Virat Kohli ಬಳಿಯಿದ್ದ ಲ್ಯಾಂಬೋರ್ಗಿನಿ ಕಾರು ಸೇಲ್​.. ಆಸಕ್ತರಿಗೆ ಖರೀದಿಸುವ ಅವಕಾಶ!

Lamborghini Gallardo Spyder: ಕೊಹ್ಲಿ ಬಳಿ ಇದ್ದ ಈ ಮಾದರಿ ಕಾರನ್ನು ಎಲ್​ಪಿ560-4 ಎಂದು ಕರೆಯಲಾಗುತ್ತದೆ. ಇದು 5.2 ನ್ಯಾಚುರಲ್​ ಆಸ್ಪಿರೇಟೆಡ್​ ವಿ10 ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಗರಿಷ್ಠ 560ಪಿಎಸ್​ ಶಕ್ತಿಯನ್ನು ಉತ್ಪಾದಿಸುತ್ತದೆ.

Virat Kohli

Virat Kohli

 • Share this:
  Virat Kohli: ಲ್ಯಾಂಬೋರ್ಗಿನಿ ಹೆಸರು ಕೇಳುವಾಗಲೇ ಯುವಕರು ಒಂದು ಬಾರಿ ಅದರ ಕಲ್ಪನೆ ಮಾಡಿಕೊಳ್ಳುತ್ತಾರೆ. ನಿಜವಾಗಿಯೂ ಖರೀದಿಸಿದರೆ ಹೇಗಿರಬಹುದು ಎಂದು ಮನದಲ್ಲೇ ಅಂದುಕೊಳ್ಳುತ್ತಾರೆ. ಅದರೆ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಬಳಿಯಿದ್ದ ಲ್ಯಾಂಬೋರ್ಗಿಸಿ ಕಾರು ಖರೀದಿಸಿದರೆ ಹೇಗಿರುತ್ತೆ? ಊಹಿಸಿಕೊಳ್ಳಲು ಸಾಧ್ಯವಿಲ್ಲವಲ್ಲ!. ಆದರೆ ಇದು ನಿಜ. ಕೊಹ್ಲಿ ಬಳಸಿದ್ದ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸುವ ಅವಕಾಶವೊಂದಿದೆ.

  ವಿರಾಟ್​ ಕೊಹ್ಲಿ ಬಳಿ ಅನೇಕ ಕಾರು ಸಂಗ್ರಹವಿದೆ. ಅದರಲ್ಲಿ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್ (Lamborghini Gallardo Spyder)​ ಕೂಡ ಸೇರಿತ್ತು. ಆದರೀಗ ಕೊಹ್ಲಿ ಅದನ್ನು ಮಾರಿದ್ದಾರೆ. ಸದ್ಯ ಕೇರಳದ ಕೊಚ್ಚಿಯಲ್ಲಿ ಈ ಕಾರಿದ್ದು, ಕಾರು ಡೀಲರ್​ ರಾಯಲ್​ ಡ್ರೈವ್​ನಲ್ಲಿ 1.35 ಕೋಟಿಗೆ ಮಾರಾಟ ಮಾಡುತ್ತಿದೆ.

  ಕೊಹ್ಲಿ (Kohli)  ಲ್ಯಾಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್​ ಕಾರನ್ನು 2015ರಲ್ಲಿ ಖರೀದಿಸಿದರು. ಸ್ವಲ್ಪ ಸಮಯದ ಬಳಿಕ ಮಾರಿದರು. ಪುದುಚೇರಿ ರಿಜಿಸ್ಟ್ರೇಶನ್​ ಈ ಕಾರು ರಾಯಲ್​ ಡ್ರೈವ್​ನಲ್ಲಿ 1.35 ಕೋಟಿಗೆ ಮಾರಾಟವಾಗಿದೆ.

  ಲ್ಯಾಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್​ ಕಾರು 2013ರ ಮಾಡೆಲ್ ಆಗಿದ್ದು, ಅಲ್ಪಾವಧಿಯ ತನಕ ಕೊಹ್ಲಿ ಉಪಯೋಗಿಸಿದ್ದಾರೆ. ಇದು ಕೇವಲ 10 ಸಾವಿರ ಕಿ.ಮೀ ಮಾತ್ರ ಓಡಿದೆ ಎಂದು ರಾಯಲ್​ ಡ್ರೈವ್​ನ  ಮಾರ್ಕೆಂಟಿಗ್​  ಮ್ಯಾನೇಜರ್​ ಹೇಳಿದರು.

  ನಂತರ ಮಾತನಾಡಿದ ಅವರು, ನಾವು ಕೊಹ್ಲಿಯ ಕಾರನ್ನು ಕೊಲ್ಕತ್ತಾ ಮೂಲದ ಪ್ರೀಮಿಯಂ ಮತ್ತು  ಐಷಾರಾಮಿ ಕಾರು ಡೀಲರ್​ಗಳಿಂದ ಖರೀದಿಸಿದ್ದೇವೆ. ಜನವರು 2021ರಲ್ಲಿ ಕೊಂಡುಕೊಂಡಿದ್ದೇವೆ ಎಂದರು.

  ಕೊಹ್ಲಿ ಬಳಿ ಇದ್ದ ಈ ಮಾದರಿ ಕಾರನ್ನು ಎಲ್​ಪಿ560-4 ಎಂದು ಕರೆಯಲಾಗುತ್ತದೆ. ಇದು 5.2 ನ್ಯಾಚುರಲ್​ ಆಸ್ಪಿರೇಟೆಡ್​ ವಿ10 ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಗರಿಷ್ಠ 560ಪಿಎಸ್​ ಶಕ್ತಿಯನ್ನು ಉತ್ಪಾದಿಸುತ್ತದೆ.

  ಲ್ಯಾಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್​ ಕಾರು ನಾಲ್ಕು ಸೆಂಕೆಂಡಿನಲ್ಲಿ 1-100 ಕಿ.ಮೀ ವೇಗದಲ್ಲಿ ಚಲಾಯಿಸಬಹುದು ಮತ್ತು ಎಲೆಕಟ್ರಾನಿಕ್​ ಸೀಮಿತ ಗರಿಷ್ಠ ವೇಗ ಗಂಟೆಗೆಗೆ 324 ಕಿ.ಮೀ ಕ್ರಮನಿಸುತ್ತದೆ .

  ಇಟಾಲಿಯನ್​​ ಅಟೋಮೊಬೈಲ್​ ಕಂಪನಿ 1842ರಲ್ಲಿ ಉತ್ಪಾದಿಸಿದ್ದ ಮಿಯುರಾ ಲೈನ್​​ ಬುಲ್ಸ್​ ಕಂಡು ಲ್ಯಾಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್ ಅನ್ನು ಸಿದ್ಧಪಡಿಸಿದರು.

  ಲ್ಯಾಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್ ಕಾರನ್ನು ಮಿಯುರಾಸ್​ಗಾಗಿ 2003ರಲ್ಲಿ ಸಿದ್ಧಪಡಿಸಿದರು.  ಸದ್ಯ ಜನಪ್ರಿಯತೆ ಪಡೆದ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಕಾರು ಕೂಡ ಒಂದು. 2015ರಲ್ಲಿ ನವೆಂಬರ್​ ತಿಂಗಳಿನಲ್ಲಿ ಗಲ್ಲಾರ್ಡೊ ಕಾರನ್ನು ಹೊರತರಲಾಯಿತು. 2014ರಲ್ಲಿ ಪರಿಚಯಿಸಿದ ಹುರಾಕ್​ ಬದಲಿಯಾಗಿ ಈ ಕಾರನ್ನು ಮಾರುಕಟ್ಟೆಗೆ ತರಲಾಯಿತು.

  Read Also⇒ Reality Show ವೇದಿಕೆಯಲ್ಲಿ ಸ್ಪರ್ಧಿಗೆ ಕಿಸ್​ ಮಾಡಿ ಕೆನ್ನೆ ಕಚ್ಚಿದ ಕನ್ನಡದ ನಟಿ! ವಿಡಿಯೋ ವೈರಲ್​​

  ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಗೆ ವಿದಾಯ!

  ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿ ಅಚ್ಚರಿ ಹುಟ್ಟಿಸಿದ್ದ ವಿರಾಟ್ ಕೊಹ್ಲಿ (Virat Kohli) ಇದೀಗ ಐಪಿಎಲ್ ಟೂರ್ನಿಯಲ್ಲೂ ಶಾಕ್ ಕೊಟ್ಟಿದ್ಧಾರೆ. ಐಪಿಎಲ್​ನ ಎರಡನೇ ಲೆಗ್ ಪಂದ್ಯಗಳು ಆರಂಭಗೊಂಡ ದಿನವೇ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಗೆ ವಿದಾಯ (Step Down from RCB Captaincy) ಹೇಳುತ್ತಿರುವುದಾಗಿ ಘೋಷಿಸಿದ್ಧಾರೆ. ಆರ್​ಸಿಬಿ ತಂಡದ ನಾಯಕರಾಗಿ ಇದು ನನ್ನ ಕೊನೆಯ ಐಪಿಎಲ್ ಟೂರ್ನಿ ಎಂದು ವಿರಾಟ್ ಕೊಹ್ಲಿ ಹೇಳಿದ್ಧಾರೆಂದು ಬೆಂಗಳೂರು ರಾಯಲ್ ಚಾಲೆಂಜರ್ಸ್​ನ (RCB) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿದೆ. ಆದರೆ, ಆರ್​ಸಿಬಿ ಆಟಗಾರನಾಗಿ ಅವರು ಮುಂದುವರಿಯಲಿದ್ಧಾರೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ಆರ್​ಸಿಬಿ ಜೊತೆ ಇರುತ್ತೇನೆ ಎಂದು ಕೊಹ್ಲಿ ಖಚಿತಪಡಿಸಿದ್ಧಾರೆ.
  Published by:Harshith AS
  First published: