Virat Kohli: 100ನೇ ಟೆಸ್ಟ್ ಬಗ್ಗೆ 101 ನೆನಪು ಹಂಚಿಕೊಂಡ ಕಿಂಗ್ ಕೊಹ್ಲಿ

Virat Kohli: ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿತ್ತು. ಈ ನೂರು ಟೆಸ್ಟ್‌ಗಳಲ್ಲಿ ಸಾಕಷ್ಟು ಕ್ರಿಕೆಟ್‌ ಆಡಿದ್ದೇನೆ. ಇಷ್ಟು ಪಂದ್ಯಗಳನ್ನಾಡಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ಇಂಡಿಯಾದ (India)ರನ್‌ ಮಷಿನ್‌(Run Machine).. ಕ್ರೇಜ್ ಕಾ ಬಾಪ್ ವಿರಾಟ್‌ ಕೊಹ್ಲಿ(Virat Kohli) ಜನಕ್ಕೆ ಎಂಟ್ರಿ ಕೊಟ್ರೆ ಅಭಿಮಾನಿಗಳು ಫುಲ್ ಖುಷ್..ಟೆಸ್ಟ್ ಕ್ರಿಕೆಟ್(Test Cricket) ಇಷ್ಟ ಪಡದವರಿಗೂ ಟೆಸ್ಟ್ ಕ್ರಿಕೆಟ್ ಇಷ್ಟ ಪಡುವಂತೆ ಮಾಡಿದ್ದು ಕಿಂಗ್ ಕೊಹ್ಲಿ.. ಇಂಥಹ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ 100ನೇ ಟೆಸ್ಟ್ ಪಂದ್ಯ ಆಡುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇಂದು ಮೊಹಾಲಿಯಲ್ಲಿ(Mohali) ನಡೆಯುವ ಐತಿಹಾಸಿಕ ಪಂದ್ಯದಲ್ಲಿ (Historical Match)ವಿರಾಟ್ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯವನ್ನ ಆಡಲಿದ್ದು, ಅಭಿಮಾನಿಗಳು ಈ ಪಂದ್ಯವನ್ನ ನೋಡಲು ಕಾತುರದಿಂದ ಕಾಯತ್ತಿದ್ದಾರೆ

    100ನೇ ಪಂದ್ಯದ ಬಗ್ಗೆ ವಿರಾಟ್ ಮನದಾಳದ ಮಾತು..

    ಟೆಸ್ಟ್ ಕ್ರಿಕೆಟ್‌ನಲ್ಲಿ ನೂರು ಪಂದ್ಯಗಳನ್ನು ಆಡಲು ನನಗೆ ಸಾಧ್ಯವಾಗುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನ ಪ್ರಕಾರ ನಿಜವಾದ ಕ್ರಿಕೆಟ್‌ ಎಂದರೆ ಟೆಸ್ಟ್ ಕ್ರಿಕೆಟ್‌ ಎಂದು ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಕೊಹ್ಲಿ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿತ್ತು. ಈ ನೂರು ಟೆಸ್ಟ್‌ಗಳಲ್ಲಿ ಸಾಕಷ್ಟು ಕ್ರಿಕೆಟ್‌ ಆಡಿದ್ದೇನೆ. ಇಷ್ಟು ಪಂದ್ಯಗಳನ್ನಾಡಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ.

    ದೇವರ ದಯೆ ನನ್ನ ಮೇಲಿದೆ. ಫಿಟ್‌ನೆಸ್ ಕಾಪಾಡಿಕೊಳ್ಳಲು ಪರಿಶ್ರಮ ಹಾಕಿದ್ದೇನೆ. ನನ್ನ ಪಾಲಿಗೆ, ನನ್ನ ಕುಟುಂಬ ಮತ್ತು ತರಬೇತುದಾರರ ಪಾಲಿಗೆ ಇದು ಬಹುದೊಡ್ಡ ಕ್ಷಣ. ತುಂಬಾ ವಿಶೇಷವಾದ ಸಂದರ್ಭವಿದು' ಎಂದು ವಿರಾಟ್ ಹೇಳಿಕೊಂಡಿದ್ದಾರೆ.



    ಇದನ್ನೂ ಓದಿ: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    71ನೇ ಶತಕ ಬಾರಿಸ್ತರಾ ವಿರಾಟ್..

    ಭಾರತೀಯ ಟೆಸ್ಟ್ ಕ್ರಿಕೆಟ್ ಗೆ ಹೊಸ ರೂಪ ಕೊಟ್ಟ ವಿರಾಟ್ ಕೊಹ್ಲಿ ಈ ಪಂದ್ಯ ಸಾಕಷ್ಟು ಅವಿಸ್ಮರಣೀಯವಾಗಲಿದೆ. ಅಲ್ಲದೆ ಈ ಪಂದ್ಯದ ಮೂಲಕ ವಿರಾಟ್ ತಮ್ಮ ಮತ್ತೊಂದು ಶತಕದ ಬರ ನೀಗಿಸುವ ತವಕದಲ್ಲಿ ಇದ್ದಾರೆ.

    ಹೌದು, ವಿರಾಟ್ ಕೊಹ್ಲಿ 71ನೇ ಶತಕಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. 2019 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕ ಬಾರಿಸಿದ್ದರು.

    ಇದಾದ ಬಳಿಕ ಕೊಹ್ಲಿಯ ಬ್ಯಾಟ್​​ನಿಂದ ಶತಕ ಮೂಡಿಬಂದು 2 ವರ್ಷಗಳೇ ಕಳೆದಿವೆ. ಹೀಗಾಗಿಯೇ ಮೊಹಾಲಿ ಮೈದಾನದಲ್ಲಿ 100ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಬ್ಯಾಟ್​ನಿಂದ ಅಭಿಮಾನಿಗಳು 71ನೇ ಶತಕವನ್ನು ನಿರೀಕ್ಷಿಸುತ್ತಿದ್ದಾರೆ








    View this post on Instagram






    A post shared by Virat Kohli (@virat.kohli)






    ಇನ್ನು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟು ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ್ರು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಮೈಕಾದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಸರಣಿಗೆ ಸಚಿನ್ ತೆಂಡುಲ್ಕರ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದ್ರೆ ವಿರಾಟ್ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 76 ರನ್. ಹೀಗಾಗಿ ಮುಂದಿನ ಇಂಗ್ಲೆಂಡ್ ಸರಣಿಗೆ ಟೆಸ್ಟ್ ತಂಡದಿಂದ ಹೊರಬೀಳಬೇಕಾಯ್ತು.

    ತವರಿನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ವಿರಾಟ್ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಂಡ್ರು. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದಿದ್ದ ಈ ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಇನಿಂಗ್ಸ್ ಗಳಲ್ಲೂ ಅರ್ಧಶತಕ ದಾಖಲಿಸಿದ್ದರು.

    99 ಪಂದ್ಯ...7962 ರನ್‌...

    ನಾಯಕನಾಗಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದರು.2014-15ರ ಋತುವಿನಲ್ಲಿ ಎಂಎಸ್ ಧೋನಿ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಹಠಾತ್ ಆಗಿ ರಾಜೀನಾಮೆ ನೀಡಿದ ಬಳಿಕ, ಆಸ್ಟ್ರೇಲಿಯಾ ಪ್ರವಾಸದ ಸರಣಿಯಲ್ಲಿಯೇ ಪೂರ್ಣ ಪ್ರಮಾಣದ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದ ವಿರಾಟ್ ಕೊಹ್ಲಿ, ಈವರೆಗೂ ಅಡಿದ 68 ಪಂದ್ಯಗಳಿಂದ 40 ಗೆಲುವು ದಾಖಲಿಸಿದ ಶ್ರೇಯ ಹೊಂದಿದ್ದಾರೆ. ಆ ಮೂಲಕ ಗೆಲುವುಗಳ ಲೆಕ್ಕಾಚಾರದಲ್ಲಿ ಭಾರತೀಯ ಕ್ರಿಕೆಟ್ ನ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ಶ್ರೇಯ ಇವರದಾಗಿದೆ.

    ವಿದೇಶಿ ಮತ್ತು ತವರಿನಲ್ಲಿ ಟೀಮ್ ಇಂಡಿಯಾ ಅಪ್ರತಿಮ ಸಾಧನೆ ಮಾಡಿತ್ತು. ಅಷ್ಟೇ ಅಲ್ಲ, ವಿರಾಟ್ ಸಾರಥ್ಯದಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಿದ್ದರು. .ಇನ್ನು 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್ 99 ಪಂದ್ಯಗಳಿಂದ 7962 ರನ್‌ಗಳನ್ನು ಗಳಿಸಿದ್ದಾರೆ.

    ಕೊಹ್ಲಿ ನಾಯಕತ್ವದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿಸಿದ್ದ  ಟೀಂ ಇಂಡಿಯಾ

    ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರುವರೆ ವರ್ಷಗಳ ಕಾಲ(42 ತಿಂಗಳು) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸತತ ನಂ.1 ಸ್ಥಾನ ಕಾಯ್ದುಕೊಳ್ಳುವ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನ ಸಾಮ್ರಾಟನಾಗಿ ಮೆರೆದಾಡಿತ್ತು. 2016ರ ಅಕ್ಟೋಬರ್‌ನಿಂದ 2020ರ ಮಾರ್ಚ್‌ ಆರಂಭದವರೆಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು.

    ಇದನ್ನೂ ಓದಿ: ICC Women World Cupಗೆ ಕ್ಷಣಗಣನೆ: ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೆಣಸಲಿರುವ ಭಾರತ

    ಇದುವರೆಗೂ 100 ಟೆಸ್ಟ್ ಪಂದ್ಯ ಆಡಿದ ಭಾರತೀಯರು

    ಮೊಹಾಲಿಯಲ್ಲಿ ನಡೆಯುವ ಟೆಸ್ಟ್ ಪಂದ್ಯದ ಮೂಲಕ 100 ಟೆಸ್ಟ್‌ ಗಳನ್ನು ಆಡಿದ 11 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ (200), ರಾಹುಲ್ ದ್ರಾವಿಡ್ (163), ವಿವಿಎಸ್ ಲಕ್ಷ್ಮಣ್ (134), ಅನಿಲ್ ಕುಂಬ್ಳೆ (132), ಕಪಿಲ್ ದೇವ್ (131), ಸುನಿಲ್ ಗವಾಸ್ಕರ್ (125),,ದಿಲೀಪ್ ವೆಂಗ್‌ಸರ್ಕರ್ (116), ಸೌರವ್ ಗಂಗೂಲಿ (113), ಇಶಾಂತ್ ಶರ್ಮಾ (105), ಹರ್ಭಜನ್ ಸಿಂಗ್ (103), ಮತ್ತು ವೀರೇಂದ್ರ ಸೆಹ್ವಾಗ್ (103) ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
    Published by:ranjumbkgowda1 ranjumbkgowda1
    First published: