HOME » NEWS » Sports » CRICKET VIRAT KOHLI STEVE SMITH THE BEST FORTUNATE TO PLAY AGAINST THEM KANE WILLIAMSON ZP

Kane Williamson: ನಾನು ನಂಬರ್ 1, ಆದರೂ ಸ್ಮಿತ್ ಕೊಹ್ಲಿಯೇ ಬೆಸ್ಟ್​ ಎಂದ ಕೇನ್ ವಿಲಿಯಮ್ಸನ್

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದು, ಇದರಿಂದ ಅಂಕಪಟ್ಟಿಯಲ್ಲಿ ಪಾಯಿಂಟ್ ಏರಿಕೆಯಾಗಿಲ್ಲ. ಇದಗ್ಯೂ 2ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಭಾರತದ ವಿರುದ್ಧ 2 ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗಿರುವ ಸ್ಟೀವ್ ಸ್ಮಿತ್ ಸದ್ಯ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

news18-kannada
Updated:January 1, 2021, 4:55 PM IST
Kane Williamson: ನಾನು ನಂಬರ್ 1, ಆದರೂ ಸ್ಮಿತ್ ಕೊಹ್ಲಿಯೇ ಬೆಸ್ಟ್​ ಎಂದ ಕೇನ್ ವಿಲಿಯಮ್ಸನ್
Virat Kohli-Kane Williamson
  • Share this:
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೂತನ ಟೆಸ್ಟ್ ರ್ಯಾಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಗ್ರಸ್ಥಾನ ಅಲಂಕರಿಸಿದ್ದಾರೆ. 2015ರ ಬಳಿಕ ಮತ್ತೊಮ್ಮೆ ವಿಲಿಯಮ್ಸನ್ ನಂಬರ್ 1 ಟೆಸ್ಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

890 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದಿರಿಸಿರುವ ಕೇನ್‌ ವಿಇಲಿಯಮ್ಸನ್ ಉತ್ತಮ ಫಾರ್ಮ್​ನಲ್ಲಿದ್ದು, ಪ್ರಸ್ತುತ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಉತ್ತಮ ಬ್ಯಾಟಿಂಗ್ ಫಲವಾಗಿ ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಸಾಧ್ಯವಾಗಿದೆ.

ಈ ಬಗ್ಗೆ ಮಾತನಾಡಿರುವ ಕೇನ್, ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಅವರೇ ಟೆಸ್ಟ್​ನಲ್ಲಿ ಬೆಸ್ಟ್​. ಅವರಿಬ್ಬರನ್ನು ಹಿಂದಿಕ್ಕಿ ಆ ಸ್ಥಾನದಲ್ಲಿ ನಾನು ಕಾಣಿಸಿಕೊಂಡಿರುವುದು ನಿಜಕ್ಕೂ ನನಗೆ ಅಚ್ಚರಿ ತಂದಿದೆ. ಏಕೆಂದರೆ ಅವರಿಬ್ಬರೂ ವರ್ಷ ಪೂರ್ತಿ ಸ್ಥಿರ ಪ್ರದರ್ಶನ ನೀಡುತ್ತಾರೆ. ಅಂತಹ ಆಟಗಾರರ ಎದುರು ಆಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ವಿಲಿಯಮ್ಸನ್ ಹೇಳಿದ್ದಾರೆ.

ಇನ್ನು ಕೇನ್ ವಿಲಿಯಮ್ಸನ್ 2015ರಲ್ಲಿ ಅಲ್ಪಾವಧಿವರೆಗೆ ಟೆಸ್ಟ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಟೆಸ್ ರ್ಯಾಂಕಿಂಗ್ ಪಟ್ಟಿಯಲ್ಲಿ 51 ದಿನಗಳ ಕಾಲ ನಂ.1 ಸ್ಥಾನದಲ್ಲಿದ್ದರು. ಇನ್ನು ಆಸ್ಟ್ರೇಲಿಯಾ ದಾಂಡಿಗ ಸ್ಟೀವ್ ಸ್ಮಿತ್ 313 ದಿನಗಳ ಕಾಲ ಅಗ್ರಸ್ಥಾನದಲ್ಲಿ ಮಿಂಚಿದ್ದರು.

ಸದ್ಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದು, ಇದರಿಂದ ಅಂಕಪಟ್ಟಿಯಲ್ಲಿ ಪಾಯಿಂಟ್ ಏರಿಕೆಯಾಗಿಲ್ಲ. ಇದಗ್ಯೂ 2ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಭಾರತದ ವಿರುದ್ಧ 2 ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗಿರುವ ಸ್ಟೀವ್ ಸ್ಮಿತ್ ಸದ್ಯ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
Published by: zahir
First published: January 1, 2021, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories