ಫೋರ್ಬ್ಸ್​ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ

ವಿರಾಟ್​​ ಕೊಹ್ಲಿ ಫೋರ್ಬ್ಸ್ ಪಟ್ಟಿಯ ಕೊನೆಯ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿ ಲಿಯೋನೆಲ್ ಮೆಸ್ಸಿ ಹೆಸರಿದೆ.

Latha CG | news18
Updated:June 12, 2019, 12:43 PM IST
ಫೋರ್ಬ್ಸ್​ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
  • News18
  • Last Updated: June 12, 2019, 12:43 PM IST
  • Share this:
ಗರಿಷ್ಠ ಸಂಭಾವನೆ ಪಡೆಯುತ್ತಿರುವ ವಿಶ್ವದ 100 ಆಟಗಾರರ ನೂತನ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ವಿಶ್ವದ 100 ಕ್ರೀಡಾಪಟುಗಳ ಪೈಕಿ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಈ ಬಾರಿ ಕೊನೆಯ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ 83 ನೇ ಸ್ಥಾನ ಪಡೆದಿದ್ದ ಕೊಹ್ಲಿ ಈಗ 100 ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಫೋರ್ಬ್ಸ್ ಪಟ್ಟಿ ಪ್ರಕಾರ, ಜಾಹಿರಾತಿನ 2.1 ಕೋಟಿ ಡಾಲರ್ ಸೇರಿ ಕೊಹ್ಲಿ ಒಟ್ಟು 28 ಕೋಟಿ ರೂಪಾಯಿ ಗಳಿಕೆ ಮಾಡುತ್ತಾರೆ. 12 ತಿಂಗಳಲ್ಲಿ ಕೊಹ್ಲಿ ಗಳಿಕೆ 200 ಕೋಟಿ ರೂಪಾಯಿ ದಾಟಿದೆ. ಹಿಂದಿನ ವರ್ಷ ಕೊಹ್ಲಿ 83ನೇ ಸ್ಥಾನದಲ್ಲಿದ್ದರು. ಈ ಬಾರಿ ಫೋರ್ಬ್ಸ್ ಪಟ್ಟಿಯ 100 ನೇ ಸ್ಥಾನದಲ್ಲಿ ಕೊಹ್ಲಿ ಹೆಸರಿದೆ. ಅದಾಗ್ಯೂ ಈ ಬಾರಿ ಜಾಹೀರಾತಿನ ಗಳಿಕೆ 10 ಲಕ್ಷ ಡಾಲರ್ ಏರಿಕೆಯಾಗಿದೆ.

ಇದನ್ನೂ ಓದಿ: IND vs PAK: ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ-ಪಾಕ್​ ಪಂದ್ಯ ನಡೆಯೋದೆ ಡೌಟ್!; ಯಾಕೆ ಗೊತ್ತಾ?

ವಿರಾಟ್​​ ಕೊಹ್ಲಿ ಫೋರ್ಬ್ಸ್ ಪಟ್ಟಿಯ ಕೊನೆಯ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿ ಲಿಯೋನೆಲ್ ಮೆಸ್ಸಿ ಹೆಸರಿದೆ. ಎರಡನೇ ಸ್ಥಾನದಲ್ಲಿ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿದೆ. ಟೆನಿಸ್ ಆಟಗಾರ ರೋಜರ್ ಫೆಡರರ್ ಐದನೇ ಸ್ಥಾನದಲ್ಲಿದ್ದಾರೆ. 23ನೇ ಸ್ಥಾನದಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಸೆರೆನಾ ವಿಲಿಯಮ್ಸ್ ಹೆಸರಿದೆ.ಅವರು ಈ ಬಾರಿಯ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳಾ ಆಟಗಾರ್ತಿಯಾಗಿದ್ದಾರೆ.

First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ