HOME » NEWS » Sports » CRICKET VIRAT KOHLIS KING POSE IN THIS PHOTO OF CRICKET WORLD CUP CAPTAINS WILL REMIND YOU OF GOT

ICC World Cup 2019: ವಿರಾಟ್ ಕಿಂಗ್ ಪೋಸ್; ಎಲ್ಲ ನಾಯಕರಿಗೆ ಕೊಹ್ಲಿಯೇ ಬಾಸ್

Virat Kohli: ಭಾರತ ಎರಡು ಅಭ್ಯಾಸ ಪಂದ್ಯವನ್ನು ಆಡಲಿದ್ದು, ಮೇ. 25 ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಮೇ. 29 ರಂದು ಬಾಂಗ್ಲಾದೇಶ ವಿರುದ್ಧ ವಾರ್ಮ್​ಅಪ್ ಪಂದ್ಯವನ್ನಾಡಲಿದೆ.

Vinay Bhat | news18
Updated:May 24, 2019, 3:47 PM IST
ICC World Cup 2019: ವಿರಾಟ್ ಕಿಂಗ್ ಪೋಸ್; ಎಲ್ಲ ನಾಯಕರಿಗೆ ಕೊಹ್ಲಿಯೇ ಬಾಸ್
ವಿಶ್ವಕಪ್ 2019ರ ಎಲ್ಲ ತಂಡದ ನಾಯಕರು
  • News18
  • Last Updated: May 24, 2019, 3:47 PM IST
  • Share this:
ಬೆಂಗಳೂರು (ಮೇ. 24): ವಿಶ್ವಕಪ್ ಮಹಾಸಮರಕ್ಕೆ ಇನ್ನೇನು ಕೇವಲ ಐದು ದಿನಗಳಷ್ಟೆ ಬಾಕಿ ಉಳಿದಿವೆ. ಮೇ 30 ರಂದು ಈ ಕ್ರಿಕೆಟ್ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದ್ದು, ಇಂದಿನಿಂದ ಅಭ್ಯಾಸ ಪಂದ್ಯಗಳು ಆರಂಭವಾಗಿವೆ.

ಈ ಮಧ್ಯೆ ವಿಶ್ವಕಪ್​​ನಲ್ಲಿ ಭಾಗವಹಿಸುತ್ತಿರುವ ಎಲ್ಲ 10 ತಂಡದ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಅದರಲ್ಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋಟೋಶೂಟ್​​ನಲ್ಲಿ ವಿಶೇಷವಾಗಿ ಕಾಣಿಸಿಕೊಂಡು ಹೆಚ್ಚಿನ ಗಮನ ಸೆಳೆದಿದ್ದಾರೆ. ಕೊಹ್ಲಿಯ ಪೋಸ್​​ಗೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಕಮೆಂಟ್​​ಗಳು ಬರುತ್ತಿವೆ.

 ಇದನ್ನೂ ಓದಿ: ICC World Cup 2019: ಆಂಗ್ಲರ ನಾಡಿಗೆ ಕಾಲಿಟ್ಟ ವಿರಾಟ್ ಸೈನ್ಯ; ಕಿವೀಸ್ ವಿರುದ್ಧ ಮೊದಲ ಅಭ್ಯಾಸ ಪಂದ್ಯಇನ್ನು ವೇದಿಕೆಯಲ್ಲಿ ಎಲ್ಲಾ ತಂಡದ ನಾಯಕರು ಸಂದರ್ಶನದಲ್ಲಿ ಭಾಗಿಯಾಗಿ ವಿಶ್ವಕಪ್ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ನಿಮ್ಮ ತಂಡದಲ್ಲಿ ಯಾವ ಆಟಗಾರ ಇರಬೇಕಿತ್ತು? ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನಮ್ಮ ತಂಡದಲ್ಲಿ ಆಸ್ಟ್ರೇಲಿಯಾ ತಂಡದ ಫಾಫ್ ಡುಪ್ಲೆಸಿಸ್​ರಂತಹ ಆಟಗಾರನನ್ನ ನೋಡಲು ಇಚ್ಛಿಸುತ್ತೇನೆ ಎಂದರು. ಪಾಕ್ ನಾಯಕ ಜೋಸ್ ಬಟ್ಲರ್​ ಅವರನ್ನು ಆರಿಸಿದರು. ಹೀಗೆ ಎಲ್ಲ ತಂಡದ ನಾಯಕರು ಸಂದರ್ಶನದಲ್ಲಿ ಭಾಗಿಯಾಗಿ ತಮ್ಮ ಅನಿಉಸಿಕೆಯನ್ನು ಹಂಚಿಕೊಂಡರು.

ಎಲ್ಲ ತಂಡಗಳು ವಿಶ್ವಕಪ್​ಗಾಗಿ ಈಗಾಗಲೇ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಭಾರತ ಎರಡು ಅಭ್ಯಾಸ ಪಂದ್ಯವನ್ನು ಆಡಲಿದ್ದು, ಮೇ. 25 ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಮೇ. 29 ರಂದು ಬಾಂಗ್ಲಾದೇಶ ವಿರುದ್ಧ ವಾರ್ಮ್​ಅಪ್ ಪಂದ್ಯವನ್ನಾಡಲಿದೆ.

 

First published: May 24, 2019, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories