ನಾಳೆ ಐಪಿಎಲ್ ಹರಾಜು; ಆರ್​ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?

ಈವರೆಗೆ ಒಮ್ಮೆಯೂ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗದ ಕೊಹ್ಲಿ ಪಡೆ, ಕಳೆದ ಎರಡು ಸೀಸನ್​ನಲ್ಲಂತು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಈ ಬಾರಿ ಯುವ ಆಟಗಾರರ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

Vinay Bhat | news18-kannada
Updated:December 18, 2019, 1:38 PM IST
ನಾಳೆ ಐಪಿಎಲ್ ಹರಾಜು; ಆರ್​ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?
ವಿರಾಟ್ ಕೊಹ್ಲಿ (ನಾಯಕ)
  • Share this:
ಬೆಂಗಳೂರು (ಡಿ. 18): ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ನಾಳೆ (ಡಿ. 19) ಕೋಲ್ಕತ್ತಾದಲ್ಲಿ ಇದೆ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲ ಫ್ರಾಂಚೈಸಿ ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ಆ ಪೈಕಿ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸುವತ್ತ ಚಿತ್ತ ನೆಟ್ಟಿದೆ. ಇದಕ್ಕಾಗಿ ಆರ್​ಸಿಬಿ ಇತ್ತೀಚೆಗಷ್ಟೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಯಾವ ಆಟಗಾರರನ್ನು ಖರೀದಿಸಬಹುದು ಎಂದು ಅಭಿಮಾನಿಗಳ ಬಳಿ ಪ್ರಶ್ನೆ ಇಟ್ಟಿತ್ತು.

India vs West Indies Live: ಟಾಸ್ ಗೆದ್ದ ವೆಸ್ಟ್​ ಇಂಡೀಸ್; ಕೊಹ್ಲಿ ಪಡೆಯಲ್ಲಿ ಮಹತ್ವದ ಬದಲಾವಣೆ

ಈವರೆಗೆ ಒಮ್ಮೆಯೂ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗದ ಕೊಹ್ಲಿ ಪಡೆ, ಕಳೆದ ಎರಡು ಸೀಸನ್​ನಲ್ಲಂತು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಈ ಬಾರಿ ಯುವ ಆಟಗಾರರ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆರ್​ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನೆ ಮಾಡಿದ್ದಾರೆ.

"ಆರ್​ಸಿಬಿ ಅಭಿಮಾನಿಗಳಿಗೆ ನಮಸ್ಕಾರ, ನಮ್ಮ ಮೇಲೆ ನೀವಿಟ್ಟಿರುವ ನಂಬಿಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ. ಈ ತಂಡದಲ್ಲಿ ನಾನು ಒಬ್ಬ. ನಮ್ಮ ತಂಡ ಬಲಿಷ್ಠವಾಗಲು ಮ್ಯಾನೆಜ್​ಮೆಂಟ್ ಸಕಲ ತಯಾರಿ ಮಾಡಿಕೊಂಡಿದೆ"

"ಈ ಹಿಂದೆ ನೀಡಿದಂತೆ ಮುಂದಿನ ಆವೃತ್ತಿಗೂ ನಿಮ್ಮೆಲ್ಲರ ಪ್ರೀತಿ ನಮಗೆ ಬೇಕು. 2020ರ ಐಪಿಎಲ್​ನಲ್ಲಿ ನಮ್ಮ ತಂಡ ಮತ್ತಷ್ಟು ಬಲಿಷ್ಠವಾಗಲಿದೆ. ಅಷ್ಟೆ ಅಲ್ಲ, ಈ ಬಾರಿಯ ಆಟವನ್ನು ನೀವೆಂದು ಮರೆಯಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ಹರಾಜು ಪ್ರಕ್ರಿಯೆಯನ್ನು ಕಾಯುತ್ತಿದ್ದೇನೆ" ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.

 


IPL 2020: ಐಪಿಎಲ್​ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರು ಇವರೇ

ಹರಾಜಿಗೂ ಮುನ್ನ ಆರ್​ಸಿಬಿ ಮಾರ್ಕಸ್ ಸ್ಟಾಯಿನಿಸ್, ಶಿಮ್ರೋನ್ ಹೆಟ್ಮೇರ್, ಕಾಲಿನ್ ಗ್ರ್ಯಾಂಡ್​ಹೋಮ್, ಟಿಮ್ ಸೌಥಿ, ಡೇಲ್ ಸ್ಟೈನ್, ಹೆನ್ರಿಚ್ ಕ್ಲಾಸೆನ್, ಅಕ್ಷದೀಪ್ ನಾಥ್, ನೇಥನ್ ಕೌಲ್ಟರ್ ನೈಲ್, ಪ್ರಯಾಸ್ ರೇ ಬರ್ಮನ್, ಕುಲ್ವಂತ್ ಕೇಜ್ರೋಲಿಯಾ, ಹಿಮ್ಮತ್ ಸಿಂಗ್, ಮಿಲಿಂದ್ ಕುಮಾರ್ ಅವರನ್ನು ಬಿಡುಗಡೆ ಮಾಡಿದೆ.

ಇನ್ನು ತನ್ನಲ್ಲೆ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ನವ್​ದೀಪ್ ಸೈನಿ.

First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading