Virat Kohli: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ದೂರು ದಾಖಲು!

ದೂರಿನಲ್ಲಿ ಹೇಳಿರುವಂತೆ ವಿರಾಟ್‌ ಕೊಹ್ಲಿ ಎರಡು ಹುದ್ದೆಯನ್ನು ಹೊಂದಿದ್ದಾರೆ. ಒಂದು ಟೀಂ ಇಂಡಿಯಾ ಆಟಗಾರನಾಗಿ ನಾಯಕತ್ವ ಪಡೆದಿರುವುದು ಮತ್ತೊಂದು ಆಟಗಾರರ ಜೊತೆಗಿನ ಒಪ್ಪಂದಗಳನ್ನು ನಿಭಾಯಿಸುವ ಕ್ರೀಡಾ ಮಾರ್ಕೆಟಿಂಗ್‌ ಸಂಸ್ಥೆಯೊಂದರ ನಿರ್ದೇಶಕನ ಹುದ್ದೆ ಅಲಂಕರಿಸಿರುವುದು.

news18-kannada
Updated:July 6, 2020, 9:05 AM IST
Virat Kohli: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ದೂರು ದಾಖಲು!
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ.
  • Share this:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸದ್ಯ ಸ್ವಹಿತಾಸಕ್ತಿ ಸಂಘರ್ಷದ ಸಂಕಷ್ಟ ಎದುರಾಗಿದೆ.  ಕಳೆದ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಮಾಜಿ ದಿಗ್ಗಜ ಆಟಗಾರಾದ ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌ ಮತ್ತು ವಿವಿಎಸ್‌ ಲಕ್ಷ್ಮಣ್‌ ಎಲ್ಲರೂ ಬಿಸಿಸಿಐ ತಂದಿರುವ ಹೊಸ ನಿಯಮಗಳ ಅನ್ವಯ ಹಿತಾಸಕ್ತಿ ಸಂಘರ್ಟದ ಆರೋಪ ಎದುರಿಸಿದ್ದರು. ಇದೀಗ ಕೊರೋನಾ ಹಾವಳಿಯಿಂದ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ನಡುವೆ ಕೊಹ್ಲಿ ವಿರುದ್ಧವೂ ಆರೋಪ ಕೇಳಿಬಂದಿದೆ.

ಬಿಸಿಸಿಐ ನಿಯಮ 38 (4) ರ ಅಡಿಯಲ್ಲಿ ಹಿತಾಸಕ್ತಿ ಸಂಘರ್ಷ ಷರತ್ತನ್ನು ಉಲ್ಲಂಘಿಸಿರುವ ಆರೋಪ ಕೊಹ್ಲಿ ವಿರುದ್ಧ ಕೇಳಿಬಂದಿದಿದ್ದು, ಮಧ್ಯಪ್ರದೇಶ ಕ್ರಿಕೆಟ್‌ ಮಂಡಳಿಯ ಸದಸ್ಯ ಸಂಜೀವ್‌ ಗುಪ್ತಾ ವಿರಾಟ್‌ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ್ದಾರೆ. ಕೊಹ್ಲಿ ಏಕಕಾಲದಲ್ಲಿ ಎರಡು ಹುದ್ದೆ ನಿಭಾಯಿಸುತ್ತಿದ್ದಾರೆ ಎನ್ನುವುದು ಅವರ ಆರೋಪ.

ಕ್ರಿಕೆಟ್‌ನಲ್ಲಿ ಒಮ್ಮೆಯೂ ನೋ-ಬಾಲ್‌ ಎಸೆಯದ ಐವರು ಬೌಲರ್‌ಗಳು..!

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಂವಿಧಾನವನ್ನು ಪುನರ್​ ನಿರ್ಮಾಣ ಮಾಡುವಾಗ ಲೋಧಾ ಸಮಿತಿ ಜಂಟಲ್​ಮ್ಯಾನ್​ ಆಟದಲ್ಲಿ ಹಿತಾಸಕ್ತಿ ಸಂಘರ್ಷ ವಿಚಾರವಾಗಿ ಉತ್ತಮ ಆಡಳಿತ ಪಡೆಯಲು ತೀವ್ರವಾಗಿ ಹೋರಾಡಬೇಕಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು.

ಬಿಸಿಸಿಐ ಅಧ್ಯಕ್ಷ ಗಂಗೂಲಿ, ಎನ್​ಸಿಎ ಮುಖ್ಯಸ್ಥ ದ್ರಾವಿಡ್​ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರ ಅನೇಕ ಹುದ್ದೆಗಳನ್ನು ಹೊಂದಿದ್ದರಿಂದ ಒಂದು ಹುದ್ದೆಯನ್ನು ತ್ಯಜಿಸಬೇಕಾಗಿದೆ. ಇದೀಗ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸ್ಥಾನವನ್ನು ಪ್ರಶ್ನಿಸಿ ಸಂಜೀವ್​ ಗುಪ್ತಾ ಸುಪ್ರಿಂ ಕೋರ್ಟ್​ ನೇಮಿಸಿರುವ ಬಿಸಿಸಿಐ ಎಥಿಕ್ಸ್​ ಆಫೀಸರ್​ ಡಿ. ಕೆ ಜೈನ್​ ಅವರಿಗೆ ಪತ್ರ ಬರೆದಿದ್ದಾರೆ.

ಇನ್ನೂ ದೂರಿನಲ್ಲಿ ಹೇಳಿರುವಂತೆ ವಿರಾಟ್‌ ಕೊಹ್ಲಿ ಎರಡು ಹುದ್ದೆಯನ್ನು ಹೊಂದಿದ್ದಾರೆ. ಒಂದು ಟೀಂ ಇಂಡಿಯಾ ಆಟಗಾರನಾಗಿ ನಾಯಕತ್ವ ಪಡೆದಿರುವುದು ಮತ್ತೊಂದು ಆಟಗಾರರ ಜೊತೆಗಿನ ಒಪ್ಪಂದಗಳನ್ನು ನಿಭಾಯಿಸುವ ಕ್ರೀಡಾ ಮಾರ್ಕೆಟಿಂಗ್‌ ಸಂಸ್ಥೆಯೊಂದರ ನಿರ್ದೇಶಕನ ಹುದ್ದೆ ಅಲಂಕರಿಸಿರುವುದು. ಕೊಹ್ಲಿ, ಈ ಮೂಲಕ ಬಿಸಿಸಿಐ ಸಂವಿಧಾನದ ನಿಯಮ 38 (4)ರ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

Nasser Hussain: ಆ ಒಂದು ವಿಕೆಟ್ ಪಡೆಯಲು ನಾವು ಅದೆಷ್ಟು ಮೀಟಿಂಗ್ ನಡೆಸಿದ್ದೆವೋ..!

ಈ ನಡುವೆ ಇದೊಂದು ಪ್ರಚಾರ ಪಡೆಯುವ ಉದ್ದೇಶದಿಂದ ದೂರು ನೀಡಲಾಗಿದೆ ಎಂದು ವಿರಾಟ್ ಕೊಹ್ಲಿ ಅವರ ಆಪ್ತಮೂಲಗಳು ತಿಳಿಸಿವೆ. ಬಿಸಿಸಿಐ ಅಧಿಕಾರಿಯೊಬ್ಬರು ಕೂಡ ಈ ದೂರು, ಆಟಗಾರರ ಹೆಸರು ಕೆಡಿಸುವ ಪ್ರಯತ್ನವಾಗಿದೆ. ಬ್ಲಾಕ್​​ವೆುೕಲ್ ತಂತ್ರಗಳ ಭಾಗವೂ ಆಗಿದೆ. ಇದರ ಹಿಂದೆ ಬೆಟ್ಟಿಂಗ್ ಸಿಂಡಿಕೇಟ್ ಕೂಡ ಕೆಲಸ ಮಾಡಿರಬಹುದು. ಕಳೆದ 6 ವರ್ಷಗಳಿಂದಲೂ ಈ ರೀತಿಯ ದೂರುಗಳ ಮೂಲಕ ಪ್ರಚಾರ ಪಡೆದುಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.
Published by: Vinay Bhat
First published: July 6, 2020, 9:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading