HOME » NEWS » Sports » CRICKET VIRAT KOHLI SINGS NATIONAL ANTHEM AS HE ATTENDS PRO KABADDI 2019 IN MUMBAI VB

Pro Kabaddi 2019: ವಿರಾಟ್ ಕೊಹ್ಲಿ ಸಾನಿಧ್ಯ; ಪಲ್ಟನ್ ವಿರುದ್ಧ ಯು ಮುಂಬಾಗೆ ಭರ್ಜರಿ ಗೆಲುವು

ಬಲಿಷ್ಠ ಯು ಮುಂಬಾ ತಂಡ ಮೊದಲ ರೈಡ್‌ನಲ್ಲೇ ಅಂಕದ ಖಾತೆ ತೆರೆಯಿತು. ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು.

Vinay Bhat | news18
Updated:July 27, 2019, 10:24 PM IST
Pro Kabaddi 2019: ವಿರಾಟ್ ಕೊಹ್ಲಿ ಸಾನಿಧ್ಯ; ಪಲ್ಟನ್ ವಿರುದ್ಧ ಯು ಮುಂಬಾಗೆ ಭರ್ಜರಿ ಗೆಲುವು
ಪಲ್ಟನ್ ಹಾಗೂ ಯು ಮುಂಬಾ ಪಂದ್ಯದ ದೃಶ್ಯದ ಜೊತೆ ವಿರಾಟ್ ಕೊಹ್ಲಿ
  • News18
  • Last Updated: July 27, 2019, 10:24 PM IST
  • Share this:
ಬೆಂಗಳೂರು (ಜು. 27): ಪ್ರೋ ಕಬಡ್ಡಿ ಲೀಗ್​ನ 7ನೇ ಆವೃತ್ತಿ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಪುಣೇರಿ ಪಲ್ಟನ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಯು ಮುಂಬಾ ಭರ್ಜರಿ ಗೆಲುವು ಸಾಧಿಸಿದೆ.

ವಿಶೇಷ ಎಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾನಿಧ್ಯದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವು 33-23ರ ಅಂತರದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಗೆಲುವು ದಾಖಲಿಸಿತು. ಕೊಹ್ಲಿ ಆಗಮನ ಅಭಿಮಾನಿಗಳಿಗೆ ಮಾತ್ರವಲ್ಲದೆ ಕಬಡ್ಡಿ ಪಟುಗಳಿಗೆ ಕೂಡ ಹೊಸ ಉತ್ಸಾಹ ನೀಡಿತ್ತು.  ಜೊತೆಗೆ ವಿರಾಟ್ ಕೊಹ್ಲಿ ರಾಷ್ಟ್ರ ಗೀತೆ ಹಾಡಿದರು.

Virat Kohli Sings National Anthem as He Attends Pro Kabaddi 2019 in Mumbai
ರಾಷ್ಟ್ರಗೀತೆ ಹಾಡುತ್ತಿರುವ ವಿರಾಟ್ ಕೊಹ್ಲಿ


ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಕ್ಯೂಟ್ ಆಟಗಾರ್ತಿಯರ ಮುದ್ದು ಫೋಟೋ ಇಲ್ಲಿದೆ ನೋಡಿ

 ಬಲಿಷ್ಠ ಯು ಮುಂಬಾ ತಂಡ ಮೊದಲ ರೈಡ್‌ನಲ್ಲೇ ಅಂಕದ ಖಾತೆ ತೆರೆಯಿತು. ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಅಲ್ಲದೆ ಮುಂಬಾ 11-9ರ ಅಂತರದ ಮುನ್ನಡೆ ಕಾಯ್ದುಕೊಂಡಿತು.

ಪಂದ್ಯದ ದ್ವಿತಿಯಾರ್ಧ ಮತ್ತಷ್ಟು ರೋಚಕತೆ ಪಡೆಯಿತು. ಪುಣೇರಿ ಪಲ್ಟಾನ್‌ಗೆ ಅಂಕ ಗಳಿಸಲು ಹೆಚ್ಚಿನ ಅವಕಾಶ ನೀಡಲಿಲ್ಲ. ಇತ್ತ ರೈಡ್ ಹಾಗೂ ಟ್ಯಾಕಲ್ ಮೂಲಕ ಮುಂಬೈ ಅಂಕ ಹೆಚ್ಚಿಸಿತು. ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಸವಾರಿ ಮಾಡಿದ ಮುಂಬಾ ಗೆಲುವಿನತ್ತ ಮುನ್ನಡೆಯಿತು. ಅಂತಿಮವಾಗಿ ಯು ಮುಂಬಾ 33-23 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು.

ಮುಂಬಾ ಪರ ಮಿಂಚಿದ ಅಭಿಷೇಕ್ 5 ಹಾಗೂ ರೋಹಿತ್ ಬಾಲಿಯನ್ 4 ಅಂಕಗ ಕಲೆಹಾಕುವಲ್ಲಿ ಯಶಸ್ವಿಯಾದರು. ಸುರಿಂಧರ್ ಸಿಂಗ್ 4, ಫಜೆಲ್ ಅತ್ರಚಲಿ 4 ಹಾಗೂ ಆಲ್‌ರೌಂಡರ್ ಪ್ರದರ್ಶನ ನೀಡಿದ ಸಂದೀಪ್ ನರ್ವಾಲ್ ನಾಲ್ಕು ಅಂಕಗಳನ್ನು ಕಲೆ ಹಾಕಿ ಉತ್ತಮ ಪದರ್ಶನ ನೀಡಿದರು.

 First published: July 27, 2019, 10:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories