Video Viral: ತನ್ನ ತಂಡದ ಬೌಲರ್‌ಗಳನ್ನು ಪ್ರೋತ್ಸಾಹಿಸಲು ವಿರಾಟ್ ಕೊಹ್ಲಿ ಏನು ಮಾಡಿದ್ದಾರೆ ಗೊತ್ತೇ..? ನೀವೇ ನೋಡಿ

Virat Kohli: ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ನಾಯಕನಾಗಿರುವ ವಿರಾಟ್ ಕೊಹ್ಲಿ ತಮ್ಮ ತಂಡದ ವೇಗದ ಬೌಲರ್‌ಗಳು ಬೌಲ್ ಮಾಡುವಾಗ ಅವರನ್ನು ಪ್ರೋತ್ಸಾಹಿಸಲು ಲಯಬದ್ಧವಾಗಿ ಚಪ್ಪಾಳೆ ತಟ್ಟುವಂತೆ ಮೈದಾನದಲ್ಲಿರುವ ಸಹ ಆಟಗಾರರಿಗೆ ಮತ್ತು ಡಗ್‌ಔಟ್‌ನಲ್ಲಿರುವ ತಮ್ಮ ತಂಡದ ಇನ್ನಿತರೆ ಆಟಗಾರರಿಗೆ ಹೇಳಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಕ್ರಿಕೆಟ್(Cricket) ಆಟದ ಅಭಿಮಾನಿ ನೀವಾಗಿದ್ದರೆ, ಆಟದ ಪ್ರತಿಯೊಂದು ಕ್ಷಣವನ್ನು ನೀವು ತುಂಬಾನೇ ಆನಂದಿಸುತ್ತೀರಿ. ಕಳೆದ 2 ವರ್ಷಗಳಿಂದ(2 Years) ಈ ಕೋವಿಡ್-19(Covid) ಸಾಂಕ್ರಾಮಿಕ ರೋಗದಿಂದ ಕ್ರಿಕೆಟ್ ಆಟ ನಡೆಯುವಾಗ ಆಟದ ಮೈದಾನದಲ್ಲಿ(Play Ground) ಆ ಪ್ರೇಕ್ಷಕರು ಕೊರತೆ ಆಟಗಾರರಿಗೆ(Players) ಮತ್ತು ಟಿವಿಯ(TV) ಮುಂದೆ ಕುಳಿತು ನೋಡುವವರಿಗೆ ತುಂಬಾನೇ ಕಾಡಿರುತ್ತದೆ.ಏಕೆಂದರೆ ಯಾವುದೇ ಕ್ರೀಡೆಗೆ(Game) ರೋಚಕತೆ ಬರುವುದೇ ಈ ಪ್ರೇಕ್ಷಕರ ಚಪ್ಪಾಳೆಯಿಂದ, ಕೂಗುಗಳಿಂದ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ತಮ್ಮ ನೆಚ್ಚಿನ ಆಟಗಾರರನ್ನು ಹುರಿದುಂಬಿಸಲು ಪ್ರೇಕ್ಷಕರು ನಾನಾ ತರಹದ ವೇಷಗಳನ್ನು ಹಾಕಿಕೊಂಡು ಆಟದ ಮೈದಾನದಲ್ಲಿ ಮಜಾ ಮಾಡಿಕೊಂಡು ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿರುತ್ತಾರೆ.

ಕ್ರಿಕೆಟ್ ಆಟದ ರೋಚಕತೆಯನ್ನು ದ್ವಿಗುಣಗೊಳಿಸುವುದೇ ಈ ಪ್ರೇಕ್ಷಕರು ಎಂದರೆ ತಪ್ಪಾಗುವುದಿಲ್ಲ. ಆಟಗಾರರಿಗೂ ಸಹ ಪ್ರೇಕ್ಷಕರು ಚಪ್ಪಾಳೆ ಬೇಕೆ ಬೇಕು. ಭಾರತೀಯ ಕ್ರಿಕೆಟ್ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಬೌಲರ್‌ರನ್ನು ಪ್ರೋತ್ಸಾಹಿಸಲು ಏನು ಮಾಡಿದ್ದಾರೆ ನೀವೇ ನೋಡಿ..

ಇದನ್ನೂ ಓದಿ: ಶ್ರೀಲಂಕಾ ಅಥವಾ ಸೌತ್ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಯೋಜನೆ

ದಕ್ಷಿಣಾ ಆಫ್ರಿಕಾ 3ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಮಾಡಿದ್ದೇನು ಗೊತ್ತಾ..?

ದಕ್ಷಿಣ ಆಫ್ರಿಕಾದಲ್ಲಿನ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನ ಒಂದು ಅದ್ಭುತವಾದ ಘಟನೆಯೊಂದು ನಡೆಯಿತು. ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ನಾಯಕನಾಗಿರುವ ವಿರಾಟ್ ಕೊಹ್ಲಿ ತಮ್ಮ ತಂಡದ ವೇಗದ ಬೌಲರ್‌ಗಳು ಬೌಲ್ ಮಾಡುವಾಗ ಅವರನ್ನು ಪ್ರೋತ್ಸಾಹಿಸಲು ಲಯಬದ್ಧವಾಗಿ ಚಪ್ಪಾಳೆ ತಟ್ಟುವಂತೆ ಮೈದಾನದಲ್ಲಿರುವ ಸಹ ಆಟಗಾರರಿಗೆ ಮತ್ತು ಡಗ್‌ಔಟ್‌ನಲ್ಲಿರುವ ತಮ್ಮ ತಂಡದ ಇನ್ನಿತರೆ ಆಟಗಾರರಿಗೆ ಹೇಳಿದ್ದಾರೆ.

ಸಾಮಾನ್ಯವಾಗಿ ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಮತ್ತು ಭಾರತದ ಕೆಲವು ಸಂದರ್ಭಗಳಲ್ಲಿ ಟೆಸ್ಟ್ ಪಂದ್ಯಗಳ ಸಮಯದಲ್ಲಿ, ಸ್ಟೇಡಿಯಂನಲ್ಲಿರುವ ಪ್ರೇಕ್ಷಕರು ಯಾವುದೇ ತಂಡದ ಬೌಲರ್ ಆದರೂ ಸರಿ ಅವರ ರನ್-ಅಪ್‌ನೊಂದಿಗೆ ತಮ್ಮ ಚಪ್ಪಾಳೆಯನ್ನು ಲಯಬದ್ದವಾಗಿ ಹೊಂದಿಸುವಂತೆ ತಟ್ಟುವುದನ್ನು ನಾವು ನೋಡಿರುತ್ತೇವೆ. ಕೋವಿಡ್-19 ನಿರ್ಬಂಧನೆಯಿಂದ ಬಹುತೇಕವಾಗಿ ಎಲ್ಲಾ ಕ್ರೀಡೆಗಳಲ್ಲಿ ಈ ಪ್ರೇಕ್ಷಕರ ಅನುಪಸ್ಥಿತಿಯು ಎದ್ದು ಕಾಣುತ್ತಿದೆ.

ಚಪ್ಪಾಳೆ ತಟ್ಟುವಂತೆ ಆಟಗಾರರಿಗೆ ವಿರಾಟ್ ಕೊಹ್ಲಿ ಸೂಚನೆ

ಇಲ್ಲಿ ವಿರಾಟ್ ತಮ್ಮ ತಂಡದ ಬೌಲರ್‌ಗಳನ್ನು ಪ್ರೋತ್ಸಾಹಿಸಲು ಪ್ರೇಕ್ಷಕರು ಇಲ್ಲದೆ ಹೋದರೂ ಸಹ ಅಂತಹದ್ದೇ ಒಂದು ರೋಚಕತೆ ತರಲು ಪ್ರಯತ್ನಿಸಿದ್ದಾರೆ ಎಂದು ಹೇಳಬಹುದು. ಅವರು ಮೈದಾನದಿಂದ "ತಾಲಿ ಮಾರ್ತೆ ರಹೋ" ಎಂದು ಹಿಂದಿಯಲ್ಲಿ ಹೇಳಿದರು. ಅಂದರೆ ಚಪ್ಪಾಳೆ ತಟ್ಟುತ್ತಲೇ ಇರಿ ಎಂದರ್ಥ. ವಿರಾಟ್ ಹೇಳಿದಂತೆ ಡಗ್‌ಔಟ್‌ನಲ್ಲಿರುವ ತಮ್ಮ ತಂಡದ ಇನ್ನಿತರೆ ಆಟಗಾರರಾದ ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಮತ್ತು ವೃದ್ಧಿಮಾನ್ ಸಹಾ ಅವರು ಚಪ್ಪಾಳೆ ತಟ್ಟಿದರು.



ಈ ವಿಡಿಯೋದಲ್ಲಿ ವಿರಾಟ್ ಸಹ ಆಟಗಾರರಿಗೆ ಚಪ್ಪಾಳೆ ತಟ್ಟುತ್ತಾ ಇರಿ ಅಂತ ಹೇಳಿರುವುದನ್ನು ಮತ್ತು ಡಗ್‌ಔಟ್‌ನಲ್ಲಿ ಕುಳಿತಿರುವ ತಂಡದ ಇನ್ನಿತರೆ ಆಟಗಾರರು ಲಯಬದ್ಧವಾಗಿ ಚಪ್ಪಾಳೆ ತಟ್ಟುತ್ತಿರುವುದನ್ನು ನೋಡಬಹುದಾಗಿದೆ. ಈ ಘಟನೆಯ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ವಿರಾಟ್ ಅವರ ಈ ಕೆಲಸವನ್ನು ತುಂಬಾನೇ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಟ್ವೀಟಿಗರಿಗೆ 8 ಲಕ್ಷ ರೂ. ಕೊಡಬೇಕಂತೆ ಈ ಕೊಹ್ಲಿ ಅಭಿಮಾನಿ..! ಯಾಕೆ ಗೊತ್ತಾ..?

ಆಟದ ಮೈದಾನದಲ್ಲಿ ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್ ಮತ್ತು ಕೆ. ಎಲ್. ರಾಹುಲ್ ಇತರ ಆಟಗಾರರೊಂದಿಗೆ ಪ್ರತಿ ಚೆಂಡಿನ ನಂತರ ಚಪ್ಪಾಳೆ ತಟ್ಟಿದರೆ, ಬೆಂಚ್ ಮೇಲೆ ಕುಳಿತಿರುವ ಆಟಗಾರರು ಬೌಲರ್ ರನ್-ಅಪ್ ತೆಗೆದುಕೊಳ್ಳುವಾಗ ಲಯಬದ್ಧವಾಗಿ ಚಪ್ಪಾಳೆ ತಟ್ಟುವುದನ್ನು ಮುಂದುವರಿಸಿದರು.

ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಆಲೌಟ್ ಮಾಡಿತು, ಇದರೊಂದಿಗೆ ಭಾರತ ತಂಡವು 13 ರನ್ ಗಳ ಲೀಡ್ ಪಡೆಯಿತು ಮತ್ತು 2ನೇ ದಿನದ ಆಟ ಮುಗಿದಾಗ ಭಾರತ ತಂಡವು ಒಟ್ಟು 70 ರನ್‌ಗಳ ಮುನ್ನಡೆ ಪಡೆದಿತ್ತು.
Published by:ranjumbkgowda1 ranjumbkgowda1
First published: