Virat Kohli’s Car- ಧೂಳಿಡಿದು ನಿಂತಿದೆ ವಿರಾಟ್ ಕೊಹ್ಲಿಯ ಮೊದಲ Audi ಕಾರು; ಫೋಟೋ ವೈರಲ್

Audi R8 V10- ಇದು ವಿರಾಟ್ ಕೊಹ್ಲಿ ಅವರ ಮೊದಲ ಕಾರು. 2018ರಿಂದಲೂ ಇದು ಪೊಲೀಸ್ ಮೈದಾನದಲ್ಲಿ ಅನಾಥವಾಗಿ ನಿಂತಿದೆ. ಇದಕ್ಕೆ ಕಾರಣರಾದವ ಒಬ್ಬ ಕ್ರಿಮಿನಲ್ ವ್ಯಕ್ತಿ…

ವಿರಾಟ್ ಕೊಹ್ಲಿ ಹಾಗೂ ಅವರ ಹಳೆಯ ಕಾರು

ವಿರಾಟ್ ಕೊಹ್ಲಿ ಹಾಗೂ ಅವರ ಹಳೆಯ ಕಾರು

 • Share this:
  ಮುಂಬೈ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಈ ಬಾರಿ ಟಿ20 ವಿಶ್ವಕಪ್​ನಲ್ಲಿ ನಾಯಕನಾಗಿ ನಿರಾಶೆ ಅನುಭವಿಸಿದ್ದಾರೆ. ಭಾರತ ತಂಡ ವಿಶ್ವಕಪ್ ಸೆಮಿಫೈನಲ್​ಗೆ ಪ್ರವೇಶ ಪಡೆಯಲು ವಿಫಲವಾಗಿದೆ. ಇದರ ಬೆನ್ನಲ್ಲೇ ಮುಂದಿನ ವಾರ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನ ಆಯ್ಕೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಅವರಿಗೆ ನಿರೀಕ್ಷೆಯಂತೆ ಟಿ20 ತಂಡದ ನಾಯಕ ಸ್ಥಾನ ಕೈತಪ್ಪಿದೆ. ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆ ಆಗಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಅವರ ಹಳೆಯ ಕಾರಿನ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಧುತ್ತೆಂದು ಮತ್ತೊಮ್ಮೆ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಅವರ ಮೊದಲು ಕಾರೆನ್ನಲಾದ ಆಡಿ ಆರ್8 ವಿ10 (Audi R8 V10) ಮಹಾರಾಷ್ಟ್ರದ ಥಾಣೆ ಪೊಲೀಸ್ ಠಾಣೆಯಲ್ಲಿ ಧೂಳಿಡಿದು ಕೂತಿದೆ. ಅದರ ಚಿತ್ರವೊಂದು ಮತ್ತೆ ಸದ್ದು ಮಾಡುತ್ತಿದೆ.

  ವಿರಾಟ್ ಕೊಹ್ಲಿ ಅವರಿಗೆ ಮೊದಲಿಂದಲೂ ಕಾರುಗಳ ಕ್ರೇಜು. ಅದರಲ್ಲೂ ಲಕ್ಷುರಿ ಕಾರುಗಳ ಅವರ ಬಳಿ ಅನೇಕ ಇವೆ. Audi R8 V10 ಮಾಡೆಲ್​ನ ಆಡಿ ಕಾರು ಅವರ ಮೊದಲ ಸಂಪಾದನೆಯ ಕಾರು. 2012ರಲ್ಲಿ ಇವು ಕೊಂಡ ಕಾರದು. ಅದೀಗ ಕಳೆದ ಮೂರು ವರ್ಷಗಳಿಂದಲೂ ಪೊಲೀಸ್ ಠಾಣೆಯಲ್ಲಿ ಅನಾಥವಾಗಿ ಬಿದ್ದಿದೆ.

  ಪೊಲೀಸ್ ಠಾಣೆಯಲ್ಲಿ ಯಾಕಿದೆ?

  ವಿರಾಟ್ ಕೊಹ್ಲಿ ಹೊಸ ಹೊಸ ಲಕ್ಷುರಿ ಕಾರುಗಳನ್ನ ಕೊಳ್ಳುತ್ತಾ ಹೋದಂತೆ ತಮ್ಮ ಕೆಲ ಹಳೆಯ ಕಾರುಗಳನ್ನ ಮಾರಿದ್ದಾರೆ. 2016ರಲ್ಲೇ ಅವರು Audi 8 V10 ಕಾರನ್ನ ಸಾಗರ್ ಥಕ್ಕರ್ (Sagar Thakkar) ಎಂಬಾತನಿಗೆ 2 ಕೋಟಿ ರೂಪಾಯಿಗೆ ಮಾರಿದ್ದಾರೆ. ಎಲ್ಲಾ ದಾಖಲೆಗಳೂ ಕೊಹ್ಲಿ ಹೆಸರಿನಿಂದ ಸಾಗರ್ ಹೆಸರಿಗೆ ವರ್ಗಾವಣೆ ಆಗಿದೆ. ಈ ಕಾರಿಗೆ ಮಾಜಿ ಮಾಲೀಕ ಎಂಬುದನ್ನ ಬಿಟ್ಟರೆ ಕೊಹ್ಲಿಗೂ ಈ ಕಾರಿಗೂ ಯಾವುದೇ ಸಂಬಂಧ ಉಳಿದಿಲ್ಲ.

  ತಾನು ಕಾರು ಮಾರಿದ್ದು ಒಬ್ಬ ಕ್ರಿಮಿನಲ್​ಗೆ ಎಂಬ ಯಾವ ಅನುಮಾನವೂ ಕೊಹ್ಲಿಗೆ ಬಂದಿರಲಿಲ್ಲ. ಕೊಹ್ಲಿಯ ಕಾರು ಕೊಂಡ ಸಾಗರ್ ಥಕ್ಕರ್ ಕಾಲ್ ಸೆಂಟರ್ ಹಗರಣವೊಂದರಲ್ಲಿ ಸಿಲುಕಿ 2018ರಲ್ಲಿ ಬಂಧಿತನಾಗಿದ್ದ. ಈತನ ತಂಡವು ನಿರ್ದಿಷ್ಟ ವರ್ಗದ ಜನರನ್ನ ಗುರುತಿಸಿ ಅಮೆರಿಕದ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಇದೆ. 2013ರಿಂದಲೂ ಆತ ಈ ಕ್ರಿಮಿನಲ್ ಕೆಲಸ ಮಾಡುತ್ತಾ ಬಂದಿದ್ದ. ಕೆಲ ವರದಿಗಳ ಪ್ರಕಾರ ಆತ ಅಂದಾಜು 300 ಮಿಲಿಯನ್ ಡಾಲರ್ (ಸುಮಾರು 2 ಸಾವಿರ ಕೋಟಿ ರೂಪಾಯಿ) ಹಣದ ಸುಲಿಗೆ ಮಾಡಿದ್ದನೆನ್ನಲಾಗಿದೆ.

  ಇದನ್ನೂ ಓದಿ: Elon Musk- ಅದೊಂದು ತಪ್ಪಿಂದ ಎರಡೇ ದಿನದಲ್ಲಿ 3.7 ಲಕ್ಷ ಕೋಟಿ ಕಳೆದುಕೊಂಡ ರಾಕೆಟ್ ಮ್ಯಾನ್ ಮಸ್ಕ್

  ಸಾಗರ್ ಥಕ್ಕರ್ 2018ರಲ್ಲಿ ಬಂಧಿತನಾದ ಬಳಿಕ ಅಹ್ಮದಾಬಾದ್​ನಲ್ಲಿದ್ದ ಈ ಕಾರನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. ಮುಂಬೈನ ಥಾಣೆ ನಗರದ ಬಳಿ ಈ ಕಾರು ಮೂರು ವರ್ಷಗಳಿಂದಲೂ ಅನಾಥವಾಗಿ ಬಿದ್ದಿದೆ. ಆದರೆ, ಕೊಹ್ಲಿಗೆ ತಾನು ಕಾರು ಮಾರಿದ್ದು ಒಬ್ಬ ಅಪರಾಧಿಗೆ ಎಂಬ ವಿಚಾರ ಗೊತ್ತಿರಲಿಲ್ಲ ಎಂಬುದನ್ನು ಪೊಲೀಸರೂ ಖಚಿಪಡಿಸಿದ್ದಾರೆ.

  2019ರಲ್ಲಿ ಈ ಕಾರಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ:

  ವ್ಯಕ್ತಿಯೊಬ್ಬರು ಈ ಕಾರಿನ ಫೋಟೋಗಳನ್ನ ತೆಗೆದು 2019ರಲ್ಲಿ ಫೇಸ್​ಬುಕ್​ನಲ್ಲಿ ಹಾಕಿದ್ದರು. ವಿರಾಟ್ ಕೊಹ್ಲಿಯಿಂದ ಈ ಕಾರನ್ನು ಕೊಂಡಾತ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾನೆ. ಆಗ ಈ ಕಾರನ್ನು ಪೊಲೀಸರು ಜಫ್ತಿ ಮಾಡಿದ್ದಾರೆ. ಒಂದು ವರ್ಷದಿಂದ ಇದು ಪೊಲೀಸ್ ಮೈದಾನದಲ್ಲಿ ಅನಾಥವಾಗಿ ನಿಂತಿದೆ ಎಂದು ಇವರು ಬರೆದಿದ್ದರು.

  ಇದನ್ನೂ ಓದಿ: Office Hours: ಕೆಲಸದ ಅವಧಿ ನಂತರ ಉದ್ಯೋಗಿಗಳಿಗೆ ಮೆಸೇಜ್ ಕಳಿಸೋದು ಸರಿ ಅಲ್ಲ; ಹೀಗೊಂದು ಹೊಸ ಕಾನೂನು

  ಅದಾದ ಬಳಿಕ 2020ರಲ್ಲಿ ಈ ಕಾರು ಬೇರೆಯೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಈಗ ಮತ್ತೊಮ್ಮೆ ಇದು ಸದ್ದು ಮಾಡುತ್ತಿದೆ.

  ಕೊಹ್ಲಿ ಬಳಿ ಇರವ ಲಕ್ಷುರಿ ಕಾರುಗಳು ಅನೇಕ:

  ವಿರಾಟ್ ಕೊಹ್ಲಿ ಅವರಿಗೆ ಆಡಿ (Audi) ಕಾರುಗಳೆಂದರೆ ಸ್ವಲ್ಪ ಹೆಚ್ಚು ಮೋಹ. ಆಡಿಯ ಅನೇಕ ಮಾಡೆಲ್ ಕಾರುಗಳು ಕೊಹ್ಲಿ ಬಳಿ ಇವೆ. ಬೆಂಟ್ಲೀ (Bentley), ರೇಂಜ್ ರೋವರ್ (Range Rover) ಮೊದಲಾದ ಕಾರುಗಳಿಗೂ ಕೊಹ್ಲಿ ಒಡೆಯರಾಗಿದ್ದಾರೆ.
  Published by:Vijayasarthy SN
  First published: