India vs Australia: ಕಾಂಗರೂಗಳ ನಾಡಿನಲ್ಲಿ ಅಬ್ಬರಿಸಲಿರುವ ಭಾರತದ 4 ಆಟಗಾರರು ಇವರೇ ನೋಡಿ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ ಮೇಲೆ ಬೆಟ್ಟದಂತಹ ನಿರೀಕ್ಷೆಯಿದೆ. ಜೊತೆಗೆ ಉಪ ನಾಯಕನ ಪಟ್ಟ ಸಿಕ್ಕ ಕಾರಣ ಜವಾಬ್ದಾರಿಯಿಂದ ಬ್ಯಾಟ್ ಬೀಸಬೇಕಿದೆ.

Team India

Team India

 • Share this:
  ಕ್ರಿಕೆಟ್ ಲೋಕದ ಅತ್ಯಂತ ಬಲಿಷ್ಠ ತಂಡವಾದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕೊರೋನಾ ವೈರಸ್ ನಡುವೆ ಇದು ಭಾರತದ ಮೊದಲ ಅಂತರಾಷ್ಟ್ರೀಯ ಸರಣಿಯಾಗಿದ್ದು, ಸಂಪೂರ್ಣ ಸುರಕ್ಷತಾ ನಿಯಮದೊಂದಿಗೆ ಉಭಯ ತಂಡಗಳು ಮಹತ್ವದ ಸರಣಿ ಆಡಲಿದೆ. ಒಟ್ಟು 3 ಏಕದಿನ, 3 ಟಿ-20 ಮತ್ತು 4 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿವೆ. ನವೆಂಬರ್ 27ಕ್ಕೆ ಮೊದಲ ಏಕದಿನ ಪಂದ್ಯ ನಡೆಯುವ ಮೂಲಕ ಇಂಡೋ-ಆಸೀಸ್ ಕದನಕ್ಕೆ ಚಾಲನೆ ಸಿಗಲಿದೆ.

  ಹಾಗಾದ್ರೆ ಏಕದಿನ ಸರಣಿಯಲ್ಲಿ ಭಾರತ ಪರ ಅಬ್ಬರಿಸಲಿರುವ ಆಟಗಾರರು ಯಾರು?

  ಕೊಹ್ಲಿ ಸ್ಫೋಟಕ: ಕೆ. ಎಲ್ ರಾಹುಲ್ ತಂಡದ ವಿರುದ್ಧ ವಿರಾಟ್ ಬಳಗಕ್ಕೆ ಭರ್ಜರಿ ಜಯ: ಇಲ್ಲಿದೆ ಸ್ಕೋರ್

  ವಿರಾಟ್ ಕೊಹ್ಲಿ: ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದ ಉಪ ನಾಯಕ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಇದು ಪ್ರಮುಖ ಸರಣಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸಾಧನೆಕೂಡ ಉತ್ತಮವಾಗಿದೆ. ಆಸೀಸ್ ವಿರುದ್ಧದ 40 ಏಕದಿನ ಪಂದ್ಯಗಳಲ್ಲಿ ಕೊಹ್ಲಿ 1920 ರನ್ ಬಾರಿಸಿದ್ದಾರೆ. ಅಲ್ಲದೆ ಒಟ್ಟು 8 ಶತಕ ಸಿಡಿಸಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಸೆಂಚುರಿ ಬಾರಿಸಿದ ಭಾರತದ ಎರಡನೇ ಆಟಗಾರನಾಗಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್(9 ಶತಕ) ಇದ್ದಾರೆ.

  ಕೆ. ಎಲ್ ರಾಹುಲ್: ಆಸ್ಟ್ರೇಲಿಯಾ ಪ್ರವಾಸದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ ಮೇಲೆ ಬೆಟ್ಟದಂತಹ ನಿರೀಕ್ಷೆಯಿದೆ. ಜೊತೆಗೆ ಉಪ ನಾಯಕನ ಪಟ್ಟ ಸಿಕ್ಕ ಕಾರಣ ಜವಾಬ್ದಾರಿಯಿಂದ ಬ್ಯಾಟ್ ಬೀಸಬೇಕಿದೆ. ಐಪಿಎಲ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದ ರಾಹುಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್​ಮನ್ ಆಗಿ ಹೊರಹೊಮ್ಮಿದರು. ಹೀಗಾಗಿ ಸ್ಟೈಲೀಶ್ ಬ್ಯಾಟ್ಸ್​ಮನ್​ ಆಟ ಆಸೀಸ್ ಪಿಚ್​ನಲ್ಲಿ ಹೇಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.

  Rohit Sharma: ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲಿ ಅಬ್ಬರಿಸಲು ನಾನು ರೆಡಿ ಎಂದ ಹಿಟ್​ಮ್ಯಾನ್

  ಯಜುವೇಂದ್ರ ಚಹಾಲ್: ಸ್ಪಿನ್ ಜಾದೂಗಾರ ಯಜುವೇಂದ್ರ ಚಹಾಲ್ ಇತ್ತೀಚೆಗೆ ಪರಿಣಾಮಕಾರಿ ಬೌಲರ್ ಆಗಿ ಗೋಚಿಸುತ್ತಿದ್ದಾರೆ. ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ ಚಹಾಲ್​ಗಿದೆ. ಐಪಿಎಲ್ 2020 ರಲ್ಲಿ ಆರ್​ಸಿಬಿ ಪರ ಇವರು 15 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಚಹಾಲ್ ಆಡಿದ್ದು ಕೇವಲ 7 ಪಂದ್ಯಗಳನ್ನಷ್ಟೆ. ಕಿತ್ತಿರುವ ವಿಕೆಟ್ 15. ಕಳೆದ ವರ್ಷ ಆಸೀಸ್ ವಿರುದ್ಧ 10 ಓವರ್​ಗೆ 42 ರನ್ ನೀಡಿ 6 ವಿಕೆಟ್ ಕಿತ್ತು ಅಬ್ಬರಿಸಿದ್ದರು.

  ಜಸ್​ಪ್ರೀತ್ ಬುಮ್ರಾ: ಮಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಭಯ ಫಿಂಚ್ ಪಡೆಗೆ ಈಗಾಗಲೇ ಶುರುವಾಗಿದೆ. ಕಳೆದ ವರ್ಷ ಆಸೀಸ್ ಏಕದಿನ ಸರಣಿಯಿಂದ ಬುಮ್ರಾ ವಿಶ್ರಾಂತಿ ಪಡೆದಿದ್ದರು. ಈ ಬಾರಿ ಬುಮ್ರಾ ಬೆಂಕಿಯ ಚೆಂಡು ಯಾವರೀತಿ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ.
  Published by:Vinay Bhat
  First published: