Virat Kohli- ವಿರಾಟ್ ಕೊಹ್ಲಿ ರಿಟೈರ್ ಆಗ್ತಾರೆ ನೋಡ್ತಾ ಇರಿ: ಮಾಜಿ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

T20 Cricket- ಟಿ20 ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಅವರು ಶೀಘ್ರದಲ್ಲೇ ನಿವೃತ್ತರೂ ಆಗಬಹುದು. ಬರೀ ಐಪಿಎಲ್ ಟೂರ್ನಿಗಳಲ್ಲಿ ಮಾತ್ರ ಅವರು ಆಡಬಹುದು ಅನಿಸುತ್ತದೆ ಎಂದು ಮಾಜಿ ಪಾಕಿಸ್ತಾನ್ ಸ್ಪಿನ್ನರ್ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ದುಬೈ, ನ. 11: ಭಾರತೀಯ ಕ್ರಿಕೆಟ್​ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲ ವಿದ್ಯಮಾನಗಳು ಬಹಳ ಕೌತುಕ ಮೂಡಿಸಿವೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್ ಅವರನ್ನ ಆಡಿಸದೇ ಹೋಗಿದ್ದು, ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡದೇ ಹೋಗಿದ್ದು, ಟಿ20 ವಿಶ್ವಕಪ್​ಗೆ ಅಶ್ವಿನ್ ಆಯ್ಕೆ ಆಗಿದ್ದು, ಐಪಿಎಲ್ ಎರಡನೇ ಲೆಗ್ ಪಂದ್ಯಗಳು ಶರುವಾಗುವ ಮುನ್ನವೇ ವಿರಾಟ್ ಕೊಹ್ಲಿ ಟಿ20 ತಂಡದ ಕ್ಯಾಪ್ಟನ್ಸಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು ಇವೆಲ್ಲವೂ ಕುತೂಹಲಕಾರಿ ಎನಿಸಿವೆ (Interesting developments in Inidan Cricket recent days). ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವಕ್ಕಷ್ಟೇ ಅಲ್ಲ ಆರ್​ಸಿಬಿ ತಂಡದ ನಾಯಕ ಸ್ಥಾನದಿಂದ ಇಳಿಯುವುದಾಗಿ ಹೇಳಿದರು.

  ಈ ಬೆಳವಣಿಗೆ ಬಗ್ಗೆ ಪಾಕಿಸ್ತಾನದ ಮಾಜಿ ಬೌಲರ್ ಮುಷ್ತಾಕ್ ಅಹ್ಮದ್ (Former Pakistan cricketer Mushtaq Ahmed) ಪ್ರತಿಕ್ರಿಯಿಸಿದ್ಧಾರೆ. ಟಿ20 ತಂಡದ ನಾಯಕ ಸ್ಥಾನದಿಂದ ಕೊಹ್ಲಿ ಕೆಳಗಿಳಿದಿರುವುದನ್ನು ನೋಡಿದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಏನೋ ಯಡವಟ್ಟು ಆಗಿದೆ ಎನಿಸುತ್ತದೆ ಎಂದು ಮುಷ್ತಾಕ್ ಅಹ್ಮದ್ ಅನುಮಾನ ವ್ಯಕ್ತಪಡಿಸಿದ್ದಾರೆ.

  ಭಾರತ ತಂಡದಲ್ಲಿ ಎರಡು ಗುಂಪುಗಳಿವೆ:

  ಪಾಕಿಸ್ತಾನದ ಜಿಯೋ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮುಷ್ತಾಕ್ ಅಹ್ಮದ್, ತನಗೆ ಟೀಮ್ ಇಂಡಿಯಾದಲ್ಲಿ ಈಗ ಎರಡು ಗುಂಪುಗಳು ಕಣ್ಣಿಗೆ ಕಾಣಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಒಬ್ಬ ಯಶಸ್ವಿ ನಾಯಕನಾದವನು ಕ್ಯಾಪ್ಟನ್ಸಿ ಬಿಡಲು ಮುಂದಾಗುತ್ತಾನೆ ಎಂದರೆ ತಂಡದಲ್ಲಿ ಏನೋ ಸರಿ ಇದ್ದಂತಿಲ್ಲ ಅನಿಸುತ್ತದೆ. ಭಾರತೀಯ ಡ್ರೆಸಿಂಗ್ ರೂಮ್​ನಲ್ಲಿ ನನಗೆ ಈಗ ಮುಂಬೈ ಮತ್ತು ಡೆಲ್ಲಿ ಗುಂಪುಗಳು ಕಾಣುತ್ತಿವೆ” ಎಂದು ಅವರು ಹೇಳಿದ್ದಾರೆ.

  ರೋಹಿತ್ ಶರ್ಮಾ ಮುಂಬೈನವರಾದರೆ, ವಿರಾಟ್ ಕೊಹ್ಲಿ ದೆಹಲಿಯ ಕ್ರಿಕೆಟಿಗರಾಗಿದ್ದಾರೆ. ಇವರಿಬ್ಬರ ಮಧ್ಯೆ ಹೊಂದಾಣಿಕೆಯ ಕೊರತೆ ಇದೆ ಎಂದು ಇನ್ನೂ ಕೆಲ ಮಾಜಿ ಕ್ರಿಕೆಟಿಗರು ಹೇಳಿದ್ದುಂಟು.

  ಇದನ್ನೂ ಓದಿ: Robin Uthappa birthday- ರಾಬಿನ್ ಉತ್ತಪ್ಪಗೆ ವಾಕಿಂಗ್ ಅಸಾಸಿನ್ ಹೆಸರು ಯಾಕೆ? ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು

  ಕೊಹ್ಲಿ ಟಿ20 ಕ್ರಿಕೆಟ್​ನಿಂದ ನಿವೃತ್ತರಾಗ್ತಾರೆ:

  ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆ ಇದೆ ಎಂದು ಮುಷ್ತಾಕ್ ಶಂಕೆ ವ್ಯಕ್ತಪಡಿಸಿದ್ದಾರೆ.

  “ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಆಟದಿಂದ ವಿರಾಟ್ ಕೊಹ್ಲಿ ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ ಅಂತ ಅನಿಸುತ್ತಿದೆ. ಈ ಮಾದರಿಯ ಕ್ರಿಕೆಟ್​ನಲ್ಲಿ ಅವರು ಸಾಕಷ್ಟು ಆಡಿ ತೃಪ್ತರಾಗಿದ್ಧಾರೆ. ಅವರು ಐಪಿಎಲ್​ನಲ್ಲಿ ಆಡುವುದನ್ನು ಮುಂದುವರಿಸಬಹುದು” ಎಂದು ಅವರು ಜಿಯೋ ನ್ಯೂಸ್ ಚಾನಲ್​ಗೆ ತಿಳಿಸಿದ್ದಾರೆ.

  ಐಪಿಎಲ್​ನಿಂದ ಟೀಮ್ ಇಂಡಿಯಾಗೆ ಪೆಟ್ಟು:

  “ಭಾರತ ಈ ಟಿ20 ವಿಶ್ವಕಪ್​ನಲ್ಲಿ ಸೋಲಲು ಐಪಿಎಲ್ ಕಾರಣ ಎನಿಸುತ್ತದೆ. ವಿಶ್ವಕಪ್​ಗೆ ಮುನ್ನ ಬಹಳ ಕಾಲ ಆ ತಂಡದ ಆಟಗಾರರು ಬಯೋ ಬಬಲ್​ನಲ್ಲಿ ಇದ್ದರಿಂದ ಮಾನಸಿಕವಾಗಿ ಕುಗ್ಗಿದ್ದರು, ಬಳಲಿದ್ದರು ಎಂಬುದು ನನ್ನ ಭಾವನೆ” ಎಂದು ಮುಷ್ತಾಕ್ ಅಹ್ಮದ್ ಹೇಳಿದ್ಧಾರೆ.

  ಐಪಿಎಲ್ ಬಗ್ಗೆ ಮಿಶ್ರ ಪ್ರತಿಕ್ರಿಯೆ:

  ವಿಶ್ವಕಪ್​ಗೆ ಮುನ್ನ ಐಪಿಎಲ್ ಆಡಿಸಿದ ಬಗ್ಗೆ ಮಿಶ್ರ ಅಭಿಪ್ರಾಯಗಳು ಇವೆ. ವಿಶ್ವಕಪ್​ಗೆ ಮುನ್ನ ಐಪಿಎಲ್ ಆಡಿದ್ದರಿಂದ ಯುಎಇಯ ಪಿಚ್​ಗಳ ಅನುಭವ ಚೆನ್ನಾಗಿ ಆಯಿತು. ಟಿ20 ಪಂದ್ಯಗಳ ಅಭ್ಯಾಸವೂ ಆಯಿತು ಎಂದು ಹಲವರು ಹೇಳಿದ್ಧಾರೆ.

  ಇದನ್ನೂ ಓದಿ: India Pak Cricket Love Stories- ಭಾರತದ ಹುಡುಗಿಯರನ್ನ ಪ್ರೀತಿಸಿ ವಿವಾಹವಾದ ಪಾಕಿಸ್ತಾನದ ಕ್ರಿಕೆಟಿಗರು

  ಆದರೆ, ಬಿಡುವಿಲ್ಲದ ಕ್ರಿಕೆಟ್​ನಿಂದ ಕ್ರಿಕೆಟಿಗರು ಉತ್ಸಾಹ ಕಳೆದುಕೊಳ್ಳುತ್ತಾರೆ. ಐಪಿಎಲ್​ಗೂ ವಿಶ್ವಕಪ್​ಗೂ ಮಧ್ಯೆ ಅಂತರ ತೀರಾ ಕಡಿಮೆ ಆಯಿತು. ಆಟಗಾರರಿಗೆ ಅಗತ್ಯ ವಿಶ್ರಾಂತಿ ಸಿಗಬೇಕಿತ್ತು ಎಂಬುದು ಇನ್ನೂ ಹಲವರ ಅನಿಸಿಕೆ. ಮುಷ್ತಾಕ್ ಅಹ್ಮದ್ ಅವರು ಈ ಎರಡನೇ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

  ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ಮತ್ತು ನ್ಯೂಜಿಲೆಂಡ್ ವಿರುದ್ಧ ತನ್ನ ಮೊದಲೆರಡು ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿತು. ಆ ನಂತರ ಮೂರು ಪಂದ್ಯಗಳನ್ನ ಗೆದ್ದರೂ ಭಾರತಕ್ಕೆ ಸೆಮಿಫೈನಲ್ ಅವಕಾಶ ಸಿಗಲಿಲ್ಲ. ಭಾರತ ಇದ್ದ ಗುಂಪಿನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿದವು. ನ್ಯೂಜಿಲೆಂಡ್ ನಿನ್ನೆ ಸೆಮಿಫೈನಲ್​ನಲ್ಲಿ ಇಂಗ್ಲೆಂಡನ್ನು ಸೋಲಿಸಿ ಫೈನಲ್​ಗೆ ಏರಿತು. ಇಂದು ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ಮಧ್ಯೆ ಎರಡನೇ ಸೆಮಿಫೈನಲ್ ಇದೆ.
  Published by:Vijayasarthy SN
  First published: