ ನಾಯಕನಾಗಿ ವಿರಾಟ್​ ಕೊಹ್ಲಿ (Virat Kohli) ಪಾಲಿನ ಕೊನೆಯ ಟೂರ್ನಿಯಾಗಲಿದೆ. ಏಕೆಂದರೆ ಕೊಹ್ಲಿ ಈಗಾಗಲೇ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ವಿಶ್ವಕಪ್ ನಂತರ ರೋಹಿತ್ ಶರ್ಮಾ ಭಾರತದ ಟಿ20 ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. ಆದರೆ, ಮುಂದಿನ ವಿಶ್ವಕಪ್​ ಗೆದ್ದರೆ (T20 World Cup) 32 ವರ್ಷದ ವಿರಾಟ್ ಕೊಹ್ಲಿ ಪಾಲಿಗೆ ಮೊದಲ ಐಸಿಸಿ ಟ್ರೋಫಿ ಗೆದ್ದಂತಾಗುತ್ತದೆ. ವಿಶ್ವಕಪ್ ಗೆದ್ದು ನಾಯಕ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂಬುದು ಕೊಹ್ಲಿ ಮನದಿಂಗಿತ. ಸತತ 6 ವರ್ಷಗಳಿಂದ ಭಾರತದ ಎಲ್ಲಾ ಮಾದರಿಗೂ ನಾಯಕರಾಗಿಯೂ ಒಂದೇ ಒಂದು ಐಸಿಸಿ ಟ್ರೋಫಿ (ICC Trophy) ಗೆಲ್ಲುವಲ್ಲಿ ವಿರಾಟ್ ಸಫಲರಾಗಿಲ್ಲ. ಹೀಗಾಗಿ ಅವರ ನಾಯಕತ್ವದ ಮೇಲೂ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಆದರೆ, ವಿರಾಟ್​ ಕೊಹ್ಲಿ ನಾಯಕನಾಗಿಯೂ ವಿಫಲರಾಗಿಲ್ಲ ಎಂಬುದನ್ನು ಅವರ ಅಂಕಿಅಂಶಗಳೇ ನುಡಿಯುತ್ತವೆ. ನಾಯ

  ವಿರಾಟ್ ಕೊಹ್ಲಿ 45 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು 27 ರಲ್ಲಿ ಗೆದ್ದಿದ್ದಾರೆ ಮತ್ತು 14 ರಲ್ಲಿ ಸೋತಿದ್ದಾರೆ. ಎರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, ಎರಡು ಪಂದ್ಯಗಳು ಟೈ ಆಗಿವೆ. ಇದು ಕೊಹ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಟಿ20 ನಾಯಕ ಎಂಬುದಕ್ಕೆ ಸಾಕ್ಷಿ. ಮಹೇಂದ್ರ ಸಿಂಗ್ ಧೋನಿ 72 ಪಂದ್ಯಗಳಲ್ಲಿ 41 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

  ಒಟ್ಟಾರೆಯಾಗಿ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ನಾಯಕರಾಗಿ ಮುನ್ನಡೆಸಿರುವ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಈ ಮಾದರಿಯಲ್ಲಿ ಅತ್ಯಂತ ಯಶಸ್ವಿ ನಾಯಕ ಅಫ್ಘಾನಿಸ್ತಾನದ ಅಸ್ಗರ್ ಅಫ್ಗನ್. ಆತ 52 ಪಂದ್ಯಗಳಲ್ಲಿ 42 ಗೆಲುವು ಸಾಧಿಸಿದ್ದಾರೆ. ವಿರಾಟ್ ಕೊಹ್ಲಿಯ ಗೆಲುವಿನ ಸಂಖ್ಯೆ ಶೇ.65.11 ಅಫ್ಘಾನಿಸ್ತಾನದ ನಾಯಕ ಶೇ.81.73 ರಷ್ಟು ಗೆಲುವಿನ ದಾಖಲೆ ಹೊಂದಿದ್ದಾರೆ.

  ಇನ್ನೂ ಟಿ20 ಮಾದರಿಯಲ್ಲಿ ನಾಯಕನಾಗಿ ಅತಿಹೆಚ್ಚು ರನ್ ಪೇರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಮುಂದಿದ್ದಾರೆ. ವಿರಾಟ್ ಕೊಹ್ಲಿ ಈವರೆಗೆ 1502 ಟಿ20  ರನ್ ಪೇರಿಸಿದ್ದಾರೆ.  ಟಿ 20 ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೇವಲ 30 ಇನ್ನಿಂಗ್ಸ್‌ಗಳಲ್ಲಿ 1000 ರನ್​ ಪೇರಿಸಿದ ದಾಖಲೆಯೂ ಕೊಹ್ಲಿ ಹೆಸರಲ್ಲಿದೆ. ನಾಯಕನಾಗಿ 12 ಅರ್ಧ ಶತಕ ಬಾರಿಸಿರುವ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬಾಬರ್ ಅಜಮ್ (11), ಆರನ್ ಫಿಂಚ್ (11), ಮತ್ತು ಕೇನ್ ವಿಲಿಯಮ್ಸನ್ (11) ಇದ್ದಾರೆ.

  ಇದನ್ನೂ ಓದಿ: Virat Kohli- ಟಿ20 ವಿಶ್ವಕಪ್ ಬಳಿಕ ನಾಯಕತ್ವದಿಂದ ಇಳಿಯಲಿರುವ ವಿರಾಟ್ ಕೊಹ್ಲಿ

  ಬಲಿಷ್ಠ ತಂಡಗಳ ವಿರುದ್ಧ ಸರಣಿ ಗೆಲುವುಗಳನ್ನು ದಾಖಲಿಸಿದ ಏಕೈಕ ಭಾರತದ ನಾಯಕ ವಿರಾಟ್ ಕೊಹ್ಲಿ. ಭಾರತವು ಕೊಹ್ಲಿ ನಾಯಕತ್ವದಲ್ಲಿ 2020 ರಲ್ಲಿ ನ್ಯೂಜಿಲೆಂಡ್‌ನಲ್ಲಿ 5-0, 2020 ರಲ್ಲಿ ಆಸ್ಟ್ರೇಲಿಯಾದಲ್ಲಿ 2-1, 2018 ರಲ್ಲಿ ಇಂಗ್ಲೆಂಡ್‌ನಲ್ಲಿ 2-1 ಮತ್ತು 2018 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 2-1 ಅಂತರದಲ್ಲಿ ಗೆಲುವು ಸಾಧಿಸಿದ್ದು ವಿಶೇಷ.
  Published by:MAshok Kumar
  First published: