ಏಕದಿನದಲ್ಲಿ ಕೊಹ್ಲಿ ಒಟ್ಟು ಎಷ್ಟು ಶತಕ ಸಿಡಿಸಬಹುದು?; ಮಾಜಿ ಆಟಗಾರ ಕೊಟ್ಟ ಉತ್ತರ ನೀವೆ ಕೇಳಿ

ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಬಾರಿಸಿದ ಪೈಕಿ 49 ಸೆಂಚುರಿಯೊಂದಿಗೆ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, 42ನೇ ಶತಕದೊಂದಿಗೆ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ

ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ

  • News18
  • Last Updated :
  • Share this:
ಬೆಂಗಳೂರು (ಆ. 13): ಕ್ರಿಕೆಟ್​​ನಲ್ಲಿ ಸದಾ ಒಂದಲ್ಲಾಒಂದು ನೂತನ ದಾಖಲೆ ಸೃಷ್ಟಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 42ನೇ ಶತಕ ಸಿಡಿಸಿ ಮಿಂಚಿದರು.

ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಇದೇರೀತಿ ಬ್ಯಾಟ್ ಬೀಸಿದರೆ ಏಕದಿನ ಕ್ರಿಕೆಟ್​ನಲ್ಲೇ 75 ರಿಂದ 80 ಶತಕ ಬಾರಿಸುತ್ತಾರೆ ಎಂದು ಭಾರತದ ಮಾಜಿ ಆಟಗಾರ ವಾಸಿಂ ಜಾಫರ್ ಭವಿಷ್ಯ ನುಡಿದಿದ್ದಾರೆ.

Virat Kohli will score 75-80 ODI centuries, predicts former India opener
ವಿರಾಟ್ ಕೊಹ್ಲಿ


ವೆಸ್ಟ್​ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯ ಮುಗಿದ ಬಳಿಕ ಟ್ವೀಟ್ ಮಾಡಿರುವ ಜಾಫರ್, ‘11 ಇನ್ನಿಂಗ್ಸ್‌ಗಳ ಬಳಿಕ ಭಾರತಕ್ಕೆ ಕೊಹ್ಲಿ ಸೇವೆ ಸಹಜ ಸ್ಥಿತಿಗೆ ಮರಳಿದೆ. ಅರ್ಥಾತ್‌ ಕೊಹ್ಲಿ ಇನ್ನೊಂದು ಶತಕ ಬಾರಿಸಿದ್ದಾರೆ. ನನ್ನ ಪ್ರಕಾರ ಅವರು 75-80 ಶತಕ ಸಿಡಿಸುತ್ತಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

​ಜೋನ್ಸ್​ ಕನಸಿನ ಟಿ-20 ತಂಡದಲ್ಲಿ ಧೋನಿಯ ಜೊತೆ ಮೃತ ಆಟಗಾರ ಕೂಡ ಇದ್ದಾರೆ!

 ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಬಾರಿಸಿದ ಪೈಕಿ 49 ಸೆಂಚುರಿಯೊಂದಿಗೆ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, 42ನೇ ಶತಕದೊಂದಿಗೆ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಸಚಿನ್ ದಾಖಲೆ ಮುರಿಯಲು ಕೊಹ್ಲಿಗಿನ್ನು 8 ಶತಕಗಳಷ್ಟೆ ಬಾಕಿಉಳಿದಿದೆ.

ಕೊಹ್ಲಿ ಈಗಾಗಲೇ ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 11366 ರನ್ ಕಲೆಹಾಕುವ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ. ಗಂಗೂಲಿ ಏಕದಿನ ಕ್ರಿಕೆಟ್​ನಲ್ಲಿ 11363 ರನ್ ಬಾರಿಸಿದ್ದರು. ಸದ್ಯ ಕೊಹ್ಲಿ ಈ ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ.

First published: