ಬೆಂಗಳೂರು (ನ. 26): ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸಲ್ಲಿದ್ದು ಟೆಸ್ಟ್ ಸರಣಿ ಆಡುತ್ತಿದೆ. ಈಗಾಗಲೇ ಮೊದಲ ಟೆಸ್ಟ್ ಅಂತ್ಯಕಂಡಿದ್ದು, ಆಸೀಸ್ ಪಡೆ ಇನ್ನಿಂಗ್ಸ್ ಹಾಗೂ 5 ರನ್ಗಳಿಂದ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.
ಇತ್ತ ಪಾಕಿಸ್ತಾನ ತಂಡ ಕಾಂಗರೂ ನೆಲದಲ್ಲಿ ತನ್ನ ಸೋಲಿನ ಹಣೆಪಟ್ಟಿಯನ್ನು ಕಳಚಿ ಹಾಕುವಲ್ಲಿ ಮತ್ತೆ ವಿಫಲವಾಗಿದೆ. ಪಾಕ್ ತಂಡ ಆಸ್ಟ್ರೇಲಿಯಾದಲ್ಲಿ ಆಸೀಸ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಗೆದ್ದಿದ್ದು 1995-96 ರಲ್ಲಿ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಸೋತು ಒಂದು ಪಂದ್ಯವನ್ನು ಪಾಕಿಸ್ತಾನ ಆಗ ಗೆದ್ದಿತ್ತು.
ಎರಡು ಪಂದ್ಯದಲ್ಲಿ ಫೇಲ್ ಆದರೆ ನಾನು ಆ ತಂಡಕ್ಕೆ ಬೇಡ; ವಿದಾಯದ ವೇಳೆ ಗೇಲ್ ಭಾವುಕ!
ಕುತೂಹಲಕಾರಿ ಅಂಶವೆಂದರೆ ಸುಮಾರು 24 ವರ್ಷಗಳಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಟೆಸ್ಟ್ ಗೆದ್ದಿಲ್ಲ. ಕೊನೆಯ ಟೆಸ್ಟ್ ಗೆದ್ದಾಗ ಈಗಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಆಗಿನ್ನು ಕೇವಲ 7 ವರ್ಷ ವಯಸ್ಸಾಗಿತ್ತಷ್ಟೆ.
ಇಷ್ಟೇ ಅಲ್ಲದೆ ಪಾಕಿಸ್ತಾನ ತಂಡದ ಟಿ-20 ನಾಯಕ ಬಾಬರ್ ಅಜಂ ಹುಟ್ಟಿ ಕೇವಲ 1 ವರ್ಷ ಆಗಿತ್ತಷ್ಟೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೇವಲ 5695 ರನ್ ಕಲೆಹಾಕಿದ್ದರು. 12 ಶತಕ ಬಾರಿಸಿದ್ದರಷ್ಟೆ. ಸೌರಾವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ಗೆ ಪದಾಪರ್ಣೆ ಮಾಡಿರಲಿಲ್ಲ. ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕೇವಲ 78 ವಿಕೆಟ್ ಪಡೆದಿದ್ದರಷ್ಟೆ.
ಬಾಡಿಗೆ ಬೇಡ ಎಂದ ಭಾರತೀಯ ಕ್ಯಾಬ್ ಚಾಲಕನಿಗೆ ಪಾಕ್ ಆಟಗಾರರಿಂದ ಡಿನ್ನರ್ ಪಾರ್ಟಿ!
ಈ ವಿಚಾರ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಪಾಕಿಸ್ತಾನಕ್ಕೆ ಆಸೀಸ್ ನೆಲದಲ್ಲಿ ಇನ್ನೊಂದು ಟೆಸ್ಟ್ ಬಾಕಿಯಿದ್ದು ನ. 29 ರಂದು ಆರಂಭವಾಗಲಿದೆ. ಇದರಲ್ಲಿ ಗೆದ್ದು ತನ್ನ ಹಳೆಯ ಕೆಟ್ಟ ದಾಖಲೆಯನ್ನು ಅಳಿಸಿ ಹಾಕುತ್ತ ಎಂಬುದು ಕಾದುನೋಡಬೇಕಿದೆ.
ಮೊನ್ನೆಯಷ್ಟೆ ಅಂತ್ಯಕಂಡ ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 5 ರನ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಅಸದ್ ಶಾಫಿಕ್ರ 76 ರನ್ಗಳ ಸಹಾಯದಿಂದ 240 ರನ್ಗೆ ಆಲೌಟ್ ಆಯಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ ಮಾರ್ಕಸ್ ಲಬುಸ್ಚಗ್ನೆ ಅವರ 185 ಹಾಗೂ ಡೇವಿಡ್ ವಾರ್ನರ್ರ 154 ರನ್ಗಳ ನೆರವಿನಿಂದ 580 ರನ್ ಬಾರಿಸಿತು.
2ನೇ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ ಹೋರಾಟ ನಡೆಸಿತಾದರು ಯಶಸ್ಸು ಸಿಗಲಿಲ್ಲ. ಬಾಬರ್ ಅಜಂ 104 ಹಾಗೂ ಮೊಹಮ್ಮದ್ ರಿಜ್ವಾನ್ 95 ರನ್ ಗಳಿಸಿದರು. ಡ್ರಾ ಮಾಡುವಲ್ಲೂ ವಿಫಲವಾದ ಪಾಕಿಸ್ತಾನ 335 ರನ್ಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ಜಯ ಸಾಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ