ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ 3 ನೇ ದಿನ ಲಾರ್ಡ್ಸ್ ಬಾಲ್ಕನಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾಗಿನ್ ಡ್ಯಾನ್ಸ್ ಮಾಡಿದ್ದಾರೆ. ಕೊಹ್ಲಿ ಡ್ಯಾನ್ಸ್ ವೈರಲ್ ಆಗಿದ್ದು, ನೆಟ್ಟಿಗರಯ ಮಿಮ್ಸ್, ಟ್ರೋಲ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಮೈದಾನದಲ್ಲಿ, ಹೊರಗೆ ಹಲವು ಸಲ ತಮ್ಮ ಡ್ಯಾನ್ಸ್ನ ತೋರಿಸಿದ್ದಾರೆ. ಇದೇ ರೀತಿ ಲಾರ್ಡ್ಸ್ ಬಾಲ್ಕನಿಯಲ್ಲಿ ಮಾಡಿರುವ ನಾಗಿನ್ ಡ್ಯಾನ್ಸ್ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೊಹ್ಲಿ ಡ್ಯಾನ್ಸ್ಗೆ ಪಕ್ಕದಲ್ಲೇ ಇದ್ದ ಕೆಎಲ್ ರಾಹುಲ್, ಮಯಾಂಕ್ ಅಗರ್‌ವಾಲ್ ಮತ್ತು ಮೊಹಮ್ಮದ್ ಸಿರಾಜ್ ನಗೆಯಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. 2002 ರಲ್ಲಿ ಇಂಗ್ಲೆಂಡ್ ವಿರುದ್ಧ ನ್ಯಾಟ್ವೆಸ್ಟ್ ಟ್ರೋಫಿ ಫೈನಲ್ ಗೆದ್ದ ನಂತರ ಲಾರ್ಡ್ಸ್ ಬಾಲ್ಕನಿಯಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿಯ ಶರ್ಟ್ ಬಿಚ್ಚಿ ಸುತ್ತಿ ಬಿಸಾಡಿದ್ದರು. ಇಂದಿನ ಕೊಹ್ಲಿ ಡ್ಯಾನ್ಸ್ 2002ರ ಘಟನೆಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ನೆನಪಿಸಿದೆ. ಅಂದಿನ ಘಟನೆಗೆ ಹೋಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಮಿಮ್ಸ್ಗಳನ್ನು ಸೃಷ್ಟಿಸಿ ಹರಿಬಿಡುತ್ತಿದ್ದಾರೆ.
ವಿರಾಟ್ ಕೊಹ್ಲಿಯ ನಾಗಿನ್ ಡ್ಯಾನ್ಸ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ..
Captain's at Lord's Balcony. What a fall !
2002. 2021 pic.twitter.com/NtqD22cmW6
— रितिक (@OpeakyP) August 13, 2021
Virat Kohli introducing the Naagin Dance at the famous balcony of Lord's.
(📷 TL @OpeakyP ) #INDvENG pic.twitter.com/bphToeki44
— Ansuman Rath 🇮🇳 (@_AnsumanRath) August 13, 2021
Virat: A lead of 26 runs isn't a matter of concern
Kohli: Pujara and Rahane's form is not a matter of concern
On camera, let's dance.#INDvENG pic.twitter.com/piXbMN9TMW
— Geetesh Makkar (@Geetcasm) August 14, 2021
ಆರಂಭಿಕ ಆಟಗಾರರಾದ ರಾಹುಲ್ (5) ಮತ್ತು ರೋಹಿತ್ ಶರ್ಮಾ (21) ಬೇಗನೆ ಔಟಾದ ನಂತರ ಕೊಹ್ಲಿ ಬ್ಯಾಟ್ ಮಾಡಿದರು. ಕೊಹ್ಲಿ ಉತ್ತಮ ಆರಂಭವನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ